Advertisement

ರಾಜ್ಯದಿಂದ ನಿಯಮ ಉಲ್ಲಂಘನೆಯಾಗಿಲ್ಲ

06:25 AM Jan 29, 2018 | |

ಬೆಂಗಳೂರು: ಕಳಸಾ-ಬಂಡೂರಿ ನಾಲಾ ಯೋಜನೆಗೆ ಸಂಬಂಧಿಸಿದಂತೆ ರಾಜ್ಯ ಯಾವುದೇ ನಿಯಮ ಅಥವಾ ಆದೇಶ ಉಲ್ಲಂಘನೆ ಮಾಡಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.

Advertisement

ಗೋವಾ ವಿಧಾನಸಭೆ ಸ್ಪೀಕರ್‌ ನೇತೃತ್ವದ ತಂಡ ಕಳಸಾ-ಬಂಡೂರಿ ನಾಲಾ ಯೋಜನೆ ಪ್ರದೇಶ ವೀಕ್ಷಣೆ ಮಾಡಿರುವ ಕುರಿತಂತೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅವರನ್ನು ತಡೆಯುವುದು ಬೇಡ. ಶಿಷ್ಟಾಚಾರದ ಪ್ರಕಾರ ಅವರ ಜತೆ ಸಹಕರಿಸಿ ಅಂತ ಅಧಿಕಾರಿಗಳಿಗೆ ತಿಳಿಸಲಾಗಿತ್ತು. ಆದರೆ, ಬರುವುದರ ಬಗ್ಗೆ ನಮಗೆ ತಿಳಿಸಿರಲಿಲ್ಲ. ಅವರು ವೀಕ್ಷಣೆ ಮಾಡಿ ಹೋಗಲಿ. ನಾವು ಕಾಮಗಾರಿ ಮುಂದುವರಿಸಿಲ್ಲ ಮತ್ತು ಯಾವುದೇ ನಿಯಮ ಉಲ್ಲಂಘನೆ ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು.

ಹಿರಿಯ ವಕೀಲ ಫಾಲಿ ಎಸ್‌.ನಾರಿಮನ್‌ ಅನಾರೋಗ್ಯಕ್ಕೆ ಒಳಗಾಗಿದ್ದು, ನಾರಿಮನ್‌ ಬದಲಿಗೆ ಪರ್ಯಾಯ ವಕೀಲರು
ರಾಜ್ಯದ ಪರ ವಾದ ಮಂಡನೆ ಮಾಡಲಿದ್ದಾರೆ. ನಾರಿಮನ್‌ ಜತೆಗಿರಲಿದ್ದು, ಅವರ ಸಲಹೆ ಪಡೆದೇ ಮುಂದುವರಿಯುತ್ತೇವೆ ಎಂದು ಹೇಳಿದರು.

ಬಿಎಸ್‌ವೈ ದೊಂಬರಾಟ: ಈ ನಡುವೆ ಸಂತ ಕವಿ ತಿರುವಳ್ಳುವರ್‌ ಅವರ ಜನ್ಮದಿನದ ಅಂಗವಾಗಿ ಹಲಸೂರಿನಲ್ಲಿರುವ ತಿರುವಳ್ಳುವರ್‌ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, “ಮಹದಾಯಿ ವಿಚಾರದಲ್ಲಿ ಬಿಜೆಪಿಯವರು ಉತ್ತರ ಕುಮಾರನ ಪೌರುಷ ತೋರಿಸುತ್ತಿದ್ದಾರೆ.

ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅವರೇ ದೊಂಬರಾಟ ಆಡುತ್ತಿದ್ದಾರೆ ‘ ಎಂದು ಕಿಡಿ ಕಾರಿದ್ದಾರೆ.
ಗೋವಾ ಮುಖ್ಯಮಂತ್ರಿ ಮನೋಹರ್‌ ಪರ್ರಿಕರ್‌ ಮೂಲಕ ಪತ್ರ ಬರೆಸಿದ ನಾಟಕವಾಡಿದ್ದು ಯಡಿಯೂರಪ್ಪ ಅಲ್ಲವೇ?
ದೊಂಬರಾಟವಾಡುತ್ತಿರುವುದು ನಾವಲ್ಲ, ಯಡಿಯೂರಪ್ಪ. ಮಹದಾಯಿ ವಿಚಾರದಲ್ಲಿ ರಾಹುಲ್‌ ಗಾಂಧಿ ಅವರನ್ನು
ಒಪ್ಪಿಸಬೇಕು ಎಂಬ ಬಿಜೆಪಿಯವರ ಬೇಡಿಕೆ ಸರಿಯಲ್ಲ. ರಾಹುಲ್‌ ಗಾಂಧಿ ಈ ದೇಶದ ಪ್ರಧಾನಿ ಅಲ್ಲ ಎಂದರು.

Advertisement

ಗೋವಾ ಕಾಂಗ್ರೆಸ್ಸಿಗರು ಮಹದಾಯಿ ಯೋಜನೆಗೆ ವಿರೋಧ ವ್ಯಕ್ತಪಡಿಸುತ್ತಿರುವ ಕುರಿತು ಪ್ರತಿಕ್ರಿಯಿಸಿದ ಸಿಎಂ, ಎಲ್ಲಾ ರಾಜಕೀಯ ಪಕ್ಷಗಳಿಗೂ ಅವರ ರಾಜ್ಯದ ಹಿತ ಮುಖ್ಯ. ಗೋವಾ ಕಾಂಗ್ರೆಸಿಗರು ಅವರ ರಾಜ್ಯದ ಹಿತಾಸಕ್ತಿಗೆ ಅನುಗುಣವಾಗಿ ನಡೆದುಕೊಳ್ಳುತ್ತಾರೆ. ನಮಗೆ ನಮ್ಮ ರಾಜ್ಯದ ಹಿತರಕ್ಷಣೆ ಮುಖ್ಯ.ಗೋವಾ ಮುಖ್ಯಮಂತ್ರಿಯವರು ಸಂಧಾನ ಸಭೆಗೆ ಒಪ್ಪಿ ಮೊದಲು ಪತ್ರ ಬರೆಯಲಿ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next