Advertisement
ನಗರದ ಕೆಪಿಸಿಸಿ ಕಚೇರಿಯಲ್ಲಿ ರವಿವಾರ ಹಮ್ಮಿಕೊಂಡಿದ್ದ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಪುಣ್ಯಸ್ಮರಣೆಯಲ್ಲಿ ಭಾಗವಹಿಸಿ ಮಾತನಾಡಿ, ನಾಯಕರ ಮನೆಗಳ ಸುತ್ತ ಓಡಾಡಿಕೊಂಡಿರುವುದರಿಂದ ಏನೂ ಉಪಯೋಗ ಆಗದು. ಬದಲಿಗೆ ಜನರ ಮನೆ-ಮನೆಗೆ ಹೋಗಿ ಲೋಕಸಭೆ ಚುನಾವಣೆಗೆ ಕೆಲಸ ಮಾಡಿ. ನೀವು ಹುಲ್ಲುಕಡ್ಡಿಯಂತಿದ್ದರೂ ನಿಮಗೆ ಅಧಿಕಾರ ಸಿಗಬೇಕಾದಾಗ ಸಿಕ್ಕೇ ಸಿಗುತ್ತದೆ. ನಿಮ್ಮ ಪರಿಶ್ರಮಕ್ಕೆ ತಕ್ಕ ಪ್ರತಿಫಲ ಸಿಗಲಿದೆ’ ಎಂದರು.
ನನಗೆ ಮತ್ತು ಸಿದ್ದರಾಮಯ್ಯ ಅವರಿಗೆ ಅಧಿಕಾರ ಸಿಗುವುದು ಮುಖ್ಯವಲ್ಲ; ನಮ್ಮ ಮೇಲೆ ಜನ ಇಟ್ಟಿರುವ ನಂಬಿಕೆ, ವಿಶ್ವಾಸ ಉಳಿಸಿಕೊಂಡು ಹೋಗುವುದು ಮುಖ್ಯ. ರಾಜ್ಯವನ್ನು ಸರ್ವಜನಾಂಗದ ಶಾಂತಿಯ ತೋಟವಾಗಿ ನಿರ್ಮಾಣ ಮಾಡುವುದು ನಮ್ಮ ಗುರಿ. ನಾವು ಬಿಜೆಪಿ ಹಾಗೂ ಜೆಡಿಎಸ್ ಅವರ ವಿಚಾರಕ್ಕೆ ಹೋಗಿ ಸಮಯ ವ್ಯರ್ಥ ಮಾಡಿಕೊಳ್ಳುವ ಆವಶ್ಯಕತೆ ಇಲ್ಲ. ವಿಪಕ್ಷಗಳು ಟೀಕೆ ಮಾಡುತ್ತಲೇ ಇರಲಿ, ನಾವು ನಮ್ಮ ಕೆಲಸ ಮಾಡೋಣ. ಜನರ ನಂಬಿಕೆ ಉಳಿಸಿಕೊಂಡು ಭ್ರಷ್ಟಾಚಾರ ನಿರ್ಮೂಲನೆ ಮಾಡಿ, ರಾಜ್ಯದ ಅಭಿವೃದ್ಧಿ ಮಾಡೋಣ. ನಮಗೆ ದ್ವೇಷ, ಅಸೂಯೆ ಬೇಡ. ನಾವು ಕಾಂಗ್ರೆಸ್ ಬರಲಿದೆ, ಪ್ರಗತಿ ತರಲಿದೆ ಎಂಬ ಸಂಕಲ್ಪ ಮಾಡಿ¨ªೆವು. ಅದನ್ನು ಸಾಕಾರ ಮಾಡೋಣ” ಎಂದು ಹೇಳಿದರು.
Related Articles
Advertisement
ಡೋಂಟ್ ಡಿಸ್ಟರ್ಬ್…!’ಪ್ಲೀಸ್ ಡೋಂಟ್ ಡಿಸ್ಟರ್ಬ್’ ಎಂದು ಡಿ.ಕೆ.ಶಿವಕುಮಾರ್, ಸಚಿವ ಎಂ.ಬಿ. ಪಾಟೀಲ್ ಅವರಿಗೆ ಗದರಿದ ಪ್ರಸಂಗ ನಡೆಯಿತು. ರಾಜೀವ್‌ಗಾಂಧಿ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ತಾವು ಭಾಷಣ ಮಾಡುತ್ತಿದ್ದ ವೇಳೆ ವೇದಿಕೆಯಲ್ಲಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಪಕ್ಕದಲ್ಲಿ ಎಂ.ಬಿ. ಪಾಟೀಲ್ ಕುಶಲೋಪರಿ ನಡೆಸಿದ್ದರು. ಇದು ಡಿ.ಕೆ. ಶಿವಕುಮಾರ್ ಅವರಿಗೆ ತುಸು ಕಿರಿಕಿರಿಯೆನಿಸಿ ಪ್ಲೀಸ್ ಡೋಂಟ್ ಡಿಸ್ಟರ್ಬ್’ ಎಂದರು. ಇದಕ್ಕೆ ಸಮಜಾಯಿಷಿ ನೀಡಲು ಸಚಿವರು ಮುಂದಾದರೂ, ಅದೇನೇ ಇರಲಿ, ಡೋಂಟ್ ಡಿಸ್ಟರ್ಬ್. ಇಲ್ಲಿ ನೀಡಬೇಕಾದ ಸಂದೇಶ ಮುಖ್ಯ ಎಂದರು.