Advertisement

Delhi CM: ಕೇಜ್ರಿವಾಲ್‌ ಜೈಲುವಾಸ ಮುಂದುವರಿಕೆ; ಸುಪ್ರೀಂನಲ್ಲಿ ಏ.29ಕ್ಕೆ ಅರ್ಜಿ ವಿಚಾರಣೆ

01:20 AM Apr 16, 2024 | Team Udayavani |

ನವದೆಹಲಿ: ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ ಮಾರ್ಚ್‌ 21ರಂದು ತನ್ನನ್ನು ಬಂಧಿಸಿರುವುದನ್ನು ಪ್ರಶ್ನಿಸಿ ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಏಪ್ರಿಲ್‌ 29ರಂದು ವಿಚಾರಣೆ ನಡೆಸುವುದಾಗಿ ಸುಪ್ರೀಂಕೋರ್ಟ್‌ ಸೋಮವಾರ (ಏ.15) ಆದೇಶ ನೀಡಿದ್ದು, ಇದರಿಂದ ಕೇಜ್ರಿವಾಲ್‌ ಜೈಲುವಾಸ ಮುಂದುವರಿದಂತಾಗಿದೆ.

Advertisement

ಇದನ್ನೂ ಓದಿ:Mysore; ಸಮಾವೇಶ ನಡೆದ ಮೈದಾನದಲ್ಲಿ ಸ್ವಚ್ಚತೆ ನಡೆಸಿದ ಯದುವೀರ್ ಒಡೆಯರ್ ದಂಪತಿ

ಏಪ್ರಿಲ್‌ 9ರಂದು ಕೇಜ್ರಿವಾಲ್‌ ಜಾಮೀನು ಅರ್ಜಿಯನ್ನು ದೆಹಲಿ ಹೈಕೋರ್ಟ್‌ ವಜಾಗೊಳಿಸಿದ್ದು, ಇದನ್ನು ಪ್ರಶ್ನಿಸಿ ಮತ್ತೆ ಸುಪ್ರೀಂಕೋರ್ಟ್‌ ಮೆಟ್ಟಿಲೇರಿದ್ದರು. ಸುಪ್ರೀಂ ಪೀಠದ ಜಸ್ಟೀಸ್‌ ಸಂಜೀವ್‌ ಖನ್ನಾ ಮತ್ತು ದೀಪಂಕರ್‌ ದತ್ತಾ ಅವರು ಇಂದು ಅರ್ಜಿಯ ವಿಚಾರಣೆ ನಡೆಸುತ್ತಿದ್ದಂತೆ ಈ ಆದೇಶ ನೀಡಿರುವುದಾಗಿ ವರದಿ ತಿಳಿಸಿದೆ.

ಪ್ರಸ್ತುತ ಅರವಿಂದ್‌ ಕೇಜ್ರಿವಾಲ್‌ ಕಳೆದ 14ದಿನಗಳಿಂದ ತಿಹಾರ್‌ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿದ್ದು, ಸೋಮವಾರ ಅವಧಿ ಮುಕ್ತಾಯಗೊಳ್ಳಲಿದೆ.

ಕೇಜ್ರಿವಾಲ್‌ ಪರವಾಗಿ ಸುಪ್ರೀಂಕೋರ್ಟ್‌ ಹಿರಿಯ ವಕೀಲ ಅಭಿಷೇಕ್‌ ಮನು ಸಿಂಘ್ವಿ ಅವರು ವಾದ ಮಂಡಿಸಿ, ಆಧಾರರಹಿತ ಸಾಕ್ಷ್ಯಾಧಾರಗಳ ಮೂಲಕ ತಮ್ಮ ಕಕ್ಷಿದಾರರನ್ನು ಬಂಧಿಸಿರುವುದಾಗಿ ತಿಳಿಸಿದ್ದರು.

Advertisement

ಇ.ಡಿ. ಬಲೆಗೆ ಚನ್‌ಪ್ರೀತ್‌ ಸಿಂಗ್‌
ಗೋವಾದಲ್ಲಿ ಆಪ್‌ಗೆ ಚುನಾವಣೆ ಎದುರಿಸುವ ನಿಟ್ಟಿನಲ್ಲಿ ಹಣದ ವ್ಯವಸ್ಥೆ ಮಾಡಿದ ಆರೋಪದ ಹಿನ್ನೆಲೆಯಲ್ಲಿ ಜಾರಿ ನಿರ್ದೇಶನಾಲಯ ಚನ್‌ಪ್ರೀತ್‌ ಸಿಂಗ್‌ ಎಂಬಾತನನ್ನು ಬಂಧಿ ಸಿದೆ. ಈ ಪ್ರಕರಣಕ್ಕೂ ದಿಲ್ಲಿ ಅಬಕಾರಿ ನೀತಿಗೂ ಲಿಂಕ್‌ ಇದೆ ಎನ್ನುವುದು ಇ.ಡಿ. ಆರೋಪ. ಹೀಗಾಗಿ ಸದರಿ ಪ್ರಕರಣದಲ್ಲಿ ಇದು 17ನೇ ಬಂಧನವಾಗಿದೆ. ಅಕ್ರಮ ಹಣ ವರ್ಗಾ ವಣೆ ಕಾಯ್ದೆಯ ಅನ್ವಯ ತನಿಖಾ ಸಂಸ್ಥೆ ಆತನನ್ನು ಎ.12ರಂದು ವಶಕ್ಕೆ ಪಡೆದಿತ್ತು. ಇದೇ ಪ್ರಕರಣದಲ್ಲಿ ಸಿಬಿಐ ಆತನನ್ನು ಬಂಧಿಸಿತ್ತು. 2022ರಲ್ಲಿ ನಡೆದಿದ್ದ ಗೋವಾ ವಿಧಾನಸಭೆ ಚುನಾ ವಣೆಗಾಗಿ ಹಣದ ವ್ಯವಸ್ಥೆ ಮಾಡಲಾಗಿತ್ತು ಎಂದು ಆರೋಪಿಸಲಾಗಿದೆ.

ಎ.23ರ ರ ವರೆಗೆ ಕವಿತಾ ಕಸ್ಟಡಿ ಅವಧಿ ವಿಸ್ತರಣೆ
ದಿಲ್ಲಿ ಅಬಕಾರಿ ನೀತಿ ಹಗರಣದಲ್ಲಿ ತಿಹಾರ್‌ ಜೈಲಲ್ಲಿರುವ ತೆಲಂಗಾಣ ಮಾಜಿ ಸಿಎಂ ಕೆ. ಚಂದ್ರ ಶೇಖರ ರಾವ್‌ ಪುತ್ರಿ ಕೆ.ಕವಿತಾರ ನ್ಯಾಯಾಂಗ ಬಂಧನ ಅವಧಿ ಎ.23ರ ವರೆಗೆ ವಿಸ್ತರಿಸಲಾಗಿದೆ. ಇದರ ಜತೆಗೆ 100 ಕೋಟಿ ರೂ. ಆಮಿಷ ಪ್ರಕರಣದಲ್ಲಿ ಸಿಬಿಐ ಅವರನ್ನು ಬಂಧಿಸಿದ್ದನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಕೋರ್ಟ್‌, ತನಿಖಾ ಸಂಸ್ಥೆಗೆ ನೋಟಿಸ್‌ ನೀಡಿದೆ.

Advertisement

Udayavani is now on Telegram. Click here to join our channel and stay updated with the latest news.

Next