Advertisement

ಕೋವಿಡ್-19: ಸರಕಾರಿ ಆಸ್ಪತ್ರೆಯಲ್ಲಿ ಭೌತಿಕ ಅಂತರವಿಲ್ಲದೆ ಚಿಕಿತ್ಸೆ

03:11 PM May 04, 2020 | keerthan |

ಗಂಗಾವತಿ: ಕೋವಿಡ್-19 ವೈರಸ್ ಹರಡದಂತೆ ಕಾಪಾಡಬೇಕಾದ ಸರಕಾರಿ ಆಸ್ಪತ್ರೆಯಲ್ಲಿ ಭೌತಿಕ ಅಂತರ ಕಾಪಾಡುವಲ್ಲಿ ವಿಫಲವಾದ ಪ್ರಸಂಗ ಜರುಗಿದೆ.

Advertisement

ಇಲ್ಲಿ ಉಪವಿಭಾಗ ಸರಕಾರಿ ಆಸ್ಪತ್ರೆಯಲ್ಲಿ ಒಳ ಮತ್ತು ಹೊರರೋಗಿಗಳು ಚಿಕಿತ್ಸೆಗಾಗಿ ಬರುತ್ತಿದ್ದು ಹೆಸರು ನೋಂದಾಯಿಸಲು ಜನರು ಕೌಂಟರ್ ಎದುರು ಜನರು‌ ಮುಗಿಬಿದಿದ್ದಾರೆ. ಇವರನ್ನು ಕ್ಯೂನಲ್ಲಿ ನಿಲ್ಲಿಸಲು ಆಸ್ಪತ್ರೆಯ ಯಾವ ಸಿಬ್ಬಂದಿಯೂ ಕರ್ತವ್ಯ ನಿರ್ವಹಿಸುತ್ತಿಲ್ಲ. ಇನ್ನೊಬ್ಬರಿಗೆ ಮಾದರಿಯಾಗಬೇಕಾದ ಸರಕಾರಿ ಆಸ್ಪತ್ರೆಯಲ್ಲಿ ಜನರು ಭೌತಿಕ ಅಂತರ ಕಾಪಾಡಿಕೊಳ್ಳುವಲ್ಲಿ ವಿಫಲರಾಗಿದ್ದಾರೆ.

ಈ ಮೊದಲು ಸಣ್ಣಪುಟ್ಟ ಚಿಕಿತ್ಸೆ ಪಡೆಯಲು ಆಗಮಿಸದಂತೆ ಸೂಚನೆ ನೀಡಲಾಗಿತ್ತು. ಲಾಕ್ ಡೌನ್ ನಲ್ಲಿ ಸ್ವಲ್ಪ ಮಟ್ಟಿಗೆ ಸಡಿಲಿಕೆ ಮಾಡಿದ್ದರಿಂದ ಜನರು ಆಸ್ಪತ್ರೆಗೆ ಚಿಕಿತ್ಸೆ ಗಾಗಿ ಆಗಮಿಸುತ್ತಿದ್ದಾರೆ. ಕ್ಯೂ ನಲ್ಲಿ ಜನರು ನಿಲ್ಲುವಂತೆ ನೋಡಬೇಕಾದ ವೈದ್ಯರು ನಿರ್ಲಕ್ಷ್ಯ ವಹಿಸಿರುವುದು ಕಂಡು ಬರುತ್ತಿದೆ.

ಮಾದರಿಯಾಗಿದ್ದ ಸರಕಾರಿ ಆಸ್ಪತ್ರೆ ಕೋವಿಡ್-19 ಹೆದರಿಕೆಯ ಮಧ್ಯೆದಲ್ಲೂ  ಜನರು ಗುಂಪುಗುಂಪಾಗಿ ಸರಕಾರಿ ಆಸ್ಪತ್ರೆಯಲ್ಲಿ ಸೇರುವ ಮೂಲಕ  ಸೋಂಕಿನ ಬಗ್ಗೆ ಭಯವುಂಟಾಗುವಂತೆ ಮಾಡಿದ್ದಾರೆ. ವೈದ್ಯರು ಜನರನ್ನು ಕ್ಯೂ ನಲ್ಲಿ ಬರುವಂತೆ ಭದ್ರತಾ ಸಿಬ್ಬಂದಿ ಅಥವಾ ಪೊಲೀಸ್ ವ್ಯವಸ್ಥೆ ಮಾಡುವಂತೆ ನಗರಯೋಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷ ಜೋಗದ ಹನುಮಂತಪ್ಪ ಸಲಹೆ ನೀಡಿದ್ದಾರೆ

Advertisement

Udayavani is now on Telegram. Click here to join our channel and stay updated with the latest news.

Next