Advertisement

laptop imports: ಲ್ಯಾಪ್‌ಟಾಪ್‌ ಆಮದಿಗೆ ನಿರ್ಬಂಧವಿಲ್ಲ

11:43 AM Oct 14, 2023 | Team Udayavani |

ಹೊಸದಿಲ್ಲಿ: ಲ್ಯಾಪ್‌ಟಾಪ್‌ಗಳ ಆಮದಿಗೆ ನಿರ್ಬಂಧ ಹೇರುವುದಿಲ್ಲ ಎಂದು ಸ್ಪಷ್ಟಪಡಿಸಿರುವ ಕೇಂದ್ರ ಸರಕಾರದ ಅಧಿಕಾರಿಯೊಬ್ಬರು, ಅವುಗಳ ಶಿಪ್‌ಮೆಂಟ್‌ಗಳ ಮೇಲೆ ಒಂದು ಕಣ್ಣಿಡುವುದಾಗಿ ಹೇಳಿದ್ದಾರೆ.

Advertisement

ಕಳೆದ ಆಗಸ್ಟ್‌ನಲ್ಲಿ ಕೇಂದ್ರ ಸರಕಾರವು, ನ.1ರಿಂದ ಜಾರಿಗೆ ಬರುವಂತೆ ವಿದೇಶಗಳಿಂದ ಆಮದಾಗುವ ಲ್ಯಾಪ್‌ಟಾಪ್‌, ಟ್ಯಾಬ್ಲೆಟ್‌, ಕಂಪ್ಯೂಟರ್‌ಗಳ ಮೇಲೆ ಆಮದು ನಿಯಂತ್ರಣ ಹೇರುವುದಾಗಿ ಹೇಳಿತ್ತು. ಈ ವಿಷಯವು ದೇಶಾದ್ಯಂತ ಭಾರೀ ಚರ್ಚೆಗೆ ಕಾರಣವಾಗಿದ್ದು, ಮತ್ತೆ ಲೈಸನ್ಸ್‌ ರಾಜ್‌ ವ್ಯವಸ್ಥೆ ಜಾರಿಗೆ ಬರಬಹುದೇ ಎಂಬ ಆತಂಕವೂ ಸೃಷ್ಟಿಯಾಗಿತ್ತು. ಈ ಬಗ್ಗೆ ಕೇಂದ್ರ ವಾಣಿಜ್ಯ ಸಚಿವಾಲಯದ ಅಧಿಕಾರಿ ಸುನಿಲ್‌ ಭರ್ತ್ವಾಲ್‌ ಸ್ಪಷ್ಟನೆ ನೀಡಿದ್ದು, ಕೇಂದ್ರ ಸರಕಾರ ಲ್ಯಾಪ್‌ಟಾಪ್‌ ಸೇರಿದಂತೆ ಈ ಯಾವುದೇ ವಸ್ತುಗಳ ಮೇಲೆ ನಿರ್ಬಂಧ ಹೇರುವುದಿಲ್ಲ. ಆದರೆ ಯಾರಾದರೂ ಇವುಗಳನ್ನು ಆಮದು ಮಾಡಿಕೊಳ್ಳುತ್ತಿದ್ದರೆ ಅವರ ಮೇಲೆ ನಿಗಾ ಇಡಲಾಗುತ್ತದೆ ಎಂದಿದ್ದಾರೆ.

ಈಗಾಗಲೇ ಈ ವ್ಯವಸ್ಥೆಯನ್ನು ಆರಂಭಿಸಲು ಸಿದ್ಧತೆ ನಡೆಯುತ್ತಿದ್ದು ಅ.30ರೊಳಗೆ ಮುಗಿಯಲಿದೆ. ನ.1ರಿಂದಲೇ ಇದು ಜಾರಿಗೆ ಬರಲಿದೆ ಎಂದು ಮತ್ತೂಬ್ಬ ಅಧಿಕಾರಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next