ಜಾರಿಯಲ್ಲಿದ್ದು, ಕಳೆದ ಏಳು ವರ್ಷ ಗತಿಸಿದರೂ ಇಂದಿಗೂ ಹಳೇ ಕಾಮಗಾರಿಗಳನ್ನು ಮುಂದುವರೆಸಿದ್ದು, ಅದನ್ನೆ ಅಭಿವೃದ್ಧಿ ಎಂದು ಹೇಳುವುದು ತಪ್ಪು, ಆಮೆಗತಿಯಲ್ಲಿ ಸಾಗಿರುವ ಕಾಮಗಾರಿ ಶೀಘ್ರ ಮುಗಿಸಬೇಕು ಎಂದು ಅಧಿಕಾರಿಗಳಿಗೆ ಶಾಸಕ ಶರಣಬಸಪ್ಪಗೌಡ ದರ್ಶನಾಪುರ ಸೂಚಿಸಿದರು.
Advertisement
ನಗರದ ತಾಪಂ ಸಭಾಂಗಣದಲ್ಲಿ ಅಭಿವೃದ್ಧಿ ಕಾಮಗಾರಿಗಳ ಸಮಗ್ರ ಪರಿಶೀಲನೆ ನಡೆಸಿದಅವರು, ತ್ವರಿತ ಗತಿಯಲ್ಲಿ ಕಾಮಗಾರಿ ಪೂರ್ಣ ಗೊಳಿಸಬೇಕು. ಸಮರ್ಪಕವಾಗಿ ಅನುದಾನ ಬಳಕೆಯಾಗಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು.
ಈ ಕುರಿತು ಎಇಇ ರಾಜಕುಮಾರ ಪತ್ತಾರ ಮಾತನಾಡಿ, ತಾಲೂಕಿನ 180 ಶುದ್ಧ ನೀರಿನ ಘಟಕಗಳನ್ನು
ನಿರ್ಮಾಣ ಮಾಡಲಾಗಿದ್ದು, 160 ಮಾತ್ರ ಚಾಲ್ತಿಯಲ್ಲಿವೆ. ಕೆಲವು ತಾಂತ್ರಿಕ ಸಮಸ್ಯೆಗಳಿಂದ ಕೂಡಿರುವ ಪರಿಣಾಮ
20 ಘಟಕಗಳು ಸ್ಥಗಿತಗೊಂಡಿವೆ ಎಂದು ತಿಳಿಸಿದರು. ಹೈದ್ರಾಬಾದ್ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯಿಂದ ಸಗರ ಮತ್ತು ಶಹಾಪುರ ನಗರದಲ್ಲಿ ಶೌಚಾಲಯ ನಿಮಾಣ ಮಾಡಲಾಗಿದೆ. 20 ಲಕ್ಷ.ರೂ ವೆಚ್ಚದಲ್ಲಿ ಬೀಮಾನಾಯ್ಕ ತಾಂಡಾದಲ್ಲಿ ಕಾಮಗಾರಿ ಮತ್ತು ಟಾಸ್ಕ್ಪೋರ್ಸ್ ಕಮಿಟಿಯಿಂದ 16 ಲಕ್ಷ. ರೂ. ಮಂಜೂರಾಗಿದ್ದು, ಕುಡಿಯುವ ನೀರಿಗಾಗಿ ಬಳಕೆ ಮಾಡುವಂತೆ ಶಾಸಕರು ಸೂಚಿಸಿದರು.
Related Articles
Advertisement
ಹತ್ತಿಗೂಡೂರ, ಸಗರ, ನಾಗನಟಗಿ, ಹೊಸ್ಕೇರಾ ರಸ್ತೆ ಬದಿಗಳಲ್ಲಿ ಗಿಡಗಳನ್ನು ನೆಡುವಂತೆ ಪ್ರಾದೇಶಿಕ ಅರಣ್ಯ ಇಲಾಖೆ ಅಧಿಕಾರಿಗಳಿಗೆ ತಿಳಿಸಿದರು. ಈ ಸಂದರ್ಭದಲ್ಲಿ ಇಲಾಖೆ ಪ್ರತಿಯನ್ನು ಪ್ರಸ್ತಾಪಿಸಿದ ಅರಣ್ಯ ಇಲಖೆ ಅಧಿಕಾರಿಗಳು ಎಸ್‌ಸಿಪಿ ಉಜ್ವಲ ಯೋಜನೆಯಡಿ ಕಳೆದ ಸಾಲಿನಲ್ಲಿ ಒಟ್ಟು 650 ಮತ್ತು ಟಿಎಸ್‌ಪಿಯಲ್ಲಿ ಶೋರಾಪುರ, ಹುಣಸಗಿ, ಶಹಾಪುರ, ವಡಗೇರಾ ತಾಲೂಕು ಕೇದ್ರಗಳಲ್ಲಿ ಒಟ್ಟು 1.190 ಸದಸ್ಯರಿಗೆ ಉಚಿತ ಗ್ಯಾಸ್ ಸಿಲಿಂಡರ್ ವಿತರಣೆ ಮಾಡಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ತಾಪಂ ಅಧ್ಯಕ್ಷ ಹೊನ್ನಪ್ಪಗೌಡ ಹೋತಪೇಟ,. ಕಾರ್ಯ ನಿರ್ವಾಹಣಾಧಿಕಾರಿ ಎಸ್.ಕೆ.ಟಕ್ಕಳಕಿ ಉಪಸ್ಥಿತರಿದ್ದರು. ತಾಲೂಕು ಆಡಳಿತದ ವಿವಿಧ ಇಲಾಖೆ ಅಧಿಕಾರಿಗಳು ಭಾಗವಹಿಸಿದ್ದರು.
ಸಿಸಿ ಕ್ಯಾಮರಾ ಅಳವಡಿಕೆಗೆ ಸೂಚನೆ ನಗರದಲ್ಲಿ ಸಿಗ್ನಲ್ ಅಳವಡಿಕೆ ಮತ್ತು ಸಿಸಿ ಕ್ಯಾಮರಾ ಅಳವಡಿಸಲು 15 ಲಕ್ಷ ರೂ. ಅನುದಾನ ಅವಕಾಶವಿದ್ದು, ಅದನ್ನು ಸದ್ಬಳಿಕೆ ಮಾಡಿಕೊಳ್ಳಬೇಕು. ಮಂಜೂರಾದ 15 ಲಕ್ಷ ರೂ. ವೆಚ್ಚದಲ್ಲಿ ಸಿಸಿ ಕ್ಯಾಮರಾ ಮತ್ತು ಸಿಗ್ನಲ್ ಅಳವಡಿಕೆ ಕಾಮಗಾರಿ ಕೈಗೆತ್ತಿಕೊಂಡು ಪೊಲೀಸ್ ಇಲಾಖೆ ನಿರ್ದೇಶನದಂತೆ ಕಾಮಗಾರಿ ಮುಂದುವರೆಸುವಂತೆ ನಿರ್ಮಿತಿ ಕೇಂದ್ರ ಅಧಿ ಕಾರಿಗಳಿಗೆ ಶಾಸಕರು ಸೂಚಿಸಿದರು.