ನವದೆಹಲಿ: ಮುನ್ನೆಚ್ಚರಿಕೆ ಡೋಸ್ ಪಡೆಯುವವರ 60 ವರ್ಷ ಮೇಲ್ಪಟ್ಟವರು ಕೋವಿನ್ ಆ್ಯಪ್‌ನಲ್ಲಿ ನೋಂದಣಿ ಮಾಡಿಕೊಳ್ಳುವ ಅಗತ್ಯ ಇಲ್ಲ. ಅವರು ಲಸಿಕೆ ಪಡೆಯುವ ವೇಳೆ ವೈದ್ಯರಿಂದ ಅನಾರೋಗ್ಯದ ಬಗ್ಗೆ ಪ್ರಮಾಣ ಪತ್ರ ನೀಡಬೇಕಾದ ಅಗತ್ಯವಿಲ್ಲ ಎಂದು ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರದ ಸಿಇಒ ಡಾ.ಆರ್.ಎಸ್.ಶರ್ಮಾ ಹೇಳಿದ್ದಾರೆ.
ಮುನ್ನೆಚ್ಚರಿಕೆ ಡೋಸ್ ಪಡೆಯುವ ಮುನ್ನ ಅಂಥವರು, ವೈದ್ಯರಿಂದ ಸಲಹೆ ಮಾತ್ರ ಪಡೆದರೆ ಸಾಕು ಎಂದು ಹೇಳಿದ್ದಾರೆ.
ಅವರು ಕೋವಿನ್ ಆ್ಯಪ್‌ನಲ್ಲಿ ಎಲ್ಲರಂತೆ ಲಸಿಕೆ ಪಡೆಯಲು ಸಮಯ ನಿಗದಿ ಮಾಡಿದರೆ ಸಾಕು ಎಂದಿದ್ದಾರೆ.
15-18 ವರ್ಷ ವಯೋಮಿತಿಯ ಮಕ್ಕಳು ಲಸಿಕೆ ಪಡೆಯಲು ಉತ್ಸಾಹದಿಂದಲೇ ಕೇಂದ್ರಗಳಿಗೆ ಆಗಮಿಸಿದ್ದಾರೆ ಎಂದು ಹೇಳಿದ್ದಾರೆ.
ಇದನ್ನೂ ಓದಿ:ಮೇಕೆದಾಟು ಹೆಸರಲ್ಲಿ ಮಂಕುಬೂದಿ ಎರಚಲು ಸಾಧ್ಯವಿಲ್ಲ : ಕಾಂಗ್ರೆಸ್ ವಿರುದ್ಧ ಯತ್ನಾಳ ಕಿಡಿ