Advertisement

ಪಡಿತರ ಧಾನ್ಯ ಪಡೆಯಲು ನೂಕುನುಗ್ಗಲು; ಸಾಮಾಜಿಕ ಅಂತರ ಕಾಪಾಡದ ಜನತೆ

06:43 PM Apr 06, 2020 | keerthan |

ಗಂಗಾವತಿ: ಕೋವಿಡ್-19 ಲಾಕ್ ಡೌನ್ ಹಿನ್ನಲೆಯಲ್ಲಿ ಜನರಿಗೆ ತೊಂದರೆಯಾಗದಂತೆ ಎರಡು ತಿಂಗಳ ಪಡಿತರ ನೀಡಲು ಸರಕಾರ ಸೂಚಿಸಿದೆ. ಆದರೆ ಪಡಿತರ ಆಹಾರ ಪಡೆಯಲು ನೂಕುನುಗ್ಗಲು ಮಾಡುತ್ತಿದ್ದು, ಅಂತರ ಕಾಪಾಡದೆ ಆರೋಗ್ಯದ ನಿರ್ಲಕ್ಟ್ಯ ಮಾಡುತ್ತಿರುವುದು ಜಿಲ್ಲೆಯಲ್ಲಿ ಕಂಡುಬಂತು.

Advertisement

ನ್ಯಾಯಬೆಲೆ ಅಂಗಡಿಗಳಿಗೆ ಆಗಮಿಸುವ ಕಾರ್ಡುದಾರರು ಭೌತಿಕ ದೂರ ಕಾಪಾಡದೇ ನೂಕು ನುಗ್ಗಲು ಮಾಡುತ್ತಿರುವ ದೃಶ್ಯ ಬಹುತೇಕ ನ್ಯಾಯಬೆಲೆ ಅಂಗಡಿಗಳ ಹತ್ತಿರ ನಡೆಯುತ್ತಿದ್ದು ಇದರಿಂದ ಕೊವಿಡ್ -19 ಸೋಂಕು ತಡೆಯುವ ಸರಕಾರದ ಉದ್ದೇಶ ವಿಫಲವಾಗುವಂತಿದೆ.

ಕನಿಷ್ಠ 6 ಅಡಿ ದೂರ ನಿಂತು ಪಡಿತರ ಪಡೆದುಕೊಳ್ಳಬೇಕೆಂಬ ಸಾಮಾನ್ಯ ಜ್ಞಾನವೂ ಜನರಲ್ಲಿ‌ಇಲ್ಲದಿರುವುದರಿಂದ ಪಡಿತರ ವಿತರಣೆಯಲ್ಲಿ ತೊಂದರೆಯಾಗುತ್ತಿದೆ.

ನಗರ ಹಾಗೂ ಗ್ರಾಮೀಣ ಭಾಗದ ನ್ಯಾಯಬೆಲೆ ಅಂಗಡಿಗಳ ಮುಂದೆ ನೂಕುನುಗ್ಗಲು ವ್ಯಾಪಕವಾಗಿದೆ. ತಾಲೂಕು ಆಡಳಿತ ಸೂಕ್ತ ಕ್ರಮ ಜರುಗಿಸಬೇಕಿದೆ.

Advertisement

Udayavani is now on Telegram. Click here to join our channel and stay updated with the latest news.

Next