Advertisement

Nobel: ನೊಬೆಲ್‌ ಪ್ರಶಸ್ತಿ ಮೊತ್ತ ಏರಿಕೆ

11:47 PM Sep 15, 2023 | Team Udayavani |

ಸ್ಟಾಕ್‌ಹೋಮ್‌: ಸ್ವೀಡನ್‌ ದೇಶದಲ್ಲಿ ಹಣದುಬ್ಬರ ವಿಪರೀತ ಆಗಿರುವುದರಿಂದ, ಹಣದ ಮೌಲ್ಯವೂ ಕಡಿಮೆಯಾಗಿದೆ. ಇದರಿಂದ ನೊಬೆಲ್‌ ಫೌಂಡೇಶನ್‌, ಪ್ರಶಸ್ತಿ ಮೊತ್ತವನ್ನು 74.86 ಲಕ್ಷ ರೂ.ನಷ್ಟು (1 ಮಿಲಿಯನ್‌ ಕ್ರೋನರ್‌) ಏರಿಸಿದೆ. ಒಟ್ಟಾರೆ ಒಂದು ನೊಬೆಲ್‌ ಪ್ರಶಸ್ತಿ ಮೊತ್ತ 8.19 ಕೋಟಿ ರೂ.(11 ಮಿಲಿಯನ್‌ ಕ್ರೋನರ್‌)ಗೇರಿದೆ.

Advertisement

ಈ ಹಿಂದೆಯೂ ಹಲವು ಬಾರಿ ಪ್ರಶಸ್ತಿ ಮೊತ್ತ ಏರಿಸಿದ್ದು, ಇಳಿಸಿದ್ದು ನಡೆದೇ ಇದೆ. ಪ್ರಸ್ತುತ ಸ್ವೀಡನ್‌ನಲ್ಲಿ ಹಣದುಬ್ಬರ ಜಾಸ್ತಿಯಾಗಿರುವುದರಿಂದ ಕ್ರೋನರ್‌ ಕರೆನ್ಸಿ ಮೌಲ್ಯ ಡಾಲರ್‌, ಯೂರೋಗಳೆದುರು ಕುಸಿದಿದೆ. ಇದನ್ನು ಹೊಂದಿಸಲು ಸಂಘಟಕರು ಮೊತ್ತವನ್ನೇ ಏರಿಸುವ ನಿರ್ಧಾರ ಮಾಡಿದ್ದಾರೆ. ಆಗಸ್ಟ್‌ನಲ್ಲಿ ಶೇ.7.5ರಷ್ಟು ಹಣದುಬ್ಬರ ಸ್ವೀಡನ್‌ನಲ್ಲಿ ದಾಖಲಾಗಿತ್ತು. ವಿಪರ್ಯಾಸವೆಂದರೆ ಜುಲೈನಲ್ಲಿ ಈ ಪ್ರಮಾಣ ಶೇ.9.3ರಷ್ಟಿತ್ತು!

Advertisement

Udayavani is now on Telegram. Click here to join our channel and stay updated with the latest news.

Next