Advertisement

ಯಾವುದೇ‌ ಕೆಲಸವೂ ಸಣ್ಣದಲ್ಲ

06:28 AM Mar 19, 2019 | Team Udayavani |

ಕೆಂಗೇರಿ: ಯಾವುದೇ ಕಾರ್ಯವನ್ನು ನಾವು ಮಾಡುವಾಗ ಅದು ಸಣ್ಣದಾದರು ನಿರ್ಲಕ್ಷಿಸಬಾರದು ಎಂದು ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ಡಾ.ಕೆ.ಆರ್‌.ವೇಣುಗೋಪಾಲ್‌ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

Advertisement

ಬೆಂಗಳೂರು ವಿಶ್ವವಿದ್ಯಾಲಯದ ಎನ್‌ಎಸ್‌ಎಸ್‌ ಭವನದಲ್ಲಿ ವಿಇಟಿ ಪ್ರಥಮದರ್ಜೆ ಕಾಲೇಜು ಮತ್ತು ಈಸ್ಟ್‌ ಪಾಯಿಂಟ್‌ ಕಾಲೇಜ್‌ ಆಫ್‌ ಮ್ಯಾನೇಜ್‌ಮೆಂಟ್‌ನ 2018-19ನೇ ಸಾಲಿನ ವಾರ್ಷಿಕ ಎನ್‌ಎಸ್‌ಎಸ್‌ ಶಿಬಿರದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಮುಂದುವರಿದ ರಾಷ್ಟ್ರಗಳ ಉದಾಹರಣೆ ತೆಗೆದುಕೊಂಡರೆ ಬಹಳಷ್ಟು ವಿಷಯಗಳಲ್ಲಿ ನಾವು ಹಿಂದೆ ಇದ್ದೇವೆ. ಆರ್ಥಿಕವಾಗಿ ಸಬಲರಾದರಷ್ಟೇ ಸಾಲದು ಎಲ್ಲ ಕ್ಷೇತ್ರಗಳಲ್ಲೂ ಮುಂದಿರಬೇಕು. ನೀವು ಇಲ್ಲಿಂದ ತೆರಳಿದ ನಂತರವೂ ಜನ ನೆನೆಯುವಂತಹ ಕಾರ್ಯಗಳನ್ನು ನೀವು ಮಾಡಬೇಕು ಎಂದು ಎನ್‌ಎಸ್‌ಎಸ್‌ ವಿದ್ಯಾರ್ಥಿಗಳಿಗೆ ತಿಳಿಸಿದರು.

ಕೇಂದ್ರಯ ವಿದ್ಯಾಲಯದ ಸಿಂಡಿಕೇಟ್‌ ಸದಸ್ಯ ಎಚ್‌.ಟಿ.ಅರವಿಂದ ಮಾತನಾಡಿ, ಸಾಮಾಜಿಕ ಜವಾಬ್ದಾರಿ, ಪ್ರಜ್ಞೆಯನ್ನು ಜಾಗೃತಗೊಳಿಸಿ ನಾಯಕತ್ವದ ಗುಣವನ್ನು ಎನ್‌ಎಸ್‌ಎಸ್‌ ಬೆಳಸುತ್ತದೆ. ವಿದ್ಯಾರ್ಥಿಗಳಲ್ಲಿ ಸಾಮಾಜಿಕ ಕಳಕಳಿ ಮೂಡಿಸುವ ನಿಟ್ಟಿನಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಮಹತ್ವದ ಪಾತ್ರ ನಿರ್ವಹಿಸುತ್ತದೆ ಎಂದು ಅಭಿಪ್ರಾಯಪಟ್ಟರು.

ಬೆಂಗಳೂರು ವಿಶ್ವವಿದ್ಯಾಲಯದ ಎನ್‌ಎಸ್‌ಎಸ್‌ ಸಂಯೋಜನಾಧಿಕಾರಿ ಡಾ.ಶ್ರೀನಿವಾಸ್‌ ಮಾತನಾಡಿ, ಎನ್‌ಎಸ್‌ಎಸ್‌ ಶಿಬಿರದಲ್ಲಿ ಪಾಲ್ಗೊàಳ್ಳುವ ಮೂಲಕ ಬಹಳಷ್ಟು ವಿಷಯಗಳನ್ನು ವಿದ್ಯಾರ್ಥಿಗಳು ಕಲಿಯಬಹುದು. ಶಿಸ್ತು, ಶ್ರಮದಾನ, ಯೋಗ, ಆರೋಗ್ಯ, ಎರೋಬಿಕ್ಸ್‌, ರಕ್ತದಾನ, ಸ್ವತ್ಛತಾ ಕಾರ್ಯ ಸೇರಿದಂತೆ ಹಲವಾರು ವಿಷಯಗಳ ಬಗ್ಗೆ ಉಪಯುಕ್ತ ಮಾಹಿತಿಯನ್ನು ವಿದ್ಯಾರ್ಥಿಗಳು ಶಿಬಿರದಲ್ಲಿ ಪಡೆಯುತ್ತಾರೆ ಎಂದರು.

Advertisement

ಬೆಂಗಳೂರು ಕೇಂದ್ರ ವಿವಿ ಆಡಳಿತ ಸಮಿತಿ ಸದಸ್ಯೆ ಹಾಗೂ ವಿಇಟಿ ಪ್ರಿನ್ಸಿಪಾಲ್‌ ಡಾ.ಆರ್‌.ಪಾರ್ವತಿ, ಶಿಬಿರದ ಕಾರ್ಯಕ್ರಮಾಧಿಕಾರಿಗಳಾದ ಬೀರಲಿಂಗ ಪೂಜಾರಿ ಮತ್ತು ಎಸ್‌.ಜಿ.ನಾರಾಯಣಸ್ವಾಮಿ, ಶಿಬಿರಾರ್ಥಿಗಳಾದ ಮಂಜುಳಾ, ಅಂಕಿತಾ, ಮಾಧುರಿ, ಭೂಮಿಕಾ, ಅರವಿಂದರಾಜ್‌ ಸೇರಿ ನೂರಕ್ಕೂ ಹೆಚ್ಚು ಶಿಬಿರಾರ್ಥಿಗಳು ಹಾಗೂ ಪ್ರಾಧ್ಯಾಪಕರು ಭಾಗವಹಿಸಿದ್ದರು. ಸಮಾರಂಭದಲ್ಲಿ ವಿದ್ಯಾರ್ಥಿಗಳು ಕಂಸಾಳೆ, ಪೂಜಾ ಕುಣಿತ, ಮೂಕಾಭಿನಯ ಸೇರಿದಂತೆ ತಮ್ಮಲ್ಲಿನ ವಿವಿಧ ಪ್ರತಿಭೆಗಳನ್ನು ಪ್ರದರ್ಶಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next