Advertisement

ಅಂಬೇಡ್ಕರ್‌ ಮತ್ತು ಮಹಾ ಆಘಾಡಿಯ ನಡುವೆ ಯಾವುದೇ ಮಾತುಕತೆ ನಡೆದಿಲ್ಲ: ಪವಾರ್‌

05:28 PM Jan 28, 2023 | Team Udayavani |

ಕೊಲ್ಲಾಪುರ: ಉದ್ಧವ್‌ ಠಾಕ್ರೆ ನೇತೃತ್ವದ ಶಿವಸೇನೆ ಮತ್ತು ಪ್ರಕಾಶ್‌ ಅಂಬೇಡ್ಕರ್‌ ಅವರ ವಂಚಿತ್‌ ಬಹುಜನ ಅಘಾಡಿ (ವಿಬಿಎ) ಮೈತ್ರಿ ಮಾಡಿಕೊಂಡ ಕೆಲವು ದಿನಗಳ ನಂತರ, ಮಹಾ ವಿಕಾಸ್‌ ಅಘಾಡಿ ನಡುವೆ ಇದುವರೆಗೆ ಯಾವುದೇ ಮಾತುಕತೆ ನಡೆದಿಲ್ಲ ಎಂದು ಎನ್‌ಸಿಪಿ ಮುಖ್ಯಸ್ಥ ಶರದ್‌ ಪವಾರ್‌ ಶನಿವಾರ ಹೇಳಿದ್ದಾರೆ.

Advertisement

ಪಶ್ಚಿಮ ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್‌, ಎನ್‌ಸಿಪಿ ಮತ್ತು ಠಾಕ್ರೆ ನೇತೃತ್ವದ ಶಿವಸೇನೆ ಒಟ್ಟಾಗಿ ಸ್ಪರ್ಧಿಸಲಿವೆ ಎಂದು ಹೇಳಿದ್ದಾರೆ. ಉದ್ಧವ್‌ ಠಾಕ್ರೆ ಅವರ ಶಿವಸೇನೆ ಮತ್ತು ವಿಬಿಎ ಮೈತ್ರಿ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಮಾಜಿ ಕೇಂದ್ರ ಸಚಿವ ಪವಾರ್‌ ಅವರು, ಚುನಾವಣೆಗೂ ಮುನ್ನ ಪ್ರಕಾಶ್‌ ಅಂಬೇಡ್ಕರ್‌ ಅವರ ವಿಬಿಎ ಬಗ್ಗೆ ಎಂವಿಎಯಲ್ಲಿ ಯಾವುದೇ ಮಾತುಕತೆ ನಡೆದಿಲ್ಲ. ಅವರ ನಡುವೆ ಯಾವಾಗ ಚರ್ಚೆ ನಡೆದಿವು ಎನ್ನುವ ಬಗ್ಗೆಯೂ ಎಂದು ನಮಗೆ ತಿಳಿದಿಲ್ಲ. ನಾವು ಅದರ ಬಗ್ಗೆ ಏನನ್ನೂ ಚರ್ಚಿಸುವುದಿಲ್ಲ.

ಕಾಂಗ್ರೆಸ್‌, ಎನ್‌ಸಿಪಿ ಮತ್ತು ಠಾಕ್ರೆ ನೇತೃತ್ವದ ಶಿವಸೇನೆ ಮುಂಬರುವ ಚುನಾವಣೆಯಲ್ಲಿ ಒಟ್ಟಾಗಿ ಸ್ಪರ್ಧಿಸಲಿವೆ. ನಾವು ಅಂಬೇಡ್ಕರ್‌ ಅವರೊಂದಿಗೆ ಯಾವುದೇ ಚರ್ಚೆ ನಡೆಸಿಲ್ಲ ಎಂದು ಅವರು ಹೇಳಿದರು.

ಎನ್‌ಸಿಪಿ ಮತ್ತು ಠಾಕ್ರೆ ನೇತೃತ್ವದ ಸೇನೆಯು ಕಾಂಗ್ರೆಸ್‌ ಜೊತೆಗೆ ಎಂವಿಎ ಭಾಗವಾಗಿದೆ. ಮೂರು ಪಕ್ಷಗಳ ಮೈತ್ರಿ 2019 ರಿಂದ 2022ರ ಜೂನ್‌ ಅಂತ್ಯದವರೆಗೆ ಅಧಿಕಾರದಲ್ಲಿತ್ತು. ಠಾಕ್ರೆ ನೇತೃತ್ವದ ಸರ‌ಕಾರವು ಅವರ ಪಕ್ಷದ ಹಿರಿಯ ನಾಯಕ ಏಕನಾಥ್‌ ಶಿಂಧೆ ಮತ್ತು ಅವರ ಬೆಂಬಲಿಗ ಶಾಸಕರ ಬಂಡಾಯದ ನಂತರ ಪತನಗೊಂಡಿತು. ಅವರು ಭಾರತೀಯ ಜನತಾ ಪಕ್ಷ (ಬಿಜೆಪಿ )ಯೊಂದಿಗೆ ಕೈಜೋಡಿಸಿ ಅಧಿಕಾರಕ್ಕೆ ಬಂದರು.

ಪುಣೆಯ ಕಸ್ಬಾ ಮತ್ತು ಚಿಂಚಾಡ್‌ ವಿಧಾನಸಭಾ ಕ್ಷೇತ್ರಗಳಿಗೆ ಮುಂಬರುವ ಉಪಚುನಾವಣೆಗಳು ಅವಿರೋಧವಾಗಿ ನಡೆಯಲು ಎಂವಿಎ ಬೆಂಬಲವನ್ನು ಕೋರುವುದಾಗಿ ಬಿಜೆಪಿ ಹೇಳಿದೆ. ಈ ಕ್ಷೇತ್ರಗಳ ಹಾಲಿ ಬಿಜೆಪಿ ಶಾಸಕರು ಇತ್ತೀಚೆಗೆ ನಿಧನರಾದ ಕಾರಣ ಉಪಚುನಾವಣೆ ಅನಿವಾರ್ಯವಾಗಿದೆ. ಈ ಬಗ್ಗೆ ಪವಾರ್‌ ಅವರನ್ನು ಪ್ರಶ್ನಿಸಿದಾಗ, ರಾಜ್ಯ ಬಿಜೆಪಿ ಮುಖ್ಯಸ್ಥ ಚಂದ್ರಕಾಂತ್‌ ಪಾಟೀಲ್‌ ಅವರು ಯಾರಿಗೆ ಪತ್ರ ಬರೆಯುತ್ತಿದ್ದಾರೆಂದು ನನಗೆ ತಿಳಿದಿಲ್ಲ, ಅದರ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ, ಅವರು ಅವಿರೋಧವಾಗಿ ಹೇಗೆ ಯೋಚಿಸಲಿಲ್ಲ ಎಂದು ನನಗೆ ತಿಳಿದಿಲ್ಲ. ಕೊಲ್ಲಾಪುರ ಮತ್ತು ಪಂಢರಪುರ ಉಪಚುನಾವಣೆ ಸಮಯದಲ್ಲಿ ಅವಿರೋಧವಾಗಿ ಏಕೆ ಯೋಚಿಸಲಿಲ್ಲ.

Advertisement

2019 ರ ನವೆಂಬರ್‌ನಲ್ಲಿ ದೇವೇಂದ್ರ ಫಡ್ನವೀಸ್‌ ಮತ್ತು ಅಜಿತ್‌ ಪವಾರ್‌ ಅವರ ಮುಂಜಾನೆ ಪ್ರಮಾಣ ವಚನ ಸ್ವೀಕಾರ ಸಮಾರಂಭದ ಬಗ್ಗೆ ಕೇಳಿದಾಗ, ಇದೀಗ ಎರಡು ವರ್ಷಗಳು ಕಳೆದಿವೆ. ನೀವು ಯಾಕೆ ಆ ವಿಷಯವನ್ನು ಪ್ರಸ್ತಾಪಿಸುತ್ತಿದ್ದೀರಿ? 2019 ರ ಅಸೆಂಬ್ಲಿ ಚುನಾವಣಾ ಫಲಿತಾಂಶಗಳ ನಂತರ, ಫಡ್ನವೀಸ್‌ ಅವರು ನವೆಂಬರ್‌ 23 ರಂದು ಅಜಿತ್‌ ಪವಾರ್‌ ಅವರು ಉಪಮುಖ್ಯಮಂತ್ರಿಯಾದರು. ಇಬ್ಬರೂ ಮುಂಜಾನೆಯ ಸಮಾರಂಭದಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಆದರೆ ಸರಕಾರವು ಕೇವಲ 80 ಗಂಟೆಗಳ ಕಾಲ ನಡೆಯಿತು.

ತೆಲಂಗಾಣ ಮುಖ್ಯಮಂತ್ರಿ ಚಂದ್ರಶೇಖರ್‌ ರಾವ್‌ ಅವರ ಬಗ್ಗೆ ಕೇಳಿದ ಪ್ರಶ್ನೆಗೆ ಪವಾರ್‌ ಅವರು ಮಾತನಾಡಿ, ವಿವಿಧ ಪಕ್ಷಗಳ ನಾಯಕರನ್ನು ಒಟ್ಟುಗೂಡಿಸಲು ಪ್ರಯತ್ನಿಸುತ್ತಿರುವುದಾಗಿ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next