Advertisement

ಸದ್ಯದ ಪರಿಸ್ಥಿತಿಯಲ್ಲಿ ಭಾರತದ ಜತೆ ವ್ಯಾಪಾರವಿಲ್ಲ: ಪಾಕ್‌ ಪಿಎಂ

08:31 PM Apr 03, 2021 | Team Udayavani |

ಇಸ್ಲಾಮಾಬಾದ್‌: ಭಾರತದ ಜತೆಗೆ ಸದ್ಯದ ಪರಿಸ್ಥಿತಿಯಲ್ಲಿ ವ್ಯಾಪಾರ ಬಾಂಧವ್ಯ ಪುನಾರಂಭಿಸಲು ಸಾಧ್ಯವಿಲ್ಲ ಎಂದು ಪಾಕಿಸ್ತಾನ ಪ್ರಧಾನಿ ಇಮ್ರಾನ್‌ ಖಾನ್‌ ಹೇಳಿದ್ದಾರೆ.

Advertisement

ತಮ್ಮ ಸಂಪುಟದ ಸದಸ್ಯರ ಜತೆಗೆ ಮಾತುಕತೆ ನಡೆಸಿದ ಬಳಿಕ ಪ್ರಧಾನಿ ಇಮ್ರಾನ್‌ ಈ ಅಂಶ ಸ್ಪಷ್ಟಪಡಿಸಿದ್ದಾರೆ. ಪಾಕಿಸ್ತಾನದ ಆರ್ಥಿಕ ಸಹಕಾರ ಮಂಡಳಿ ಭಾರತದಿಂದ ಸಕ್ಕರೆ, ಹತ್ತು ಮತ್ತು ಯಾರ್ನ್ ಆಮದು ಮಾಡಿಕೊಳ್ಳುವ ಬಗ್ಗೆ ಸಲಹೆ ನೀಡಿತ್ತು.

ಈ ಬಗ್ಗೆ ವಾಣಿಜ್ಯ ಸಚಿವಾಲಯಕ್ಕೆ ಸೂಚನೆ ನೀಡಿದ್ದ ಪ್ರಧಾನಿ ಖಾನ್‌, ಭಾರತದ ಬದಲಾಗಿ ಬೇರೊಂದು ಮೂಲದಿಂದ ಸಕ್ಕರೆ, ಹತ್ತಿ ಮತ್ತು ಯಾರ್ನ್ ಆಮದು ಮಾಡುವ ಬಗ್ಗೆ ಮಾರ್ಗೋಪಾಯಗಳನ್ನು ಹುಡುಕುವಂತೆ ಸೂಚಿಸಿದ್ದಾರೆ.

ಇದನ್ನೂ ಓದಿ :ಮಹಾರಾಷ್ಟ್ರದಲ್ಲಿ ಕೋವಿಡ್‌ ಉಲ್ಬಣ: 1 ರಿಂದ 8ನೇ ತರಗತಿ ಪರೀಕ್ಷೆ ರದ್ದುಗೊಳಿಸಿದ ಸರ್ಕಾರ    

Advertisement

Udayavani is now on Telegram. Click here to join our channel and stay updated with the latest news.

Next