Advertisement
ದಾಂಗ್ ನ ಸಪುತಾರಾ ಎಂಬ ಹಿಲ್ ಸ್ಟೇಶನ್ ನಲ್ಲಿರುವ ಟ್ರೈಬಲ್ ಮ್ಯೂಸಿಯಂ ಜಗತ್ತು ಪ್ರಸಿದ್ಧ . ಪಶ್ಚಿಮ ಘಟ್ಟಗಳ ನಡುವೆ ಇರುವ ಈ ಹಿಲ್ ಸ್ಟೇಶನ್‌ನಲ್ಲಿ ಏನಿದೆ ಏನಿಲ್ಲ. ಚೆಂದದ ಝರಿ, ಜಲಪಾತಗಳಿವೆ, ಅದ್ಭುತ ಸೀನಿಕ್ ಬ್ಯೂಟಿ ಇರುವ ತಾಣಗಳಿವೆ, ಸುಂದರವಾದ ಸರೋವರವಿದೆ. ಇಲ್ಲಿ ಬೋಟಿಂಗ್ ಇತ್ಯಾದಿ ಮನರಂಜನೆಗೆ ಅವಕಾಶ ಒದಗಿಸಲಾಗಿದೆ.
Related Articles
Advertisement
ದೇಶದಲ್ಲಿಯೇ ಸೆಲ್ಫಿ ಬ್ಯಾನ್ ಮಾಡಿದ ಮೊದಲ ಜಿಲ್ಲೆ ಅನ್ನೋ ಹೆಗ್ಗಳಿಕೆಗೆ ದಾಂಗ್ ಪಾತ್ರವಾಗಿದೆ. ಟಿ ಕೆ ದಮೋರ್ ಅನ್ನೋ ಇಲ್ಲಿನ ಆಡಳಿತಾಧಿಕಾರಿ ಜೂ.23 ರಿಂದ ಇಂಥದ್ದೊಂದು ನಿಯಮ ತಂದಿದ್ದಾರೆ. ಇದಕ್ಕೂ ಮೊದಲು ವಾಘೈ ಹಾಗೂ ಸಪುತಾರಾ ಹೈವೇ, ಜಲಪಾತ ಮೊದಲಾದೆಡೆ ಸೆಲ್ಫಿ ಬ್ಯಾನ್ ಮಾಡಲಾಗಿತ್ತು. ಈಗ ಈ ಊರುಗಳಲ್ಲಿ ಸೆಲ್ಫಿ ಬ್ಯಾನ್ ಮಾತ್ರ ಅಲ್ಲ, ಇಲ್ಲಿನ ಸ್ಥಳೀಯರೂ ಮಳೆಗಾಲದಲ್ಲಿ ನದೀ ತೀರಕ್ಕೆ ಬಟ್ಟೆ ತೊಳೆಯೋದಕ್ಕೆ, ಸ್ನಾನಕ್ಕೆ ಹೋಗುವುದಕ್ಕೂ ನಿಷೇಧ ಹೇರಲಾಗಿದೆ.
ಈ ಕಾನೂನನ್ನು ಯಾಕೆ ಜಾರಿಗೆ ತಂದರು ಅಂತ ನೋಡೋಣ. ಪ್ರಕೃತಿ ಸೌಂದರ್ಯವನ್ನು ಸವಿಯಲು ಅಪಾರ ಸಂಖ್ಯೆಯಲ್ಲಿ ಜನ ಇಲ್ಲಿಗೆ ಬರ್ತಾರೆ. ಹೀಗೆ ಬಂದವರು ಅಪಾಯಕಾರಿ ಜಾಗಗಳಲ್ಲಿ ನಿಂತು ಸೆಲ್ಫಿ ತೆಗೆಯುತ್ತಾರೆ. ಇದರಿಂದ ಈ ಜಾಗದಲ್ಲಿ ಅತ್ಯಧಿಕ ಸಂಖ್ಯೆಯಲ್ಲಿ ಜನರು ಸಾಯುವ ಪ್ರಕರಣಗಳು ಬೆಳಕಿಗೆ ಬಂದಿವೆ.
ಜನರು ಅಪಾಯ ಸ್ಥಳಗಳಲ್ಲಿ ಅಂದ್ರೆ ಜಲಪಾತ, ಬೆಟ್ಟದ ಅಂಚು, ನದಿ ದಂಡೆ, ಇಳಿಜಾರುಗಳಲ್ಲಿ ನಿಂತು ಸೆಲ್ಫಿ ಕ್ಲಿಕ್ಕಿಸುತ್ತಾರೆ. ಮಳೆಗಾಲವಾದ ಕಾರಣ ತೇವಾಂಶಕ್ಕೆ ಕಾಲು ಜಾರಿ ಬಿದ್ದು ಗಂಭೀರ ಗಾಯ ಮಾಡಿಕೊಳ್ಳುತ್ತಾರೆ, ಇಲ್ಲವೇ ಸಾವನ್ನಪ್ಪುತ್ತಾರೆ. ಈ ಕಾರಣದಿಂದ ಈ ಜಾಗಗಳಿಲ್ಲಿ ಸೆಲ್ಫಿಯನ್ನು ಕ್ಲಿಕ್ಕಿಸಿಕೊಳ್ಳಲು ನಿಷೇಧ ಹೇರಲಾಗಿದೆ.
ಇಲ್ಲಿನ ಜಿಲ್ಲಾಡಳಿತ ಇಂಥದ್ದೊಂದು ಕಠಿಣ ಕಾನೂನು ತಂದಿದೆ. ಇನ್ನೇನು ಕೆಲವೇ ದಿನಗಳಲ್ಲಿ ಕೋವಿಡ್ ಕಾರಣಕ್ಕೆ ಮುಚ್ಚಲಾಗಿದ್ದ ಪ್ರವಾಸಿ ತಾಣಗಳು ತೆರೆಯುತ್ತವೆ. ಆಗ ಲಕ್ಷಾಂತರ ಸಂಖ್ಯೆಯಲ್ಲಿ ಆಗಮಿಸುವ ಪ್ರವಾಸಿಗರ ಸುರಕ್ಷತೆಗಾಗಿ ಜಿಲ್ಲಾಡಳಿತ ಈ ನಿಯಮ ತಂದಿದೆ.