ಬೆಂಗಳೂರು: ಕೊರೊನಾ ಭೀತಿ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಶಾಲಾ, ಕಾಲೇಜುಗಳಿಗೆ ರಜೆ ಘೋಷಣೆ ಮಾಡಿದೆ. ಆದರೆ, ಬೋಧಕ, ಬೋಧಕೇತರ ಸಿಬ್ಬಂದಿಗೆ ರಜೆ ನೀಡಿಲ್ಲ. ಶಾಲೆಗೆ ಮಕ್ಕಳು ಬರುವಂತಿಲ್ಲ, ಶಿಕ್ಷಕರು ಮನೆಯಲ್ಲಿರುವಂತಿಲ್ಲ. ಹೀಗಾಗಿ ಬೋಧಕ, ಬೋಧ ಕೇತರ ಸಿಬ್ಬಂದಿಯಲ್ಲಿ ಪೀಕಲಾಟ ಆರಂಭವಾಗಿದೆ.
ನರ್ಸರಿ, ಪೂರ್ವ ಪ್ರಾಥಮಿಕ ತರಗತಿ, ಪ್ರಾಥಮಿಕ, ಪ್ರೌಢ, ಪಿಯುಸಿ, ಪದವಿ, ಸ್ನಾತಕೋತ್ತರ ಪದವಿ, ಪಾಲಿಟೆಕ್ನಿಕ್, ಎಂಜಿನಿಯರಿಂಗ್, ವೈದ್ಯಕೀಯ, ದಂತ ವೈದ್ಯಕೀಯ ಹೀಗೆ ಎಲ್ಲಾ ಬಗೆಯ ಶಾಲಾ, ಕಾಲೇಜುಗಳ ವಿದ್ಯಾರ್ಥಿಗಳಿಗೂ ಸರ್ಕಾರ ರಜೆ ಘೋಷಣೆ ಮಾಡಿದೆ.
ಆದರೆ, ಶೈಕ್ಷಣಿಕ ಮತ್ತು ಆಡಳಿತಾತ್ಮಕ ದೃಷ್ಟಿಯಿಂದ ಶಾಲಾ, ಕಾಲೇಜುಗಳ ಶಿಕ್ಷಕ, ಶಿಕ್ಷಕೇತರ ಸಿಬ್ಬಂದಿ, ಬೋಧಕ, ಬೋಧಕೇತರ ಸಿಬ್ಬಂದಿಗೆ ರಜೆ ನೀಡಿಲ್ಲ. ನಿರ್ದಿಷ್ಟ ಸಮಯದಲ್ಲಿ ಶಾಲಾ, ಕಾಲೇಜಿಗೆ ಬಂದು ಶೈಕ್ಷಣಿಕ, ಆಡಳಿತಾತ್ಮಕ ಕಾರ್ಯ ಮುಗಿಸಿ ವಾಪಸ್ ಹೋಗಲು ನಿರ್ದೇಶನ ನೀಡಿದ್ದಾರೆ. ಈ ಮಧ್ಯೆ, ಜ್ವರ, ಶೀತ, ಕೆಮ್ಮು ಇತ್ಯಾದಿ ದಿಢೀರ್ ಅಸ್ವಸ್ಥತೆ ಕಾಣಿಸಿಕೊಂಡರೆ ಕಡ್ಡಾಯ ರಜೆ ನೀಡುವಂತೆಯೂ ಸೂಚಿಸಲಾಗಿದೆ.
ಎಲ್ಲಾ ವಿದ್ಯಾರ್ಥಿಗಳಿಗೆ ರಜೆ ನೀಡಿರುವುದರಿಂದ ಪ್ರಾಥಮಿಕ ಶಾಲೆಯಿಂದ ವಿಶ್ವವಿದ್ಯಾಲಯದ ತನಕವೂ ಎಲ್ಲವೂ ಬಿಕೋ ಎನ್ನುತ್ತಿವೆ. ಆದರೆ, ಶಿಕ್ಷಕ, ಬೋಧಕ, ಶಿಕ್ಷಕೇತರ, ಬೋಧಕೇತರ ಸಿಬ್ಬಂದಿ ಶಾಲಾ, ಕಾಲೇಜಿಗೆ ಬರುತ್ತಿದ್ದಾರೆ. ಆಡಳಿತಾತ್ಮಕ ಕಾರ್ಯಕ್ಕೆ ಅಗತ್ಯವಿರುವ ಕಚೇರಿ ತೆರೆದು ತಮ್ಮ ಕಾರ್ಯ ಮುಗಿದ ನಂತರವೂ ದಿನಪೂರ್ತಿ ಕುಳಿತಿರುತ್ತಾರೆ.
ಕೆಲವರು ಮಧ್ಯಾಹ್ನದ ನಂತರ ಶಾಲಾ, ಕಾಲೇಜಿನಲ್ಲಿ ಕಾಣಿಸಿಕೊಳ್ಳುತ್ತಲೇ ಇಲ್ಲ. ಇನ್ನು ದ್ವಿತೀಯ ಪಿಯುಸಿ ಪರೀಕ್ಷೆ ನಡೆಯುತ್ತಿ ರುವು ದರಿಂದ ಕೆಲ ಉಪನ್ಯಾಸಕರು ಈ ಕಾರ್ಯದಲ್ಲಿ ತೊಡಗಿ ದ್ದಾರೆ. ಮಕ್ಕಳು ಮನೆಯಲ್ಲಿರುವುದರಿಂದ ಅವರನ್ನು ಬಿಟ್ಟು ಹೋಗುವುದು ಶಿಕ್ಷಕ, ಬೋಧಕ, ಶಿಕ್ಷಕೇತರ, ಬೋಧಕೇತರ ಸಿಬ್ಬಂದಿಗೆ ದೊಡ್ಡ ತಲೆನೋವಾಗಿದೆ. ಮಕ್ಕಳನ್ನು ಮನೆಯಲ್ಲಿ ಬಿಟ್ಟು ಹೋಗಲು ಭಯ ವಾಗುತ್ತದೆ.
ನಾವು ಮನೆಯಲ್ಲಿದ್ದಾಗಲೇ ಮಕ್ಕಳು ಹೇಳಿದ್ದನ್ನು ಕೇಳುವುದಿಲ್ಲ. ಇನ್ನು ನಾವು ಮನೆಯಲ್ಲಿ ಇಲ್ಲವಾದರೆ ಮಕ್ಕಳನ್ನು ನೋಡಿಕೊಳ್ಳುವುದು ಕಷ್ಟವಾಗುತ್ತಿದೆ ಎಂದು ಶಿಕ್ಷಕ, ಬೋಧಕ, ಶಿಕ್ಷಕೇತರ, ಬೋಧಕೇತರ ಸಿಬ್ಬಂದಿ ಅಳಲು ತೋಡಿಕೊಂಡಿದ್ದಾರೆ. ರಜೆ ಕೊಟ್ಟಿರುವುರಿಂದ ಪತಿ, ಪತ್ನಿ ಇಬ್ಬರೂ ಸರ್ಕಾರಿ ಸೇವೆಯಲ್ಲಿರುವವರೂ ತಮ್ಮ ಮಕ್ಕ ಳನ್ನು ನೋಡಿ ಕೊಳ್ಳುವವರು ಯಾರು ಎಂಬುದೇ ಚಿಂತೆಯಾಗಿದೆ.