Advertisement

 MUDAದಲ್ಲಿ ಯಾವ ಹಗರಣವೂ ನಡೆದಿಲ್ಲ: ಸಚಿವ ಭೈರತಿ ಸುರೇಶ್‌

12:21 AM Jul 06, 2024 | Team Udayavani |

ಚಾಮರಾಜನಗರ: ಮುಡಾದಲ್ಲಿ ಯಾವ ಹಗರಣವೂ ನಡೆದಿಲ್ಲ. ಅದು ಹಗರಣ ಅಂತಾ ಸಾಬೀತಾಗಿಲ್ಲ. ಹಗರಣ ಇದ್ದರೆ ತಾನೇ ಆಚೆಗೆ ಬರೋದು ಎಂದು ನಗರಾಭಿವೃದ್ಧಿ ಇಲಾಖೆ ಸಚಿವ ಭೈರತಿ ಸುರೇಶ್‌ ಪ್ರತಿಕ್ರಿಯಿಸಿದರು.

Advertisement

ಸುದ್ದಿಗಾರರ ಜತೆ ಮಾತನಾಡಿ, ನಿವೇಶನಗಳನ್ನು ರೈತರಿಗೆ ಕೊಟ್ಟಿದ್ದಾರಾ? ಮಧ್ಯವರ್ತಿಗಳಿಗೆ ಕೊಟ್ಟಿದ್ದಾರಾ? ಯಾರಿಗೆ ಕೊಟ್ಟಿದ್ದಾರೆ ಅಂತ ಗೊತ್ತಾಗಿಲ್ಲ. ಮುಡಾ ಹಗರಣ ಹೊರಬರಲು ಸಿಎಂ ಕುರ್ಚಿಗೆ ಟವಲ್‌ ಹಾಕಿರೋರೆ ಕಾರಣ ಎಂಬ ಎಚ್‌ಡಿಕೆ ಹೇಳಿಕೆಗೆ ಪ್ರತಿಕ್ರಿಯಿಸಿ, ಡಿಸಿಎಂ ಶಿವಕುಮಾರ್‌ ಬೆಂಗಳೂರು ನಗರಾಭಿವೃದ್ಧಿ ಸಚಿವರು. ಇದೆಲ್ಲಾ ಸುಳ್ಳು ಆಪಾದನೆ. ಅವರಿಗೂ ಮುಡಾಗೂ ಸಂಬಂಧವಿಲ್ಲ ಎಂದರು.

ಸೈಟ್‌ ಕೇಳಲು ಮನೆಗೆ ಬಂದಿದ್ದ ವಿಶ್ವನಾಥ್‌
ಮಾಜಿ ಸಚಿವ ಎಚ್‌. ವಿಶ್ವನಾಥ್‌ ಮತ್ತು ಆತನ ಮಗ ಸೈಟ್‌ ಕೇಳ್ಳೋಕೆ ನನ್ನ ಮನೆಗೆ ಬಂದಿದ್ದ ಫೋಟೋ ಇದೆ. ಸದ್ಯದಲ್ಲೇ ಬಿಡುಗಡೆ ಮಾಡ್ತೀನಿ. ಅವನು ಏಕವಚನದಲ್ಲಿ ಮಾತನಾಡಿದರೆ, ಅದಕ್ಕಿಂತ ಹೆಚ್ಚಿಗೆ ನಾನೂ ಮಾತಾಡ್ತೀನಿ. ಮರ್ಯಾದೆ ಕೊಟ್ಟು, ಮರ್ಯಾದೆ ತೆಗೆದುಕೊಳ್ಳಲಿ ಎಂದು ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್‌ ಕಿಡಿಕಾರಿದರು. ಸುದ್ದಿಗಾರರೊಂದಿಗೆ ಮಾತನಾಡಿ, ಯಾರ್ರೀ ಅವ್ನು ವಿಶ್ವನಾಥ್‌? ರಿಯಲ್‌ ಎಸ್ಟೇಟ್‌ ಒಂದು ಉದ್ಯಮ ಅಲ್ವಾ? ಎಂದರು.

Advertisement

Udayavani is now on Telegram. Click here to join our channel and stay updated with the latest news.

Next