Advertisement
ಮಳೆ ಪ್ರಾರಂಭವಾಗಿದೆ. ಬಿಸಿಲು -ಮಳೆಯಿಂದಾಗಿ ಬದಲಾಗುತ್ತಿರುವ ಹವಾಮಾನದಿಂದ ಜನರು ಜ್ವರ, ಶೀತ, ಕೆಮ್ಮು ಬಾಧೆಗೆ ತುತ್ತಾಗುತ್ತಿದ್ದಾರೆ. ಆದರೆ ಸಾರ್ವಜನಿಕರು ಕೋವಿಡ್-19 ಭೀತಿಯಿಂದ ಚಿಕಿತ್ಸೆಗೆ ತೆರಳದೆ ಮನೆಯಲ್ಲಿ ಸ್ವಯಂ ವೈದ್ಯ ಪದ್ಧತಿ ಆಳವಡಿಸುತ್ತಿರುವ ಪ್ರಕರಣಗಳು ಜಿಲ್ಲೆಯಲ್ಲಿ ಕಂಡು ಬರುತ್ತಿವೆ.
ಕ್ಲಿನಿಕ್ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಜಿಲ್ಲೆಯೊಳಗಿನವರಿಗೆ ಎಂದಿನಂತೆ ಅಗತ್ಯವಿರುವ ಚಿಕಿತ್ಸೆಯನ್ನು ನೀಡ ಲಾಗುತ್ತಿದೆ. ರಾಜ್ಯ, ವಿದೇಶದಿಂದ ಬಂದಿರುವವರಲ್ಲಿ ಜ್ವರ, ಶೀತ, ಕೆಮ್ಮು ಲಕ್ಷಣಗಳು ಕಂಡು ಬಂದಾಗ ಮಾತ್ರ ನೇರವಾಗಿ ಜಿಲ್ಲಾಸ್ಪತ್ರೆ, ಸಮುದಾಯ ಆರೋಗ್ಯ ಕೇಂದ್ರ, ತಾಲೂಕು ಆಸ್ಪತ್ರೆಗಳ ಫೀವರ್ ಕ್ಲಿನಿಕ್‌ಗೆ ತೆರಳಿ ಚಿಕಿತ್ಸೆಯನ್ನು ಪಡೆಯಬಹುದಾಗಿದೆ. ಜಿಲ್ಲಾಡಳಿತದ ಆದೇಶ
ಕೋವಿಡ್-19 ಲಕ್ಷಣಗಳಿರುವವರು ಆಸ್ಪತ್ರೆಗಳಿಗೆ ಭೇಟಿ ನೀಡದೆ ಪ್ರಾಥಮಿಕ ಚಿಕಿತ್ಸೆ ಖುದ್ದಾಗಿ ಮಾಡಿಕೊಳ್ಳುವ ಸಾಧ್ಯತೆ ಇರುವುದರಿಂದ ಹಾಗೂ ಕೋವಿಡ್-19 ಶಂಕಿತರನ್ನು ಶೀಘ್ರದಲ್ಲಿ ಪತ್ತೆ ಮಾಡುವ ನಿಟ್ಟಿನಲ್ಲಿ ಜಿಲ್ಲಾಡಳಿತ ಮೆಡಿಕಲ್‌ಗಳಲ್ಲಿ ಪ್ಯಾರಸಿಟಮಾಲ್, ಡೋಲಾ, ಕಾಲ್‌ಪೋಲ್, ಶೀತ, ಕೆಮ್ಮು, ಗಂಟಲು ತುರಿಸುವುದು ಸೇರಿದಂತೆ ಜ್ವರ, ಶೀತಕ್ಕೆ ಸಂಬಂಧಿಸಿದ ವಿವಿಧ ಔಷಧಗಳನ್ನು ಮಾರಾಟ ಮಾಡದಂತೆ ಜಿಲ್ಲಾಡಳಿತ ಕಟ್ಟುನಿಟ್ಟಿನ ಆದೇಶ ಹೊರಡಿಸಿದೆ.
Related Articles
ವಿವಿಧ ಜಿಲ್ಲೆಗಳಿಗೆ ಹೋಗುವವರು ಮೆಡಿಕಲ್‌ಗಳಿಗೆ ಬಂದು ಜ್ವರ ಹಾಗೂ ಶೀತ ಮಾತ್ರೆಯನ್ನು ಕೇಳುತ್ತಾರೆ. ಆದರೆ ನಾವು ಜಿಲ್ಲಾಡಳಿತ ಆದೇಶದ ಅನ್ವಯ ಅವರನ್ನು ಆಸ್ಪತ್ರೆಗೆ ಹೋಗಿ ವೈದ್ಯರನ್ನು ಸಂಪರ್ಕಿಸುವಂತೆ ಮನವಿ ಮಾಡುತ್ತೇವೆ. ಗ್ರಾಮೀಣ ಭಾಗದ ವಾತಾವರಣದ ವೈಪರೀತ್ಯದಿಂದ ಜ್ವರ ಕಾಣಿಸಿಕೊಂಡವರು ಮಾತ್ರೆ ಕೇಳುತ್ತಾರೆ. ಅವರಿಗೂ ಔಷಧಗಳನ್ನು ನೀಡುತ್ತಿಲ್ಲ ಎಂದು ಸ್ವಯಂ ಚಿಕಿತ್ಸೆ ಬೇಡ ಜಿಲ್ಲೆಯಲ್ಲಿ ಇನ್ನೇನು ಮಳೆಗಾಲ ಪ್ರಾರಂಭವಾಗಲಿದೆ. ಶೀತ, ಜ್ವರ ಬಂದರೆ ನೇರವಾಗಿ ಜಿಲ್ಲಾಸ್ಪತ್ರೆ, ತಾಲೂಕು ಆಸ್ಪತ್ರೆ, ಸಮುದಾಯ ಆಸ್ಪತ್ರೆಗಳಲ್ಲಿರುವ ಫೀವರ್ ಕ್ಲಿನಿಕ್‌ಗೆ ತೆರಳಿ, ಅಲ್ಲಿ ವೈದ್ಯರನ್ನು ಸಂಪರ್ಕಿಸಿ ವೈದ್ಯರು ಅಗತ್ಯವಿರುವ ರೋಗಿಯ ಗಂಟಲ ದ್ರವ ಪರೀಕ್ಷೆ ಮಾಡಲಿದ್ದಾರೆ. ಮುನ್ನೆಚ್ಚರಿಕೆ ಕ್ರಮವಾಗಿ ವೈದ್ಯರ ಸಲಹೆ ಮೇರೆಗೆ ಔಷಧ ಪಡೆಯಿರಿ.
-ಡಾ| ಸುಧೀರ್‌ಚಂದ್ರ ಸೂಡ, ಡಿಎಚ್‌ಒ, ಉಡುಪಿ.
Advertisement