Advertisement
ಸುದ್ದಿಗಾರರ ಜತೆ ಮಾತನಾಡಿ, ನಿವೇಶನಗಳನ್ನು ರೈತರಿಗೆ ಕೊಟ್ಟಿದ್ದಾರಾ? ಮಧ್ಯವರ್ತಿಗಳಿಗೆ ಕೊಟ್ಟಿದ್ದಾರಾ? ಯಾರಿಗೆ ಕೊಟ್ಟಿದ್ದಾರೆ ಅಂತ ಗೊತ್ತಾಗಿಲ್ಲ. ಮುಡಾ ಹಗರಣ ಹೊರಬರಲು ಸಿಎಂ ಕುರ್ಚಿಗೆ ಟವಲ್ ಹಾಕಿರೋರೆ ಕಾರಣ ಎಂಬ ಎಚ್‌ಡಿಕೆ ಹೇಳಿಕೆಗೆ ಪ್ರತಿಕ್ರಿಯಿಸಿ, ಡಿಸಿಎಂ ಶಿವಕುಮಾರ್ ಬೆಂಗಳೂರು ನಗರಾಭಿವೃದ್ಧಿ ಸಚಿವರು. ಇದೆಲ್ಲಾ ಸುಳ್ಳು ಆಪಾದನೆ. ಅವರಿಗೂ ಮುಡಾಗೂ ಸಂಬಂಧವಿಲ್ಲ ಎಂದರು.
ಮಾಜಿ ಸಚಿವ ಎಚ್. ವಿಶ್ವನಾಥ್ ಮತ್ತು ಆತನ ಮಗ ಸೈಟ್ ಕೇಳ್ಳೋಕೆ ನನ್ನ ಮನೆಗೆ ಬಂದಿದ್ದ ಫೋಟೋ ಇದೆ. ಸದ್ಯದಲ್ಲೇ ಬಿಡುಗಡೆ ಮಾಡ್ತೀನಿ. ಅವನು ಏಕವಚನದಲ್ಲಿ ಮಾತನಾಡಿದರೆ, ಅದಕ್ಕಿಂತ ಹೆಚ್ಚಿಗೆ ನಾನೂ ಮಾತಾಡ್ತೀನಿ. ಮರ್ಯಾದೆ ಕೊಟ್ಟು, ಮರ್ಯಾದೆ ತೆಗೆದುಕೊಳ್ಳಲಿ ಎಂದು ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ಕಿಡಿಕಾರಿದರು. ಸುದ್ದಿಗಾರರೊಂದಿಗೆ ಮಾತನಾಡಿ, ಯಾರ್ರೀ ಅವ್ನು ವಿಶ್ವನಾಥ್? ರಿಯಲ್ ಎಸ್ಟೇಟ್ ಒಂದು ಉದ್ಯಮ ಅಲ್ವಾ? ಎಂದರು.