Advertisement
ದೇಶದಲ್ಲಿ ಗರಿಷ್ಠ ಐಟಿ ಸೇವೆಗಳು ರಫ್ತು ಆಗುವುದು ಬೆಂಗಳೂರಿನಿಂದ. ಆ ಮೂಲಕ ಗರಿಷ್ಠ ಆದಾಯ ತಂದುಕೊಡುತ್ತಿದೆ. ಇದೇ ಕಾರಣಕ್ಕೆ ಉದ್ಯಾನ ನಗರಿಗೆ “ಸಿಲಿಕಾನ್ ಸಿಟಿ’ಯ ಗರಿ ಕೂಡ ಇದೆ. ಆದರೆ, ಆತಂತ್ರಜ್ಞಾನದ ಬಳಕೆಯಲ್ಲಿ ಮಾತ್ರ ಇದು ತದ್ವಿರುದ್ಧವಾಗಿದೆ.
Related Articles
Advertisement
ತಂತ್ರಜ್ಞಾನ ಕ್ಷೇತ್ರದಲ್ಲಿ ಡಿಜಿಟಲ್ ಆಡಳಿತ, ಬಳಕೆ ಮತ್ತು ಅದರ ಸಾಕ್ಷರತೆ ಬರುತ್ತದೆ. ಅದೇ ರೀತಿ, ನಗರಯೋಜನೆಯಲ್ಲಿ ಯೋಜನಾ ತಯಾರಿ, ಜಾರಿ ಮತ್ತುಅಳವಡಿಕೆ ಹಾಗೂ ಹಣಕಾಸಿನಲ್ಲಿ ನಿರ್ವಹಣೆ, ವೆಚ್ಚ,ಹೊಣೆಗಾರಿಕೆ ಮತ್ತು ವಿತ್ತೀಯ ವಿಕೇಂದ್ರೀಕರಣವನ್ನುಆಧರಿಸಿ ಆಯಾ ನಗರಗಳಿಗೆ ಅಂಕಗಳು ಮತ್ತು ಸ್ಥಾನಗಳನ್ನು ನೀಡಲಾಗುತ್ತದೆ.
ಅದೇ ರೀತಿ ಸಮಾಜದ ವಿವಿಧ ವರ್ಗದ ಜನರಿಗೆ ಆರೋಗ್ಯ ಮತ್ತು ಶಿಕ್ಷಣ ಸೌಲಭ್ಯ ಕಲ್ಪಿಸುವುದು, ನಾಗರಿಕರಿಗೆ ಕುಡಿಯುವ ನೀರು ನೀಡುವುದು, ಕೊಳಚೆನೀರಿನ ಸಂಸ್ಕರಣೆ, ಘನತ್ಯಾಜ್ಯ ವಿಲೇವಾರಿ, ನೈರ್ಮರ್ಲಿಕರಣ, ನೋಂದಣಿ ಪರವಾನಗಿ ಮತ್ತು ಮೂಲ ಸೌಕರ್ಯ ಕಲ್ಪಿಸುವಲ್ಲಿಯೂ ಬೆಂಗಳೂರು ಹಿಂದೆ ಬಿದ್ದಿದೆ. ಬೆಂಗಳೂರು 25ನೇ ಸ್ಥಾನಕ್ಕೆ ತೃಪ್ತಿಪಡಬೇಕಿದೆ.ಸೇವೆಗಳನ್ನು ಕಲ್ಪಿಸುವುದರಲ್ಲಿ ದಕ್ಷಿಣ ದೆಹಲಿ 4ನೇ ಸ್ಥಾನ ಮತ್ತು ಚೆನ್ನೈ 17ನೇ ಸ್ಥಾನದಲ್ಲಿವೆ.
ನಗರಕ್ಕೆ ಸಂಬಂಧಿಸಿದ ಯೋಜನೆಗಳ ತಯಾರಿ,ಅನುಷ್ಠಾನ ಮತ್ತು ಅಳವಡಿಕೆಯಲ್ಲಿ ಬೆಂಗಳೂರು 36ನೇಸ್ಥಾನ ದೊರೆತಿದೆ. ನಗರ ಯೋಜನೆಗಳ ಅನುಷ್ಠಾನದಲ್ಲಿಮುಂಬೈ 2ನೇ ಸ್ಥಾನದಲ್ಲಿದ್ದರೆ, ಹೈದರಾಬಾದ್ 17, ದಕ್ಷಿಣ ದೆಹಲಿ 28, ಉತ್ತರ ದೆಹಲಿ 32ನೇ ಸ್ಥಾನದಲ್ಲಿದೆ.
ಆಡಳಿತ ಪಾರದರ್ಶಕತೆಯಲ್ಲಿ 18ನೇ ಸ್ಥಾನ :
ಆಡಳಿತದಲ್ಲಿ ಪಾರದರ್ಶಕತೆ, ಉತ್ತರದಾಯಿತ್ವ, ಮಾನವ ಸಂಪನ್ಮೂಲ, ಭಾಗವಹಿಸುವಿಕೆ ಮತ್ತು ಪರಿಣಾಮಕಾರಿ ಆಡಳಿತ ನೀಡುವ ವಿಚಾರದಲ್ಲಿಯೂ ಎಲ್ಲಾ ಮಹಾನಗರಗಳನ್ನು ಸಮೀಕ್ಷೆಗೆ ಒಳಪಡಿಸಲಾಗಿದೆ. ಇದರಲ್ಲಿ ಬೆಂಗಳೂರು 18ನೇ ಸ್ಥಾನದಲ್ಲಿದ್ದು, ಆಡಳಿತದಲ್ಲಿ ಮುಂಬೈ 3ನೇಸ್ಥಾನ ಪಡೆದರೆ, ಹೈದರಾಬಾದ್ 9ನೇ ಸ್ಥಾನದಲ್ಲಿದೆ. ಹಣಕಾಸು ವಿಭಾಗದಲ್ಲಿಆದಾಯ ನಿರ್ವಹಣೆ, ವೆಚ್ಚ ನಿರ್ವಹಣೆ, ಹಣಕಾಸು ಹೊಣೆಗಾರಿಕೆ,ವಿತ್ತೀಯ ವಿಕೇಂದ್ರೀಕರಣ ವಿಭಾಗದಲ್ಲಿ ಬೆಂಗಳೂರು 40ನೇ ಸ್ಥಾನದಲ್ಲಿದೆ. ಇದು ಹಣಕಾಸು ನಿರ್ವಹಣೆಯಲ್ಲಿ ತೀರಾ ಕಳಪೆ ಸ್ಥಾನದಲ್ಲಿರುವುದನ್ನುತೋರಿಸುತ್ತದೆ. ಹಣಕಾಸು ನಿರ್ವಹಣೆಯಲ್ಲಿ ಚೆನ್ನೈ 3 ಮತ್ತು ಹೈದರಾಬಾದ್ 12ನೇ ಸ್ಥಾನದಲ್ಲಿವೆ.
ಮಹಾನಗರಗಳ ಸಾಧನೆ :
ಮಹಾನಗರ ಪಾಲಿಕೆ/ ಸೇವೆಗಳು/ ಹಣಕಾಸು/ ತಾಂತ್ರಿಕತೆ/ ನಗರಯೋಜನೆ/ ಆಡಳಿತ
ಬೆಂಗಳೂರು 25/ 40 /25/ 36 /18
ಚೆನ್ನೈ 17/ 3/ 18/ 44/ 25
ಹೈದರಾಬಾದ್ 45/ 12/ 13/ 17/ 9
ದಕ್ಷಿಣ ದೆಹಲಿ 4/ 18/ 45/ 28/ 44
ಉತ್ತರ ದೆಹಲಿ 35/ 44 /47/ 32/ 48
ಪೂರ್ವ ದೆಹಲಿ 39/ 28/ 43/ 39/ 30
ಬೃಹತ್ ಮುಂಬೈ 21/ 45 /11 /2 /3
–ಎನ್.ಎಲ್. ಶಿವಮಾದು