Advertisement
ಅರೆ, ಹೆಲ್ಮೆಟ್‌ಗೂ ಪೂಜೆಗೂ ಏನು ಸಂಬಂಧ ಎಂದು ಯೋಚಿಸುತ್ತಿದ್ದೀರಾ? ಬೈಕ್ ಖರೀದಿಸಿದವರು ಹಾಗೂ ಬಳಸುತ್ತಿರುವವರು ಹೆಲ್ಮೆಟ್ ಕೂಡ ಖರೀದಿಸಲಿ ಹಾಗೂ ತಪ್ಪದೇ ಧರಿಸಲಿ ಎಂಬುದೇ ಇದರ ಹಿಂದಿನ ಆಶಯ. ಜಗತ್‌ಸಿಂಗ್‌ಪುರದಲ್ಲಿ ನೋಂದಣಿಯಾಗುವ ಬಹುತೇಕ ದ್ವಿಚಕ್ರ ವಾಹನಗಳನ್ನು ಮೊದಲು ಇದೇ ದೇಗುಲಕ್ಕೆ ತಂದು ಪೂಜೆ ಮಾಡಿಸಲಾಗುತ್ತದೆ. ಅಷ್ಟೇ ಅಲ್ಲ, ಪ್ರತಿ ನಿತ್ಯ 10ಕ್ಕೂ ಹೆಚ್ಚು ಬೈಕ್‌ಗಳು ಇಲ್ಲಿಗೆ ಪೂಜೆಗಾಗಿ ಬರುತ್ತವೆ. ಅದರಲ್ಲೂ ಸಂಕ್ರಾಂತಿಯಂತಹ ವಿಶೇಷ ದಿನಗಳಂದು 50ಕ್ಕೂ ಜಾಸ್ತಿ ಬೈಕ್‌ಗಳು ಪೂಜೆಗಾಗಿ ಕ್ಯೂನಿಲ್ಲುತ್ತವೆ. ಈ ದೇಗುಲ ಸುಮಾರು 1 ಸಾವಿರ ಹಳೆಯದಾಗಿದ್ದು, ಸಾವಿರಾರು ಜನರು ರಾಜ್ಯದ ವಿವಿಧ ಜಿಲ್ಲೆಗಳಿಂದ ಇಲ್ಲಿಗೆ ಆಗಮಿಸುತ್ತಾರೆ. ಹೀಗಾಗಿ ಒಡಿಶಾ ಪೊಲೀಸರು ಈ ನಿರ್ಧಾರ ಕೈಗೊಳ್ಳಲು ದೇವಾಲಯದ ಆಡಳಿತ ಮಂಡಳಿಯನ್ನು ಒಪ್ಪಿಸಿದೆ.
Advertisement
ಹೆಲ್ಮೆಟ್ ಇಲ್ಲದಿದ್ದರೆ ಪೂಜೆ ಇಲ್ಲ!
07:19 AM Jan 17, 2018 | |
Advertisement
Udayavani is now on Telegram. Click here to join our channel and stay updated with the latest news.