ಚನ್ನಪಟ್ಟಣ:ಲಾಕ್‌ಡೌನ್ ತೆರವಿನ ನಂತರ ಜನರು ನಿಯಮ ಉಲ್ಲಂಘಘಿಸುತ್ತಿದ್ದಾರೆ. ಸಾಮಾಜಿಕ ಅಂತರ, ಮಾಸ್ಕ್ ಧರಿಸುವುದು ಶಿಕ್ಷೆಯಲ್ಲ. ನಮ್ಮನ್ನು ರಕ್ಷಿಸಿಕೊಳ್ಳಲು ಅನುಸರಿಸಬೇಕಾದ ಎಚ್ಚರಿಕೆ ಕ್ರಮ ಎಂದು ಶಿಕ್ಷಣ ಸಚಿವ ಎಸ್.ಸುರೇಶ್‌ಕುಮಾರ್ ಹೇಳಿದರು. ಪಟ್ಟಣದ ಬಾಲಕರ ಪಪೂ ಕಾಲೇಜಿಗೆ ಭೇಟಿ ನೀಡಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ತೆಗೆದುಕೊಂಡಿರುವ ಕ್ರಮ ಪರಿಶೀಲಿಸಿ ಸುದ್ದಿಗಾರರೊಂದಿಗೆ ಮಾತನಾಡಿದರು.
ನಿಯಮ ಪಾಲಿಸುವ ವಿಚಾರದಲ್ಲಿ ಎಸ್‌ಎಸ್‌ಎಲ್‌ಸಿ ಮಕ್ಕಳು ಎಲ್ಲರಿಗೂ ಮಾದರಿಯಾಗಿದ್ದಾರೆ. ಕಟ್ಟುನಿಟ್ಟಾಗಿ ನಿಯಮ ಪಾಲಿಸಿ, ದೊಡ್ಡವರಿಗೂ ಸಂದೇಶ ನೀಡುತ್ತಿದ್ದಾರೆ. ಸಮಸ್ಯೆ ಎದುರಾಗದಂತೆ ಪರೀಕ್ಷೆ ನಡೆಸುತ್ತಿದ್ದೇವೆ. ಮಕ್ಕಳ ಹಾಜರಾತಿ ಉತ್ತಮವಾಗಿದ್ದು, ಆತಂಕವಿಲ್ಲದೆ ಪರೀಕ್ಷೆ ಎದುರಿಸುತ್ತಿದ್ದಾರೆ ಎಂದರು. ಶಾಲಾ-ಕಾಲೇಜು ಆರಂಭಿಸುವ ಕುರಿತು ನಿರ್ಧರಿಸಿಲ್ಲ. ಎಲ್ಲ ಕಡೆ ಪೋಷಕರ ಸಭೆ ಕರೆದು ಚರ್ಚಿಸಿ, ಅಭಿಪ್ರಾಯ ದಾಖಲಿಸಿದ್ದೇವೆ.
ಪರೀಕ್ಷೆ ಮುಗಿದ ನಂತರ ಯಾವ ಕ್ರಮ ವಹಿಸಬೇಕೆಂದು ನಿರ್ಧಾರ ಮಾಡುತ್ತೇವೆ. ಖಾಸಗಿ ಶಾಲೆ ಶುಲ್ಕ ಹೆಚ್ಚಿಸದಂತೆ ಸೂಚನೆ ನೀಡಿದ್ದೇವೆ. ಮಾನವೀಯ ಆಧಾರದ ಮೇಲೆ ಶುಲ್ಕ ಪಡೆಯಬೇಕು. ಹೀಗೆಯೇ ಉಳ್ಳವರು ಶುಲ್ಕ ಪಾವತಿಸಬಹುದು ಎಂದು ತಿಳಿಸಿದ್ದೇವೆ. ಆನ್‌ಲೈನ್ ಶಿಕ್ಷಣ ಸಂಬಂಧ ತಜ್ಞರ ಸಮಿತಿ ಪರೀಕ್ಷೆ ಮುಗಿದ ನಂತರ ಅನುಷ್ಠಾನ ತೀರ್ಮಾನ ಕೈಗೊಳ್ಳಲಿದೆ. ವರದಿ ಸಲ್ಲಿಸಿ, ಮುಂದಿನ ಆದೇಶ ಹೊರಡಿಸುತ್ತೇವೆ ಎಂದು ತಿಳಿಸಿದರು.
ಕೋವಿಡ್ 19 ಸೋಂಕು ಲಕ್ಷಣವಿರುವ ವಿದ್ಯಾ ರ್ಥಿಗಳಿಗೆ ಪೂರಕ ಪರೀಕ್ಷೆಗೆ ಅವಕಾಶ ನೀಡ ಲಾಗಿದೆ. ಅನುತ್ತೀರ್ಣ ವಿದ್ಯಾರ್ಥಿಗಳು ಪೂರಕ ಪರೀಕ್ಷೆ ಬರೆಯಬಹುದಾಗಿತ್ತು. ಆದರೆ ಈಗ ಸೋಂಕು ಲಕ್ಷಣ ವಿರುವ ವಿದ್ಯಾರ್ಥಿಗಳಿಗೆ ಪೂರಕ ಪರೀಕ್ಷೆಯಲ್ಲಿ ಮೊದಲ ಯತ್ನ ಎಂದೇ ಅವಕಾಶ ಕಲ್ಪಿಸಲಾಗುತ್ತದೆ. ರಿಪೀಟರ್ ಎಂದು ಪರಿಗಣಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಜಿಪಂ ಸಿಇಒ ಇಕ್ರಂ, ಬಿಇಒ ನಾಗರಾಜು, ಬಾಲಕರ ಪಪೂ ಕಾಲೇಜು ಉಪಪ್ರಾಂಶು ಪಾಲೆ ಪಾರ್ವತಮ್ಮ, ಕ್ಷೇತ್ರ ಸಮನ್ವಯಾಧಿಕಾರಿ ಕುಸು ಮಲತಾ, ಇಸಿಒ ಶಿವಲಿಂಗಯ್ಯ, ದೈಹಿಕ ಶಿಕ್ಷಕ ಹಿರೇಮಠ ಇದ್ದರು.