ನವದೆಹಲಿ:ಕೋವಿಡ್ 19 ಸೋಂಕು ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಅಪರಾಧ ದಂಡ ಸಂಹಿತೆ ಸೆಕ್ಷನ್ 144 ಅನ್ನು ಜೂನ್ 30ರವರೆಗೆ ಹೇರಲಾಗಿದೆ ಎಂದು ನೋಯ್ಡಾ ಅಧಿಕಾರಿಗಳು ಮಂಗಳವಾರ(ಜೂನ್ 01) ತಿಳಿಸಿದ್ದಾರೆ.
ಇದನ್ನೂ ಓದಿ:ಸಿನಿಮಾ ಅವಕಾಶ ಹೆಸರಲ್ಲಿ ಸತತ ಅತ್ಯಾಚಾರ: ಬಾಲಿವುಡ್ ನ 9 ಮಂದಿಯ ವಿರುದ್ಧ ಮಾಡೆಲ್ ದೂರು
ಗೌತಮ್ ಬುದ್ಧ ನಗರದಲ್ಲಿ 68 ನೂತನ ಕೋವಿಡ್ ಪ್ರಕರಣ ಪತ್ತೆಯಾದ ನಂತರ ಹೆಚ್ಚುವರಿ ಡೆಪ್ಯುಟಿ ಪೊಲೀಸ್ ಕಮಿಷನರ್ ಶ್ರದ್ಧಾ ಪಾಂಡೆ ಕೋವಿಡ್ ಗೆ ಸಂಬಂಧಿಸಿದಂತೆ ನೂತನ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿರುವುದಾಗಿ ವರದಿ ಹೇಳಿದೆ.
ನೋಯ್ಡಾದಲ್ಲಿ ಕೋವಿಡ್ 19 ಸೋಂಕು ಪ್ರಕರಣಗಳ ಸಂಖ್ಯೆ 62,356ಕ್ಕೆ ಏರಿಕೆಯಾಗಿದ್ದು, 1073 ಸಕ್ರಿಯ ಕೋವಿಡ್ ಪ್ರಕರಣಗಳು ವರದಿಯಾಗಿದೆ. ಕಂಟೈನ್ ಮೆಂಟ್ ವಲಯಗಳಲ್ಲಿ ಮೆಡಿಕಲ್ ಮತ್ತು ತುರ್ತು ಸೇವೆ ಹೊರತುಪಡಿಸಿ ಉಳಿದೆಲ್ಲಾ ಚಟುವಟಿಕೆ ಬಂದ್ ಎಂದು ವರದಿ ತಿಳಿಸಿದೆ.
ಪೂರ್ವಾನುಮತಿ ಪಡೆಯದೇ ಯಾವುದೇ ಸಾಂಸ್ಕೃತಿಕ, ರಾಜಕೀಯ, ಸಾಮಾಜಿಕ ಹಾಗೂ ಮನೋರಂಜನಾ ಕಾರ್ಯಕ್ರಮ ನಡೆಸುವಂತಿಲ್ಲ. ಕ್ರೀಡಾ ಚಟುವಟಿಕೆ ಮತ್ತು ಜಾತ್ರೆಗಳನ್ನು ನಿಷೇಧಿಸಲಾಗಿದೆ ಎಂದು ವರದಿ ತಿಳಿಸಿದೆ.