Advertisement

ಅನಗತ್ಯ ಸಂಚಾರಕ್ಕಿಲ್ಲ ಅವಕಾಶ : ಎಸ್ ಪಿ

04:14 PM May 10, 2021 | Team Udayavani |

ಬೀದರ: ಸರ್ಕಾರದ ಆದೇಶದಂತೆ ಮೇ 10ರ ಬೆಳಗ್ಗೆ 6ರಿಂದ 24ರ ಬೆಳಗ್ಗೆ 6ರವರೆಗೆ ಹೊಸ ಕಠಿಣ ನಿಯಮ ಜಾರಿಗೆ ಬರಲಿದ್ದು, ಜಿಲ್ಲಾದ್ಯಂತ ವಿಶೇಷ ರಿಯಾಯತಿ ನೀಡಲಾದ ಕರ್ತವ್ಯಗಳಿಗೆ ಹೊರತುಪಡಿಸಿ ಮತ್ಯಾವುದೇ ಕಾರಣಕ್ಕೂ ಸಾರ್ವಜನಿಕರು ಅನಗತ್ಯ ಸಂಚಾರ ಮಾಡುವುದು/ಮನೆಯಿಂದ ಹೊರಗಡೆ ಬರುವುದು ಮಾಡತಕ್ಕದಲ್ಲ ಎಂದು ಎಸ್‌ಪಿ ನಾಗೇಶ ಡಿ.ಎಲ್‌ ತಿಳಿಸಿದ್ದಾರೆ.

Advertisement

ಅಂತರರಾಜ್ಯ, ಅಂತರ ಜಿಲ್ಲಾ ಗಡಿ ರಸ್ತೆಗಳನ್ನು ಬಂದ್‌ ಮಾಡಲಾಗುತ್ತಿದ್ದು, ಸಾರ್ವಜನಿಕರಿಗೆ ಅಂತರರಾಜ್ಯ/ಅಂತರ ಜಿಲ್ಲಾ ಸಂಚಾರಕ್ಕೆ ಅವಕಾಶ ಇರುವುದಿಲ್ಲ. ಕೇವಲ ಸರಕು ಸಾಗಣೆ ವಾಹನಗಳ ಸಂಚಾರಕ್ಕೆ ಮಾತ್ರ ಅವಕಾಶ ಇರುತ್ತದೆ. ದಿನಾಲೂ ಬೆಳಿಗ್ಗೆ 6ರಿಂದ 10ರ ವರೆಗೆ ಅಗತ್ಯ ವಸ್ತುಗಳಿಗೆ ಸಂಬಂ  ಧಿಸಿದ ಅಂಗಡಿಗಳು ಮಾತ್ರ ತೆರೆಯಲಿದ್ದು, ಅಗತ್ಯ ವಸ್ತುಗಳ ಖರೀದಿಗೆ ಹೋಗುವವರು ತಮ್ಮ ಮನೆಯ ಸಮೀಪದ ಅಂಗಡಿಗಳಿಗೆ ಕಾಲ್ನಡಿಗೆ ಯಲ್ಲಿಯೇ ಹೋಗಬೇಕು. ಯಾವುದೇ ವಾಹನ ಉಪಯೋಗಿಸತಕ್ಕದಲ್ಲ. ಒಂದು ವೇಳೆ ವಾಹನದಲ್ಲಿ ತೆರಳಿದರೆ ಅಂತಹವರ ವಾಹನಗಳನ್ನು ಜಪ್ತಿ ಮಾಡಲಾಗುವುದು ಎಂದು ಪ್ರಕಟಣೆ ಮೂಲಕ ಎಚ್ಚರಿಕೆ ನೀಡಿದ್ದಾರೆ.

ಅಗತ್ಯ ಸೇವೆ ನೀಡುವ ಅಧಿಕಾರಿ, ಸಿಬ್ಬಂದಿಯವರಿಗೆ (ಕೇಬಲ ಆಪರೇಟರ್‌, ಮೇಡಿಕಲ್‌ ಅಂಗಡಿ ಸಿಬ್ಬಂದಿ, ದೂರ ಸಂಪರ್ಕ ನೌಕರರು, ಕಂದಾಯ ಇಲಾಖೆ, ಕೋರಿಯರ್‌ ಬಾಯ್ಸ, ಕಿರಾಣಿ ಅಂಗಡಿ, ಹೋಟೆಲ್‌ ಮಾಲೀಕರು/ ಸಿಬ್ಬಂದಿಗಳು) ಯಾವುದೇ ವಿಶೇಷ ಗುರುತಿನ ಚೀಟಿ ನೀಡಲಾಗುವುದಿಲ್ಲ. ಅವರ ಅ ಧಿಕಾರಿಗಳು/ಮಾಲೀಕರು ನೀಡುವಂತಹ ಗುರುತಿನ ಚೀಟಿ ಬಳಸಬೇಕು ಎಂದು ಹೇಳಿದ್ದಾರೆ.

ಖಾಸಗಿ ಔಷಧಿ  ಕಾರ್ಖಾನೆಗಳನ್ನು ನಡೆಸಲು ಅನುಮತಿವಿದ್ದು, ಕಾರ್ಖಾನೆಯವರು ತಮ್ಮ ಕಾರ್ಮಿಕರನ್ನು ವಿಶೇಷ ಬಸ್‌/ವಾಹನ ವ್ಯವಸ್ಥೆ ಮಾಡಿ ಅದರಲ್ಲಿ ಅವರಿಗೆ ಸಂಚಾರ/ಸಾಗಾಟ ಮಾಡಬೇಕು. ಆಟೋ ಮತ್ತು ಟ್ಯಾಕ್ಸಿಗಳು ಆಸ್ಪತ್ರೆಗಳಿಗೆ ರೋಗಿಗಳಿಗೆ/ಜನರಿಗೆ ಒಯ್ಯಲು ಮಾತ್ರ ಸಂಚರಿಸಲು ಅನುಮತಿಸಲಾಗುವುದು. ಸಾರ್ವಜನಿಕರು ಪೊಲೀಸ್‌ ಇಲಾಖೆಯೊಂದಿಗೆ ಸಹಕರಿಸಿ ಸರ್ಕಾರ ಜಾರಿಗೆ ತಂದಿರುವ ನಿಯಮ ಪಾಲನೆ ಮಾಡಿ ಕೋವಿಡ್‌ ನಿಯಂತ್ರಣಕ್ಕೆ ಸಹಕರಿಸಬೇಕು ಎಂದು ಮನವಿ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next