Advertisement

ಕಬ್ಬಿನಾಲೆ, ದೇವರಬಾಳು, ಕಟ್ಟಿನಾಡಿ: ಹಕ್ಕುಪತ್ರವಿಲ್ಲದೆ ಎಂಬತ್ತು ಕುಟುಂಬಗಳು ಅತಂತ್ರ

02:47 PM Apr 29, 2019 | keerthan |

ಕುಂದಾಪುರ: ಹಳ್ಳಿಹೊಳೆ ಗ್ರಾಮದ ಕಬ್ಬಿನಾಲೆ, ಕಟ್ಟಿನಾಡಿ, ದೇವರಬಾಳು ಪ್ರದೇಶದ ಹಲವು ಕುಟುಂಬಗಳಿಗೆ ಇನ್ನೂ ಜಾಗದ ಹಕ್ಕುಪತ್ರ ಸಿಕ್ಕಿಲ್ಲ.

Advertisement

ಜಿಲ್ಲಾ ಗಡಿ ಇತ್ಯರ್ಥವಾ ಗದೇ, ಅರಣ್ಯ ಪ್ರದೇಶ (ಡೀಮ್ಡ್ಫಾ ರೆಸ್ಟ್‌) ಎನ್ನುವ ಕಾರಣಕ್ಕೆ ಮನೆ, ಕೃಷಿ ಇದ್ದರೂ ಆ ಜಾಗದ ಆರ್‌ಟಿಸಿ ಸಿಗದೆ 80 ಕುಟುಂಬಗಳು ಅತಂತ್ರವಾಗಿವೆ. ನಕ್ಸಲ್‌ಪೀಡಿತ ಪ್ರದೇಶಗಳಾ ಗಿದ್ದ‌ ದೇವರಬಾಳು, ಕಬ್ಬಿನಾಲೆಯಲ್ಲಿರುವ ಈ ಕುಟುಂಬಗಳು ಅನೇಕ ಬಾರಿ ಅರ್ಜಿ ಹಾಕಿ ಇನ್ನೂ ಹಕ್ಕುಪತ್ರ ಸಿಗದೇ ಅಸಹಾಯಕವಾಗಿವೆ.

ನಾಲ್ಕೈದು ಬಾರಿ ಅರ್ಜಿ ವಾಸ್ತವಿರುವ ಜಾಗ ಹಾಗೂ ಬೇಸಾಯ ಮಾಡು ತ್ತಿರುವ ಕೃಷಿ ಭೂಮಿಯ ಆರ್‌ಟಿಸಿ ನೀಡುವಂತೆ ನಾಲ್ಕೈದು ಬಾರಿ ಅರ್ಜಿ ಹಾಕಿದ್ದೇವೆ. ಆದರೆ ಈವರೆಗೆ ಸಿಕ್ಕಿಲ್ಲ ಎನ್ನುತ್ತಾರೆ ಕಟ್ಟಿನಾಡಿಯ ಹಕ್ಕುಪತ್ರರಹಿತರು. ಈ ಬಗ್ಗೆ ಹಳ್ಳಿಹೊಳೆ ಗ್ರಾ.ಪಂ. ಅಧಿಕಾರಿಗಳು ಹೇಳುವುದೇ ಬೇರೆ-“ನಿವೇಶನ ರಹಿತರ ಪಟ್ಟಿ ಮಾಡಿದ್ದು, ಎಸ್‌ಸಿ – ಎಸ್‌ಟಿ ಜನರೇ ಹೆಚ್ಚು ಇರುವುದರಿಂದ ಐಟಿಡಿಪಿ ಇಲಾಖೆಗೆ ಕಳುಹಿಸಿದ್ದೇವೆ. ಅಲ್ಲಿಂದ ಇತ್ತೀಚೆಗಷ್ಟೇ ಅವರು 25 ವರ್ಷಗಳಿಂದ ವಾಸ್ತವ್ಯವಿರುವ ಬಗ್ಗೆ ದಾಖಲೆ ಕೇಳಿದೆ’ ಎನ್ನುತ್ತಾರೆ.

ಜಿಲ್ಲಾ ಗಡಿ ಇತ್ಯರ್ಥ ಸಮಸ್ಯೆ
ಕಟ್ಟಿನಾಡಿಯ 5 ಮನೆಗಳಿಗೆ ಉಡುಪಿ ಮತ್ತು ಶಿವಮೊಗ್ಗ ಜಿಲ್ಲಾ ಗಡಿ ಸಮಸ್ಯೆ ಇತ್ಯರ್ಥವಾಗದ ಕಾರಣ ಹಕ್ಕುಪತ್ರ ಮಾಡಲು ಆಗುತ್ತಿಲ್ಲ. ಇವರಿಗೆ ಆಧಾರ್‌, ರೇಶನ್‌, ವೋಟರ್‌ ಐಡಿ ಉಡುಪಿ ಜಿಲ್ಲೆಯದೇ ಇದ್ದರೂ ವಾಸ್ತವ್ಯದ ಜಾಗವನ್ನು ಜಿಪಿಎಸ್‌ ಮೂಲಕ ನೋಡಿದರೆ ಶಿವಮೊಗ್ಗ ಜಿಲ್ಲೆಯಲ್ಲಿದೆ ಎಂದು ತೋರಿಸುತ್ತಿದೆ. ಈ ಐದು ಮನೆಯವರಿಗೆ ಗಡಿ ಸಮಸ್ಯೆ ಇತ್ಯರ್ಥವಾಗದೇ ಆರ್‌ಟಿಸಿ ಸಿಗಲಾಗದು ಎನ್ನಲಾಗುತ್ತಿದೆ.

ಎಲ್ಲದಕ್ಕೂ ಸಮಸ್ಯೆ
ಜಾಗದ ಆರ್‌ಟಿಸಿ ಸಿಗದ ಹಿನ್ನೆಲೆಯಲ್ಲಿ ಗದ್ದೆ, ತೋಟ, ಇನ್ನಿತರ ಕೃಷಿ ಮಾಡಿದ್ದರೂ ಬೆಳೆ ಸಾಲ ಸಹಿತ ಯಾವುದೇ ರೀತಿಯ ಸಾಲ ದೊರಕುತ್ತಿಲ್ಲ. ಕೃಷಿ ಇಲಾಖೆ ಸೌಲಭ್ಯ ಪಡೆಯುವುದೂ ಕಷ್ಟವಾಗಿದೆ. ಪ್ರಾಕೃತಿಕ ವಿಕೋಪದಡಿ ನಷ್ಟ ಉಂಟಾದರೆ ಪರಿಹಾರಕ್ಕೆ ಅರ್ಜಿ ಸಲ್ಲಿಸುವುದಕ್ಕೂ ಸಾಧ್ಯವಾಗುತ್ತಿಲ್ಲ.
ತಿಮ್ಮ, ಕಟ್ಟಿನಾಡಿ ನಿವಾಸಿ

Advertisement

ಪರಿಶೀಲಿಸಿ, ಮುಂದಿನ ಕ್ರಮ
ಇದು ಹೊಸ ವಿಷಯವೇ ಅಥವಾ ಅಲ್ಲಿನ ಜನರು ಸಲ್ಲಿಸಿದ ಅರ್ಜಿಗಳ ಪ್ರಕ್ರಿಯೆ ಯಾವ ಹಂತದಲ್ಲಿದೆ ಎನ್ನುವುದನ್ನು ಪರಿಶೀಲಿಸಿ, ಮುಂದಿನ ತೀರ್ಮಾನ ಕೈಗೊಳ್ಳುವೆ.
-ಹೆಪ್ಸಿಬಾ ರಾಣಿ ಕೊರ್ಲಪಾಟಿ, ಉಡುಪಿ ಜಿಲ್ಲಾಧಿಕಾರಿ

ಪ್ರಶಾಂತ್‌ ಪಾದೆ

Advertisement

Udayavani is now on Telegram. Click here to join our channel and stay updated with the latest news.

Next