Advertisement

ಈ ಪರಿಸ್ಥಿತಿಯಲ್ಲಿ ಭಾರತದ ಜತೆ ಯಾವುದೇ ವ್ಯವಹಾರ ಇಲ್ಲ: ಇಮ್ರಾನ್ ಖಾನ್

01:00 PM Apr 03, 2021 | Team Udayavani |

ಇಸ್ಲಾಮಾಬಾದ್: ಪ್ರಸ್ತುತ ಸಂದರ್ಭದಲ್ಲಿ ಭಾರತದ ಜತೆ ಪಾಕಿಸ್ತಾನ ಯಾವುದೇ ವ್ಯಾಪಾರ, ವಹಿವಾಟು ನಡೆಸುವುದಿಲ್ಲ ಎಂದು ಪ್ರಧಾನಿ ಇಮ್ರಾನ್ ಖಾನ್ ಘೋಷಿಸಿದ್ದು, ಇದರ ಬೆನ್ನಲ್ಲೇ ಪಾಕಿಸ್ತಾನದ ಜವಳಿ ವಲಯ ತೀವ್ರ ಅಸಮಾಧಾನವ್ಯಕ್ತಪಡಿಸಿರುವುದಾಗಿ ವರದಿ ತಿಳಿಸಿದೆ.

Advertisement

ಇದನ್ನೂ ಓದಿ:ಈಶ್ವರಪ್ಪರನ್ನು ಉಚ್ಚಾಟಿಸಿ ಇಲ್ಲವೇ ನೀವು ರಾಜೀನಾಮೆ ನೀಡಿ: ಸಿಎಂ ಗೆ ಡಿಕೆ ಶಿವಕುಮಾರ್ ಸವಾಲು

ಪಿಟಿಐ ನ್ಯೂಸ್ ಏಜೆನ್ಸಿ ಪ್ರಕಾರ, ಇತ್ತೀಚೆಗೆ ಪಾಕಿಸ್ತಾನದ ಆರ್ಥಿಕ ಸಹಕಾರ ಸಮಿತಿ, ಭಾರತದಿಂದ ಹತ್ತಿ ಆಮದು, ಹತ್ತಿ ನೂಲು ಹಾಗೂ ಸಕ್ಕರೆಯನ್ನು ಮಾಡಿಕೊಳ್ಳಬೇಕೆಂದು ಶಿಫಾರಸು ಮಾಡಿರುವುದಾಗಿ ತಿಳಿಸಿದೆ.

ಈ ಹಿನ್ನೆಲೆಯಲ್ಲಿ ಅಧಿಕಾರಿಗಳ ಜತೆ ಸಭೆ ನಡೆಸಿದ್ದ ಇಮ್ರಾನ್ ಖಾನ್ ಸರ್ಕಾರ ಶಿಫಾರಸನ್ನು ತಿರಸ್ಕರಿಸಿತ್ತು ಎಂದು ವರದಿ ವಿವರಿಸಿದೆ. ಜಮ್ಮು ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದು ನಿರ್ಧಾರವನ್ನು ವಾಪಸ್ ಪಡೆಯುವವರೆಗೂ ಭಾರತದೊಂದಿಗೆ ವ್ಯಾಪಾರ ಸಾಧ್ಯವಿಲ್ಲ ಎಂದು ಇಮ್ರಾನ್ ಖಾನ್ ತಿಳಿಸಿರುವುದಾಗಿ ವರದಿ ಹೇಳಿದೆ.

ಕಾಶ್ಮೀರ ವಿವಾದದ ಹಿನ್ನೆಲೆಯಲ್ಲಿ ಭಾರತದಿಂದ ಯಾವುದೇ ವಸ್ತುಗಳನ್ನು ಆಮದು ಮಾಡಿಕೊಳ್ಳಬಾರದು ಎಂದು ಎರಡು ವರ್ಷಗಳ ಹಿಂದೆ ಹೇರಿದ್ದ ನಿಷೇಧವನ್ನು ತೆರವುಗೊಳಿಸುವ ನಿಟ್ಟಿನಲ್ಲಿ ನೂತನವಾಗಿ ಆಯ್ಕೆಯಾಗಿದ್ದ ಆರ್ಥಿಕ ಸಹಕಾರ ಸಮಿತಿಯ ಹಮ್ಮದ್ ಅಜರ್, ಭಾರತದಿಂದ ಹತ್ತಿ ಆಮದು ಮಾಡಿಕೊಳ್ಳಬೇಕೆಂದು ಶಿಫಾರಸು ಮಾಡಿತ್ತು. ಆದರೆ ಪಾಕಿಸ್ತಾನ ಸರ್ಕಾರ ಯೂ ಟರ್ನ್ ಹೊಡೆದಿದೆ ಎಂದು ವರದಿ ತಿಳಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next