ಬಳ್ಳಾರಿ: ಮರಾಠಾ ಅಭಿವೃದ್ಧಿ ಪ್ರಾಧಿಕಾರ ರಚಿಸಿರುವ ರಾಜ್ಯ ಸರ್ಕಾರದ ಕ್ರಮವನ್ನು ಖಂಡಿಸಿ ವಿವಿಧ ಕನ್ನಡ ಪರ ಸಂಘಟನೆಗಳ ಒಕ್ಕೂಟ ಕರೆ ನೀಡಿದ್ದ ಕರ್ನಾಟಕ ಬಂದ್ ಗೆ ಗಣಿನಾಡು ಬಳ್ಳಾರಿಯಲ್ಲಿ ಯಾವುದೇ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ.
ನಗರದಲ್ಲಿ ಯಾವುದೇ ವಾಹನ ಸಂಚಾರ ಎಂದಿನಂತೆ ಸಹಜವಾಗಿದೆ. ಸಾರಿಗೆ ಬಸ್ ಸಂಚಾರ ಆರಂಭಿಸಿವೆ. ಆಟೋಗಳ ಸಂಚಾರ ಎಂದಿನಂತೆ ಮುಂದುವರೆದಿದೆ. ಹೊಟೇಲ್, ವಾಣಿಜ್ಯ ಮಳಿಗೆಗಳು, ಪೆಟ್ರೋಲ್ ಬಂಕ್, ತರಕಾರಿ ಮಾರುಕಟ್ಟೆ ಎಲ್ಲವೂ ಚಾಲನೆಯಲ್ಲಿವೆ.
ಬಳ್ಳಾರಿಯಲ್ಲಿ 40ಕ್ಕೂ ಹೆಚ್ಚು ಕನ್ನಡಪರ ಸಂಘಟನೆಗಳು ಕರ್ನಾಟಕ ಬಂದ್ ಬೆಂಬಲ ವ್ಯಕ್ತಪಡಿಸಿವೆ. ಆದರೆ, ಬಳ್ಳಾರಿಯಲ್ಲಿ ಬೆಳ್ಳಂಬೆಳಗ್ಗೆ ರಸ್ತೆಗಿಳಿದು ಯಾವುದೇ ಸಂಘಟನೆ ಬಂದ್ ನಡೆಸಿಲ್ಲ. ಈ ಹಿಂದಿನ ಬಂದ್ ಗಳಲ್ಲಿ ಗಡಗಿ ಚನ್ನಪ್ಪ ವೃತ್ತದಲ್ಲಿ ಟೈಯರ್ ಗೆ ಬೆಂಕಿ ಹಚ್ಚಿ ಪ್ರತಿಭಟನೆಯನ್ನೂ ಮಾಡಿಲ್ಲ. ಕಳೆದ ವಾರವಷ್ಟೇ ಬಳ್ಳಾರಿ ವಿಭಜನೆ ಖಂಡಿಸಿ ಬಂದ್ ಆಚರಿಸಲಾಗಿತ್ತು. ಜನಜೀವನವೂ ಎಂದಿನಂತೆ ಸಹಜವಾಗಿದೆ. ಬಂದ್ ಸಾಂಕೇತಿಕ ಪ್ರತಿಭಟನೆಗಷ್ಟೇ ಸೀಮಿತವಾದಂತಾಗಿದೆ.
ಇದನ್ನೂ ಓದಿ:ಇಂದು ಕರ್ನಾಟಕ ಬಂದ್: ಬೆಂಗಳೂರಿನ ಹಲವೆಡೆ ಕಲ್ಲು ತೂರಾಟ, ಕರಾವಳಿಯಲ್ಲಿ ನೀರಸ ಪ್ರತಿಕ್ರಿಯೆ
10 ಗಂಟೆಗೆ ಪ್ರತಿಭಟನೆ
ಬೆಳಗ್ಗೆ 10 ಗಂಟೆಗೆ ಕನ್ನಡಪರ ಸಂಘಟನೆಗಳು ಪ್ರತಿಭಟನೆ ನಡೆಸಿ ಜಿಲ್ಲಾಡಳಿತ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಿವೆ.
ಪೊಲೀಸ್ ಭದ್ರತೆ
ಕರ್ನಾಟಕ ಬಂದ್ ಹಿನ್ನೆಲೆಯಲ್ಲಿ ಬಳ್ಳಾರಿ ನಗರದ ಗಡಗಿ ಚನ್ನಪ್ಪ ವೃತ್ತದಲ್ಲಿ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ನಿಯೋಜಿಸಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗ್ರತಾ ಕ್ರಮವಾಗಿ ಸೂಕ್ತ ಬಂದೋ ಏರ್ಪಡಿಸಲಾಗಿದೆ.