Advertisement

ರಾಜೀನಾಮೆ ನೀಡಲ್ಲ: ಗೃಹ ಸಚಿವ ರಾಮಲಿಂಗಾರೆಡ್ಡಿ

06:40 AM Mar 09, 2018 | |

ಕಲಬುರಗಿ: ಲೋಕಾಯುಕ್ತ ನ್ಯಾ. ವಿಶ್ವನಾಥ ಶೆಟ್ಟಿ ಅವರಿಗೆ ಚಾಕು ಇರಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾನು ರಾಜೀನಾಮೆ ನೀಡುವ ಅಗತ್ಯವಿಲ್ಲ. ಆದರೆ ಲೋಕಾಯುಕ್ತ ಕಚೇರಿಗೆ ಪಾರ್ಲಿಮೆಂಟ್‌ ಮಾದರಿ ಭದ್ರತೆ ನೀಡುತ್ತೇವೆಂದು ಗೃಹ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೆಟಲ್‌ ಡಿಟೆಕ್ಟರ್‌ ದೋಷದಿಂದ ಚಾಕು ಪತ್ತೆಯಾಗಿಲ್ಲ. ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮಕ್ಕೆ ಈಗಾಗಲೇ ಮುಖ್ಯಮಂತ್ರಿ ಸೂಚಿಸಿದ್ದಾರೆ. ಪ್ರಮುಖವಾಗಿ ಭದ್ರತೆ ಲೋಪಕ್ಕೆ ಸಂಬಂಧಿಸಿದಂತೆ ಸದ್ಯದಲ್ಲಿಯೇ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಘಟನೆ ಸಂಬಂಧಿಸಿದಂತೆ ಕೇಂದ್ರದ ಗೃಹ ಇಲಾಖೆ ವರದಿ ಕೇಳಿಲ್ಲ. ಲೋಕಾಯುಕ್ತರೊಂದಿಗೆ ಆರೋಪಿ ಈ ಮೊದಲು ಜಗಳ ಮಾಡಿದ್ದ. ಆತನ ಹಿನ್ನೆಲೆಯನ್ನೂ ಕಲೆ ಹಾಕಲಾಗಿದೆ ಎಂದು ಹೇಳಿದರು.

ಅರ್ಹತೆಯಿದ್ದರೆ ಟಿಕೆಟ್‌ ನೀಡಲಿ
ನನ್ನ ಪುತ್ರಿ ಜಯನಗರ ಕ್ಷೇತ್ರದಿಂದ ಸ್ಪರ್ಧೆ ಬಯಸಿದ್ದು ನಿಜ. ಅರ್ಹತೆ ಇದ್ದರೆ ಪಕ್ಷ ಟಿಕೆಟ್‌ ನೀಡಲಿ. ನನ್ನ ಮಗಳು ಎನ್ನುವ ಕಾರಣಕ್ಕೆ ಟಿಕೆಟ್‌ ಕೊಡಬೇಕಾಗಿಲ್ಲ. ಯುವ ಕಾಂಗ್ರೆಸ್‌ ಹಾಗೂ ಮಹಿಳಾ ಕಾಂಗ್ರೆಸ್‌ನಲ್ಲಿ ಕೆಲಸ ಮಾಡುತ್ತಿದ್ದಾಳೆ ಎಂದು ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ. ಬಿಜೆಪಿ ಸರ್ಕಾರದಲ್ಲಿ ಹಾಗೂ ತಮ್ಮ ಈ ಐದು ವರ್ಷಗಳ ಅಪರಾಧ ಪ್ರಕರಣಗಳನ್ನು ತುಲನೆ ಮಾಡಿದರೆ ಕಾಂಗ್ರೆಸ್‌ ಸರ್ಕಾರದಲ್ಲಿಯೇ ಕಡಿಮೆಯಾಗಿರುವುದನ್ನು ಅಂಕಿ ಸಂಖ್ಯೆಗಳೇ ನಿರೂಪಿಸುತ್ತವೆ. ಬಿಜೆಪಿಯವರು ಬೆಂಗಳೂರು ಉಳಿಸಿ ಎಂಬುದಾಗಿ ಪಾದಯಾತ್ರೆ ಮಾಡ್ತಾ ಇಲ್ಲ. ಬಿಜೆಪಿಯನ್ನು ಉಳಿಸಿ ಎಂಬ ನಿಟ್ಟಿನಲ್ಲಿ ಹೋರಾಟ ಕೈಗೊಂಡಿದ್ದಾರೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next