Advertisement

ಬುಮ್ರಾಗೆ ಸರ್ಜರಿ ಅಗತ್ಯವಿಲ್ಲ

11:53 PM Oct 26, 2019 | Team Udayavani |

ಹೊಸದಿಲ್ಲಿ: ಗಾಯದ ಸಮಸ್ಯೆಗೆ ತುತ್ತಾಗಿರುವ ಟೀಮ್‌ ಇಂಡಿಯಾದ ಪ್ರಧಾನ ವೇಗಿ ಜಸ್‌ಪ್ರೀತ್‌ ಬುಮ್ರಾಗೆ ಶಸ್ತ್ರಚಿಕಿತ್ಸೆ ಬೇಕಾಗಿಲ್ಲ ಎಂದು ಬೌಲಿಂಗ್‌ ಕೋಚ್‌ ಭರತ್‌ ಅರುಣ್‌ ಹೇಳಿದ್ದಾರೆ.

Advertisement

ದಕ್ಷಿಣ ಆಫ್ರಿಕಾ ಸರಣಿಯ ಆರಂ ಭಕ್ಕೂ ಮುನ್ನ ಜಸ್‌ಪ್ರೀತ್‌ ಬುಮ್ರಾ ಬೆನ್ನಿನ ಕೆಳಭಾಗದ ನೋವಿಗೆ ಸಿಲುಕಿದ್ದರು. ಬಳಿಕ ಹೆಚ್ಚುವರಿ ಚಿಕಿತ್ಸೆ ಹಾಗೂ ತಜ್ಞ ವೈದ್ಯರ ಸಲಹೆಯನ್ನು ಪಡೆಯಲು ಲಂಡನ್ನಿಗೆ ತೆರಳಿದ್ದರು.

ಬುಮ್ರಾಗೆ ಎದುರಾಗಿರುವ ಗಾಯದ ಸಮಸ್ಯೆ ಗಂಭೀರವೇನಲ್ಲ. ಹಾಗಾಗಿ ಶಸ್ತ್ರಚಿಕಿತ್ಸೆಯ ಅಗತ್ಯವಿಲ್ಲ ಎಂಬುದಾಗಿ ಬೌಲಿಂಗ್‌ ಕೋಚ್‌ ಭರತ್‌ ಅರುಣ್‌ ಸ್ಪಷ್ಟಪಡಿಸಿದ್ದಾರೆ.

ಸದ್ಯ ತಂಡಕ್ಕೆ ಮರಳುವುದಿಲ್ಲ
ಆದರೂ ಬುಮ್ರಾ ಕೂಡಲೇ ಸ್ಪರ್ಧಾತ್ಮಕ ಕ್ರಿಕೆಟ್‌ಗೆ ಮರಳುವ ಸಾಧ್ಯತೆ ಕಡಿಮೆ ಎನ್ನಲಾಗಿದೆ. ಮುಂದಿನ ತಿಂಗಳಿಂದ ತವರಿನಲ್ಲಿ ನಡೆಯಲಿ ರುವ ಬಾಂಗ್ಲಾದೇಶ, ವೆಸ್ಟ್‌ ಇಂಡೀಸ್‌ ಹಾಗೂ ಮುಂದಿನ ವರ್ಷಾರಂಭದ ಶ್ರೀಲಂಕಾ ಸರಣಿಯಿಂದಲೂ ಬುಮ್ರಾ ಹೊರ ಗುಳಿಯುವ ಸಾಧ್ಯತೆಯಿದೆ. ಮುಂದಿನ ವರ್ಷ ನ್ಯೂಜಿಲ್ಯಾಂಡ್‌ ಸರಣಿ ವೇಳೆ ಯಷ್ಟೇ ಸಂಪೂರ್ಣ ಫಿಟ್‌ನೆಸ್‌ನೊಂದಿಗೆ ತಂಡಕ್ಕೆ ಮರಳುವ ನಿರೀಕ್ಷೆ ಹೊಂದಲಾಗಿದೆ.

ವಿದೇಶಿ ನೆಲದಲ್ಲಿ ಜಸ್‌ಪ್ರೀತ್‌ ಬುಮ್ರಾ ಅಮೋಘ ಪ್ರದರ್ಶನ ನೀಡಿದ್ದಾರೆ. ಮುಂದಿನ ವರ್ಷ ಆಸ್ಟ್ರೇಲಿಯದಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ನಲ್ಲಿ ಬುಮ್ರಾ ಉಪಸ್ಥಿತಿ ಭಾರತದ ಪಾಲಿಗೆ ಮಹತ್ವದ್ದಾಗಲಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next