Advertisement

ಮುಧೋಳದಲ್ಲಿಲ್ಲ ಕುಡಿಯುವ ನೀರಿನ ಸಮಸ್ಯೆ

11:37 AM Apr 13, 2021 | Team Udayavani |

ಮುಧೋಳ: ತಾಲೂಕಿನ ಗ್ರಾಮೀಣ ಹಾಗೂ ನಗರದ ಪ್ರದೇಶಗಳಲ್ಲಿ ಸಾರ್ವಜನಿಕರ ಅನುಕೂಲಕ್ಕೆಶುದ್ಧ ಕುಡಿಯುವ ನೀರಿನ ಘಟಕ ನಿರ್ಮಿಸಿ ಆಮೂಲಕ ತಾಲೂಕು ಆಡಳಿತ ಜನರಿಗೆ ಶುದ್ಧ ನೀರುಒದಗಿಸುವಲ್ಲಿ ನಿರಂತರವಾಗಿ ಶ್ರಮಿಸುತ್ತಿದೆ.ತಾಲೂಕಿನ 68 ಹಳ್ಳಿಗಳಲ್ಲಿ 116, ನಗರಸಭೆವ್ಯಾಪ್ತಿಯಲ್ಲಿ 22 ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಿಸಲಾಗಿದೆ.

Advertisement

ಕೆಲವು ಖಾಸಗಿಯವರು ಸಹ ಘಟಕಗಳು ಕೂಡಾಆರಂಭಿಸಿದ್ದಾರೆ. ಬಹುತೇಕಹಳ್ಳಿ ಹಾಗೂ ಪಟ್ಟಣ, ನಗರದಲ್ಲಿ ಶಾಸಕರು, ವಿಧಾನಪರಿಷತ್‌ ಸದಸ್ಯರ ಹಾಗೂ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳಅನುದಾನದಲ್ಲಿ ಶುದ್ಧ ಕುಡಿಯುವ ನೀರು ಘಟಕ ನಿರ್ಮಾಣವಾಗಿವೆ. ಅವುಗಳನ್ನು ಆಯಾ ಸ್ಥಳಿಯಸಂಸ್ಥೆಗಳ ಮೂಲಕ ನಿಭಾಯಿಸಲಾಗುತ್ತಿದೆ. ಗ್ರಾಮೀಣಕುಡಿಯುವ ನೀರು ಪೂರೈಕೆ ಯೋಜನೆಯಲ್ಲಿ 83 ಘಟಕಗಳನ್ನು ಗುತ್ತಿಗೆದಾರರ ಮೂಲಕ ನಿರ್ವಹಣೆ ಕೂಡಾ ಮಾಡಲಾಗುತ್ತಿದೆ.

ನಿರ್ವಹಣೆ ತಪ್ಪಿದರೆ ದಂಡ: ತಾಲೂಕಾಡಳಿತನಿಯಂತ್ರಣದಲ್ಲಿ ನಡೆಯುತ್ತಿರುವ ತಾಲೂಕಿನ 82ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಾಣವನ್ನು ಖಾಸಗಿಯವರಿಗೆ ವಹಿಸಲಾಗಿದೆ. ಶುದ್ಧ ಕುಡಿಯುವನೀರಿನ ಘಟಕ ನಿರಂತರವಾಗಿ ಸೇವೆ ಒದಗಿಸಬೇಕು.ಒಂದು ವೇಳೆ ಅವುಗಳು ದುರಸ್ತಿಗೆ ಬಂದರೆ ಕೂಡಲೇಆ ಬಗ್ಗೆ ಗಮನಹರಿಸಿ ಘಟಕ ಸರಿಪಡಿಸಬೇಕು. ಒಂದು ವೇಳೆ ಘಟಕ ದುರಸ್ತಿ ಕಾರ್ಯದಲ್ಲಿ ವಿಳಂಬನೀತಿ ಅನುಸರಿಸಿದರೆ ಗುತ್ತಿಗೆ ಪಡೆದವರಿಗೆ ದಿನದ ಲೆಕ್ಕದಲ್ಲಿ ದಂಡ ವಿಧಿಸಿ ಅವರಿಗೆ ಬಿಸಿ ಮುಟ್ಟಿಸುವ ಕಾರ್ಯವನ್ನು ತಾಲೂಕು ಆಡಳಿತ ಕೈಗೊಳ್ಳುತ್ತಿದೆ.ಸಾರ್ವಜನಿಕರಿಗೆ ಹೆಚ್ಚಿನ ನೀರಿನ ಸೌಲಭ್ಯ ಕಲ್ಪಿಸುವನಿಟ್ಟಿನಲ್ಲಿ ಇನ್ನು ಮೂರು ಶುದ್ಧ ಕುಡಿಯುವ ನೀರಿನಘಟಕಗಳು ಮಂಜೂರಾತಿ ಹಂತದಲ್ಲಿವೆ. ಅವುಗಳನಿರ್ಮಾಣಕ್ಕೆ ತಾತ್ಕಾಲಿಕ ಅನುಮತಿ ದೊರೆತಿದೆ. ಪ್ರತಿ20 ಲೀಟರ್‌ಗೆ 5 ರೂ.ದರದಲ್ಲಿ ಶುದ್ಧ ಕುಡಿಯುವ ನೀರು ಪೂರೈಕೆಗೆ ಕ್ರಮ ಕೈಗೊಳ್ಳಲಾಗಿದೆ.

ಮೇಲಿಂದ ಮೇಲೆ ಪರೀಕ್ಷೆ: ಪ್ರತಿಯೊಂದು ಶುದ್ಧ ಕುಡಿಯುವ ನೀರಿನ ಘಟಕಗಳನ್ನು ನಿರ್ವಹಣೆ ಜತೆ ಗಡಸುತನ ಬರುವ ನೀರಿನ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಮೇಲಿಂದ ಮೇಲೆ ಹದಿನೈದುದಿನಕ್ಕೊಮ್ಮೆ ನೀರಿನ ಪರಿಶೀಲನೆ ನಡೆಸಲಾಗುತ್ತಿದೆ.ಸಾರ್ವಜನಿಕರ ನೀಡುವ ದೂರಿನನ್ವಯ ಕೆಲವುಮಾರ್ಪಾಡು ಸಹ ಮಾಡಲಾಗಿದೆ. ಟಿಡಿಎಸ್ ‌ಟೆಸ್ಟ್‌ ಅಂತಾ ಮಾಡಿ ಮರಳಿ ನೀರಿನ ಪ್ರಮಾಣಕ್ಕೆಸೂಕ್ತವಾಗಿ ಶುದ್ಧೀಕರಣ ಮಾಡುವ ಪ್ರಯತ್ನ ನಡೆದಿದೆ. ಸಾರ್ವಜನಿಕರ ನಿತ್ಯ ಬಳಕೆಯಿಂದ ಕೆಲವುಭಾಗಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳು ಮೇಲಿಂದ ಮೇಲೆ ಶುದ್ಧ ನೀರಿನ ರಿಪೇರಿಗೆ ಬರುವುದು ಸಾಮಾನ್ಯವಾಗಿದೆ.

ತಾಲೂಕಿನ ಮಿರ್ಜಿ, ಒಂಟಗೋಡಿ, ಉತ್ತೂರ,ಮಳಲಿ, ಕುಳಲಿ, ಶಿರೋಳ, ದಾದನಟ್ಟಿ,ಮುಗಳಖೋಡ, ಬುದ್ನಿ, ಬೊಮ್ಮನಬುದ್ನಿ, ಆಲಗುಂಡಿ, ಮಾಚಕನೂರ, ಇಂಗಳಗಿ, ಯಡಹಳ್ಳಿ,ಮಂಟೂರ, ಹಲಗಲಿ, ಲಕ್ಷಾನಟ್ಟಿ, ಲೋಕಾಪುರ,ಕಿಲ್ಲಾ ಹೊಸಕೋಟಿ, ಮೆಟಗುಡ್ಡ ಗ್ರಾಮಗಳ ಪೈಕಿಹಲವು ಗ್ರಾಮಗಳಲ್ಲಿ ಈ ಹಿಂದೆ ಇದ್ದ ಕುಡಿಯುವ ಸಮಸ್ಯೆಯಂತು ಸದ್ಯಕ್ಕಿಲ್ಲ.

Advertisement

ನಗರದ ವಿವಿಧ ವಾರ್ಡ್‌ಗಳಲ್ಲಿ ನಗರಸಭೆ ಹಾಗೂಶಾಸಕರು, ವಿಧಾನ ಪರಿಷತ್‌ ಸದಸ್ಯರ ಅನುದಾನದಲ್ಲಿಶುದ್ಧ ಕುಡಿಯುವ ನೀರಿನ ಘಟಕಗಳನ್ನು ನಿರ್ಮಿಸಲಾಗಿದೆ. ಅವುಗಳನ್ನು ಕೆಲವನ್ನು ಖಾಸಗಿ ಹಾಗೂ ಕೆಲವನ್ನು ನಗರಸಭೆ ವತಿಯಿಂದಲೇ ನಿರ್ವಹಿಸಲಾಗುತ್ತಿದೆ.

ಇನ್ನಷ್ಟು ಘಟಕ: ಜನಸಂಖ್ಯೆ ಗ್ರಾಮೀಣ ಭಾಗದಲ್ಲಿ ಇನ್ನಷ್ಟು ಘಟಕಗಳ ಬೇಕೆ ಬೇಕು. ಅಲ್ಲದೇ ನಗರದಕೆಲವು ವಾರ್ಡ್‌ಗಳಲ್ಲಿ ಚಿಕ್ಕದಾಗಿದ್ದರೂ ಶುದ್ಧಕುಡಿಯುವ ನೀರಿನ ಘಟಕಗಳನ್ನು ಮಂಜೂರಾತಿನೀಡುವುದು ಅಗತ್ಯವಿದೆ ಎನ್ನುತ್ತಾರೆ ನಿವಾಸಿಗಳು.ನಗರದ ಆಶ್ರಯ ಕಾಲೋನಿ, ಜನತಾಪ್ಲಾಟ್‌, ಸಾಯಿನಗರ, ವಿನಾಯಕ ನಗರ, ಜಯನಗರ ಭಾಗದಲ್ಲಿ ನಿರ್ಮಿಸುವುದು ಅಗತ್ಯವಿದೆ ಎಂದು ನಿವಾಸಿಗಳು ಆಗ್ರಹಿಸಿದ್ದಾರೆ. ಕೆಲವು ಭಾಗದಲ್ಲಿ ಸಣ್ಣಪುಟ್ಟ ಲೋಪದೋಷ ಹೊರತುಪಡಿಸಿ ಉಳಿದಂತೆ ನಿರ್ವಹಣೆ ನಡೆದಿವೆ ಎನ್ನುತ್ತಾರೆ ನಿವಾಸಿಗಳು.

ತಾಲೂಕಿನ ಗ್ರಾಮೀಣ ಪ್ರದೇಶದ ಜನರಿಗೆ ಶುದ್ಧ ಕುಡಿಯುವ ನೀರುಒದಗಿಸುವುದು ನಮ್ಮ ಜವಾಬ್ದಾರಿ. ಈನಿಟ್ಟಿನಲ್ಲಿ ನಿರಂತರವಾಗಿ ಶ್ರಮಿಸುತ್ತಿದ್ದೇವೆ.ತಾಲೂಕುಡಳಿತ ವ್ಯಾಪ್ತಿಯ 112 ಶುದ್ಧಕುಡಿಯುವ ನೀರಿನ ಘಟಕಗಳಲ್ಲಿ ಬಹುತೇಕ ಎಲ್ಲ ಘಟಕಗಳು ಕಾರ್ಯನಿರ್ವಹಿಸುತ್ತಿವೆ.ಒಂದು ವೇಳೆ ದುರಸ್ತಿಗೆ ಬಂದರೂ ಅವುಗಳನ್ನುಶೀಘ್ರಸರಿಪಡಿಸಿ ಜನರಿಗೆ ನೀರು ಒದಗಿಸಲು ಬದ್ಧ.- ಕಿರಣ ಘೋರ್ಪಡೆ, ತಾಪಂ ಕಾರ್ಯನಿರ್ವಹಣಾಧಿಕಾರಿ ಮುಧೋಳ

ಗ್ರಾಮದಲ್ಲಿ ದಶಕದ ಹಿಂದೆ ನೀರಿನ ಸಮಸ್ಯೆ ಹೇಳತೀರದಾಗಿತ್ತು. ಸದ್ಯ ಮನೆಬಾಗಿಲಿಗೆ ನಿರಂತರ ನೀರು ವ್ಯವಸ್ಥೆ ಕಲ್ಪಿಸಲಾಗಿದೆ. ಇದರೊಂದಿಗೆ ಗ್ರಾಮದಲ್ಲಿ ಎರಡು ಶುದ್ಧಕುಡಿಯುವ ನೀರಿನ ಘಟಕವಿದ್ದು, ಎಲ್ಲ ರೀತಿಯಅನುಕೂಲವಿದೆ. ಹಿಂದಿನಂತೆ ನಮ್ಮ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಇಲ್ಲ.  –ಸದಪ್ಪ ಜಡಗನ್ನವರ, ಹಲಗಲಿ ಗ್ರಾಮಸ್ಥ

 

ಗೋವಿಂದಪ್ಪ ತಳವಾರ

Advertisement

Udayavani is now on Telegram. Click here to join our channel and stay updated with the latest news.

Next