Advertisement

ಅವರಸರದಿಂದ ಫ‌ಲವಿಲ್ಲ

06:00 AM Oct 15, 2018 | Team Udayavani |

ಷೇರು ಪೇಟೆಯಲ್ಲಿ ಹಿಂದೆಂದೂ ಕಾಮದ ಕುಸಿತ ಕಾಣಿಸಿಕೊಂಡಿದೆ. ಈ ಸಂದರ್ಭದಲ್ಲಿ, ಹಣ ಹೂಡಿದ್ದವರು ಬೆಚ್ಚಿ ಬಿದ್ದಿದ್ದಾರೆ. ಹಣ ಹೂಡದವರು, ಈಗ ಹೇಗಿದ್ರೂ ಷೇರಿನ ಬೆಲೆ ಕುಸಿದಿದೆಯಲ್ಲ; ಅದನ್ನು ತಗೊಂಡು ಬಿಡ್ಲಾ ಎಂದು ಲೆಕ್ಕ ಹಾಕುತ್ತಿದ್ದಾರೆ. ನೆನಪಿಡಿ, ಷೇರು ಪೇಟೆಯ ವ್ಯವಹಾರದಲ್ಲಿ ಕಾದು ನೋಡಿ ನಂತರ ಆಟಕ್ಕೆ ಹೋಗುವುದೇ ಜಾಣತನ. 

Advertisement

ಷೇರು ಪೇಟೆಯಲ್ಲೀಗ ಕುಸಿತದ ಮಾತು. ಈ ಹಿಂದೆ ಕುಸಿತ ಕಂಡಾಗ, ಇದು ಷೇರುಗಳನ್ನು ಕೊಳ್ಳುವುದಕ್ಕೆ ಒದಗಿ ಬಂದ ಅವಕಾಶ ಎಂದು ಹೇಳುತ್ತಿದ್ದ ಪರಿಣಿತರು, ಈಗ ಕುಸಿತದ ತಳವೂ ಕಾಣುತ್ತಿಲ್ಲ ಎನ್ನುತ್ತಿದ್ದಾರೆ. ಷೇರು ಪೇಟೆ ಹೇಗೆಂದರೆ, ಅಮೆರಿಕದಲ್ಲಿ ಗಾಳಿ ಬೀಸಿದರೆ ಇಲ್ಲಿ ಎಲೆ ಉದುರಿತು ಎನ್ನುವ ಹಾಗೆ. ಈಗ ಜಗತ್ತಿನಾದ್ಯಂತದ ಎಲ್ಲ ಷೇರು ಪೇಟೆಯಲ್ಲಿಯೂ ಕುಸಿತ ಇದೆ. ಇಷ್ಟೆಲ್ಲ ಕುಸಿದಿದೆ ಎನ್ನುವುದನ್ನು ಆತಂಕದಿಂದ ವರದಿ ಮಾಡುತ್ತಿದ್ದೇವೆ.

 ಷೇರು ಪೇಟೆಯಲ್ಲಿ ಏರಿಕೆಯೂ ಇದೆ. ಷೇರು ಬೆಲೆಗಳು ಅದರ ಮೌಲ್ಯಕ್ಕಿಂತ ಜಾಸ್ತಿ ಏರಿಕೆ ಕಂಡಾಗ ಯಾರೂ ಕೂಡ ಏರಿಕೆಯನ್ನು ಆತಂಕದಿಂದ ನೋಡಲಿಲ್ಲ. ಭರವಸೆುಂದ ಹೇಳತೊಡಗಿದರು. ಇದು ಇರುವುದೇ ಹಾಗೆ. ನೋಡಿ, ಯಾವುದೇ ವಸ್ತುವಿನ ಬೆಲೆ ಇಳಿದಾಗ ಇನ್ನಷ್ಟು ಇಳಿಯುತ್ತದೆ ಎಂದೇ ಲೆಕ್ಕ ಹಾಕುತ್ತೇವೆ. ಷೇರು ಪೇಟೆಯಲ್ಲಿ ಕುಸಿತ ಕಂಡಾಗ ಪೇಟೆಯಲ್ಲಿ ಕುಸಿತವೇ ಮೇಲುಗೈ ಸಾಧಿಸುತ್ತದೆ. ಇನ್ನೇನು ಮುಗಿಯಿತು ಎನ್ನುವ ಧೋರಣೆಯೇ ಇರುತ್ತದೆ. ಅಂಥ ಸಂದರ್ಭದಲ್ಲಿ ಕುಸಿತವನ್ನು ಆತಂಕದಿಂದ, ಭಯದಿಂದ, ಹತಾಶೆಯಿಂದ ನೋಡುತ್ತೇವೆ. ಹಾಗೆಯೇ, ಏರಿಕೆ ಕಂಡಾಗ ಯಾಕೆ ಇಷ್ಟೆಲ್ಲ ಏರಿದೆ ಎನ್ನುವುದಿಲ್ಲ. ಬದಲಾಗಿ ಇನ್ನಷ್ಟು ಏರುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಏರಿಕೆ ಆಗಲಿದೆ. ಎಂದು ಹೂಡಿಕೆಗೆ ಮುಗಿ ಬೀಳುತ್ತೇವೆ. ಮೇಲೆ ನಿಂತವನು ಬೀಳುವ ಭಯದಲ್ಲಿ ಹೆದರಬೇಕು. ಆದರೆ ಹಾಗಾಗುತ್ತಿಲ್ಲ. ಬದಲಿಗೆ,  ಮೇಲೆ ನಿಂತವನಿಗೆ ಧೈರ್ಯ ಜಾಸ್ತಿ. ಕೆಳಗಿದ್ದವನಿಗೆ ಬೀಳುವ ಭಯವೇ ಇಲ್ಲ. ಆದರೂ ಅವನಿಗೆ ಧೈರ್ಯಲ್ಲ. ಇಡೀ ಷೇರು ಪೇಟೆಯನ್ನು ಭಯ ಮತ್ತು ಅತಿ ಆಸೆಗಳು ಆಳುತ್ತಿವೆ. ಏರಿದಾಗ ಇನ್ನಷ್ಟು ಏರುತ್ತದೆ. ಏರಿಯೇ ಏರುತ್ತದೆ ಎಂದು ಕಾಯುವುದು. ಕುಸಿದಾಗ ಕೊಳ್ಳುವುದಕ್ಕೆ ಆತಂಕ ಪಡುವುದು. ಇದನ್ನೇ ತಿರುವು ಮುರುವು ಮಾಡಿ ನೋಡಿದಾಗ ಹೂಡಿಕೆಯ ಬಗೆಗಿನ ನಮ್ಮ ಮನೋಭಾವನೆಯಲ್ಲಿಯೇ ಬದಲಾವಣೆ ಆಗುತ್ತದೆ.

ಹಾಗಾದರೆ ಈಗ ಇಷ್ಟು ಕುಸಿದಿದೆಯಲ್ಲಾ; ಈಗ ಷೇರುಗಳನ್ನು ಖರೀದಿಸಬಹುದಾ? ಇದು ಮುಂದಿನ ಪ್ರಶ್ನೆ. ಆದರೆ ನೆನಪಿಡಿ ಅಗ್ಗಕ್ಕೆ ಸಿಗುವ ಎಲ್ಲವನ್ನೂ ಕೊಳ್ಳುವುದಕ್ಕೆ ಸಾಧ್ಯವೇ? ಕುಸಿತದ ಕಾಲದಲ್ಲಿ ಅತ್ಯುತ್ತಮ ಹೂಡಿಕೆಯ ಅವಕಾಶಕ್ಕಾಗಿ ಅವಸರ ಮಾಡದೇ ಕಾಯಬೇಕು. ಇದು ಕೇವಲ ಷೇರು ಪೇಟೆಗೆ ಮಾತ್ರ ಅಲ್ಲ. ಎಲ್ಲ ಹೂಡಿಕೆಗೂ ಅನ್ವಯಿಸುತ್ತದೆ. ಯಾವಾಗಲೂ ಬ್ಯಾಂಕಿನಲ್ಲಿ ಹಣ ಇಟ್ಟುಕೊಂಡು ಕಾಯುವವನಿಗೆ ಅವಕಾಶಗಳು ಒದಗಿ ಬರುವುದೇ ಹೀಗೆ.

ಮುಗಿಸುವ ಮುನ್ನ ಒಂದು ಸಣ್ಣ ವಿವರಣೆ. ಪರಿಚಿತರೊಬ್ಬರು ಹಣ ತೊಡಗಿಸುವುದಕ್ಕೆ ಉತ್ಸುಕರಾಗಿ ಹಲವಾರು ಜನರಲ್ಲಿ ಸಲಹೆ ಕೇಳಿದರು. ಹಲವು ವರ್ಷಗಳ ನಂತರ ಅವರು ಸಿಕ್ಕಾಗ ಕೇಳಿದೆ : ನೀವು ಯಾವುದರಲ್ಲಿ ಹಣ ತೊಡಗಿಸಿದಿರಿ? ಅದಕ್ಕಂದರು; ” ಯಾವುದರಲ್ಲೂ ಇಲ್ಲ ಯಾಕೆ?’  ಎಂದಾಗ ಅವರು ಹೇಳಿದರು “ಒಬ್ಬೊಬ್ಬರು ಒಂದೊಂದು ಸಲಹೆ ಕೊಟ್ಟರು. ಏನು ಮಾಡುವುದು ಎಂದೇ ಗೊತ್ತಾಗಲಿಲ್ಲ. ನಮಗೆ ಸ್ಪಷ್ಟತೆ ಇರದಿದ್ದರೆ ಬೇರೆಯವರು ಕೊಡುವ ಉತ್ತರಗಳು ನಮಗೆ ಗೊಂದಲ ಸೃಷ್ಟಿಸುತ್ತದೆಯೇ ಹೊರತು ಬೇರೇನನ್ನೂ ಮಾಡುವುದಿಲ್ಲ. ನಮಗೆ ಸ್ಪಷ್ಟತೆ ಬರಬೇಕಾದರೆ ಸರಿಯಾದ ತಿಳುವಳಿಕೆ ಅತ್ಯಗತ್ಯ. 

Advertisement

ಸುಧಾಶರ್ಮ ಚವತ್ತಿ 

Advertisement

Udayavani is now on Telegram. Click here to join our channel and stay updated with the latest news.

Next