ಹೊಸದಿಲ್ಲಿ: ಸದ್ಯದಲ್ಲೇ ನಾವು-ನೀವು ಭಾರತೀಯ ನೌಕಾಪಡೆಯ ಯುದ್ಧದ ಇತಿಹಾಸವನ್ನು ಓದಬಹುದು. “ಸ್ವಾತಂತ್ರ್ಯದ ಅಮೃತ ಮಹೋತ್ಸವ’ದ ಭಾಗವಾಗಿ ಕೇಂದ್ರ ಮಾಹಿತಿ, ಪ್ರಸಾರ ಸಚಿವಾಲಯವು ಭಾರತೀಯ ನೌಕಾಪಡೆಯ ಸಹಭಾಗಿತ್ವದಲ್ಲಿ ನೌಕಾಪಡೆಯ ಯುದ್ಧದ ಇತಿ ಹಾಸ ಗಳನ್ನು ದಾಖಲೀಕರಿಸುವ ಹಲವು ಸಂಪುಟಗಳನ್ನು ಒಳಗೊಂಡ ಕೃತಿಗಳನ್ನು ಪ್ರಕಟಿಸಲು ನಿರ್ಧರಿಸಿದೆ.
ಈವರೆಗೆ ದಾಖಲಾಗಿರುವ ಇತಿಹಾಸದಲ್ಲಿ ಹೆಚ್ಚು ಉಲ್ಲೇಖಗೊಂಡಿರದ ನೌಕಾಸಮರಗಳ ಕುರಿತ ಮಾಹಿತಿಯನ್ನು ಈ ಪುಸ್ತಕಗಳು ಒಳಗೊಂಡಿರಲಿವೆ.
ವೇದಗಳ ಕಾಲದಿಂದ…: ವೇದಗಳ ಕಾಲದಲ್ಲಿನ ನೌಕಾ ಇತಿಹಾಸದಿಂದ ಹಿಡಿದು, ಮಧ್ಯಕಾಲೀನ ಯುಗ ದಲ್ಲಿ ನಡೆದ ನೌಕಾ ಸಮರಗಳು, ಮರಾಠರ ಯುದ್ಧಗಳು, ಮೊದಲ ವಿಶ್ವಯುದ್ಧ, 2ನೇ ವಿಶ್ವಯುದ್ಧದವರೆಗೆ ಮಾತ್ರ ವಲ್ಲದೇ, ಭಾರತದ ಸ್ವಾತಂತ್ರ್ಯಾ ನಂತರದ ಯುದ್ಧಗಳ ಇತಿಹಾಸವನ್ನೂ ಈ ಕೃತಿಗಳಲ್ಲಿ ದಾಖಲಿಸಲು ನಿರ್ಧರಿಸ ಲಾಗಿದೆ. ಈ ಕುರಿತು ಅಗಾಧ ಪ್ರಮಾಣದ ಮಾಹಿತಿ ದೊರೆಯುವ ಕಾರಣ, 3 ಸಂಪುಟಗಳಲ್ಲಿ ಕೃತಿಗಳು ಪ್ರಕಟವಾ ಗುವ ನಿರೀಕ್ಷೆಯಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮುಂದಿನ ಆಗಸ್ಟ್‌ಗೆ ಪ್ರಕಟ: ಸಚಿವಾಲಯದ ಮಾಧ್ಯಮ ಘಟಕದಡಿ ಬರುವ ಪಬ್ಲಿಕೇಶನ್ ವಿಭಾಗವು ಸರಣಿ ಪುಸ್ತಕಗಳನ್ನು ಪ್ರಕಟಿಸಲು ನಿರ್ಧರಿಸಿದ್ದು, ಅವುಗಳ ಪೈಕಿ ನೌಕಾಯುದ್ಧಗಳ ಇತಿಹಾ ಸವೂ ಸೇರಿದೆ. 2022ರ ಆಗಸ್ಟ್ ತಿಂಗಳ ವೇಳೆಗೆ ಈ ಎಲ್ಲ ಕೃತಿಗಳೂ ಲೋಕಾರ್ಪಣೆಗೊಳ್ಳಲಿವೆ.
ನೌಕಾ ಕಮಾಂಡರ್‌ಗಳಾದ ಕನ್ಹೋಜಿ ಆಂಗ್ರೆ, ರಾಜಾ ಮಾರ್ತಾಂಡ ವರ್ಮಾ, 4ನೇ ಕುಂಜಲಿ ಮರಕ್ಕರ್ ಮತ್ತು ಪೋರ್ಚುಗೀಸರ ನಡುವಿನ ಯುದ್ಧ, 1ನೇ ರಾಜ ರಾಜ ಚೋಳ ಮತ್ತು ಪುತ್ರ ರಾಜೇಂದ್ರ ನಡೆಸಿದ ಹೋರಾಟ, 1971ರ ಭಾರತ- ಪಾಕ್ ಯುದ್ಧದ ವೇಳೆ ನಡೆದ ನೌಕಾ ಕಾರ್ಯಾ ಚರಣೆಯ ಇತಿಹಾಸ ಕೂಡ ಈ ಕೃತಿಗಳಲ್ಲಿ ದಾಖಲಾಗಲಿವೆ.