ಮುಂಬೈ: ಕೋವಿಡ್ ಕಾರಣದಿಂದ ಅರ್ಧಕ್ಕೆ ನಿಂತಿರುವ ಐಪಿಎಲ್ ಕೂಟ ಮುಂದಿನ ತಿಂಗಳು ಯುಎಇ ನಲ್ಲಿ ನಡೆಯಲಿದೆ. ಇದಕ್ಕಾಗಿ ಬಿಸಿಸಿಐ ಈಗಾಗಲೇ ತಯಾರಿ ಆರಂಭಿಸಿದೆ.
ಶ್ರೀಮಂತ ಟಿ 20 ಪಂದ್ಯಾವಳಿಗೆ ಮುನ್ನ ಬಿಸಿಸಿಐ ಬಿಡುಗಡೆ ಮಾಡಿದ ಆರೋಗ್ಯ ಮತ್ತು ಸುರಕ್ಷತಾ ಪ್ರೋಟೋಕಾಲ್ ಗಳ ಪ್ರಕಾರ, ಈ ಬಾರಿ ಐಪಿಎಲ್‌ನಲ್ಲಿ ಸ್ಪರ್ಧಿಸುವ ಯಾವುದೇ ಅಂತಾರಾಷ್ಟ್ರೀಯ ಆಟಗಾರರು ಕ್ವಾರಂಟೈನ್ ಪೂರೈಸಬೇಕಾಗಿಲ್ಲ ಆದರೆ ಫ್ರ್ಯಾಂಚೈಸಿ ಸದಸ್ಯರು ಮತ್ತು ಕುಟುಂಬಗಳು ಬಯೋ ಬಬಲ್ ಉಲ್ಲಂಘನೆ ಮಾಡಿದರೆ ಶಿಕ್ಷೆ ಎದುರಿಸಬೇಕಾಗುತ್ತದೆ.
ಇದನ್ನೂ ಓದಿ:ಟ್ರಕ್ ಚಾಲಕರಿಗೆ ಒಲಿಂಪಿಕ್ ಬೆಳ್ಳಿ ಪದಕ ವಿಜೇತೆ ಚಾನು ವಿಶೇಷ ಉಡುಗೊರೆ | ಯಾಕೆ ಗೊತ್ತಾ ?
“ಫ್ರ್ಯಾಂಚೈಸಿ ಸದಸ್ಯರು ಅಥವಾ ಅವರ ಕುಟುಂಬಗಳು ಯಾವುದೇ ಜೈವಿಕ-ಸುರಕ್ಷಿತ ಪರಿಸರ ಪ್ರೋಟೋಕಾಲ್ ಗಳ ಉಲ್ಲಂಘನೆಯು ಬಿಸಿಸಿಐನಿಂದ ಶಿಸ್ತು ಕ್ರಮಕ್ಕೆ ಒಳಪಟ್ಟಿರುತ್ತದೆ” ಎಂದು ಆಡಳಿತ ಮಂಡಳಿ ಎಂದು ಪಿಟಿಐ ವರದಿ ಮಾಡಿದೆ.
ಏಪ್ರಿಲ್‌ನಲ್ಲಿ ಆರಂಭವಾಗಿದ್ದಇಂಡಿಯನ್ ಪ್ರೀಮಿಯರ್ ಲೀಗ್‌ನ ಕೆಲವು ಪಂದ್ಯಗಳು ನಡೆದ ಬಳಿಕ ಆಟಗಾರರಿಗೆ ಕೋವಿಡ್ ಪ್ರಕರಣಗಳು ಕಂಡುಬಂದ ನಂತರ ಸ್ಥಗಿತಗೊಳಿಸಲಾಯಿತು, ಈಗ ಸೆಪ್ಟೆಂಬರ್ 19 ರಿಂದ ಯುಎಇ ನಲ್ಲಿ ಮತ್ತೆ ಆರಂಭವಾಗಲಿದ್ದು, ಮೊದಲ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡವನ್ನು ಎದುರಿಸಲಿದೆ.