Advertisement

COVID ವಿರುದ್ಧ mRNA ಲಸಿಕೆ ಸಂಶೋಧಕರಿಬ್ಬರಿಗೆ ವೈದ್ಯಕೀಯ ನೊಬೆಲ್

05:19 PM Oct 02, 2023 | Team Udayavani |

ಸ್ಟಾಕ್‌ಹೋಮ್: ಕೋವಿಡ್ -19 ವಿರುದ್ಧ ಪರಿಣಾಮಕಾರಿ mRNA ಲಸಿಕೆಗಳನ್ನು ಅಭಿವೃದ್ಧಿಪಡಿಸಲು ಮಾಡಿದ ಸಂಶೋಧನೆಗಳಿಗಾಗಿ ಇಬ್ಬರು ವಿಜ್ಞಾನಿಗಳಿಗೆ ಸೋಮವಾರ ವೈದ್ಯಕೀಯ ನೊಬೆಲ್ ಪ್ರಶಸ್ತಿಯನ್ನು ಪ್ರಕಟಿಸಲಾಗಿದೆ.

Advertisement

ಹಂಗೇರಿಯ ಸಗಾನ್ಸ್ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕ ಕಟಲಿನ್ ಕರಿಕೋ ಮತ್ತು ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕ ಡ್ರೂ ವೈಸ್‌ಮನ್ ಅವರಿಗೆ ಪ್ರತಿಷ್ಠಿತ ಪ್ರಶಸ್ತಿಯನ್ನು ಘೋಷಿಸಲಾಗಿದೆ.

”mRNA ನಮ್ಮ ಪ್ರತಿರಕ್ಷಣಾ ವ್ಯವಸ್ಥೆಯೊಂದಿಗೆ ಹೇಗೆ ಸಂವಹನ ನಡೆಸುತ್ತದೆ ಎಂಬುದರ ಕುರಿತು ನಮ್ಮ ತಿಳುವಳಿಕೆಯನ್ನು ಮೂಲಭೂತವಾಗಿ ಬದಲಾಯಿಸಿದ ಅದ್ಭುತ ಸಂಶೋಧನೆಗಳ ಮೂಲಕ ಲಸಿಕೆ ಅಭಿವೃದ್ಧಿಯಲ್ಲಿ ಅಭೂತಪೂರ್ವ ಕೊಡುಗೆ ನೀಡಿದ್ದಾರೆ ”ಎಂದು ಪ್ರಶಸ್ತಿ ಸಮಿತಿ ಹೇಳಿದೆ.

ನೊಬೆಲ್ ಅಸೆಂಬ್ಲಿಯ ಕಾರ್ಯದರ್ಶಿ ಥಾಮಸ್ ಪರ್ಲ್‌ಮನ್ ಅವರು ಬಹುಮಾನವನ್ನು ಪ್ರಕಟಿಸಿ, ಸ್ವಲ್ಪ ಮೊದಲು ಇಬ್ಬರೂ ವಿಜ್ಞಾನಿಗಳನ್ನು ಸಂಪರ್ಕಿಸಿದಾಗ, ಸುದ್ದಿಯನ್ನು ಕೇಳಿ ” ಸಂಭ್ರಮದಲ್ಲಿ ಮುಳುಗಿದರು” ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next