Advertisement

ಪಿಒಕೆ ವಿಲೀನ ಪ್ರಸ್ತಾಪವಿಲ್ಲ: ಪಾಕ್‌

09:44 AM Feb 01, 2020 | Team Udayavani |

ಇಸ್ಲಾಮಾಬಾದ್‌: ತಾನು ಅತಿಕ್ರಮಿಸಿಕೊಂಡಿರುವ ಕಾಶ್ಮೀರ ಪ್ರದೇಶವನ್ನು ಪಾಕಿಸ್ತಾನದ ಜತೆಗೆ ವಿಲೀನ ಮಾಡುವ ಪ್ರಸ್ತಾಪವೇ ಇಲ್ಲ. ಈ ಬಗೆಗಿನ ವರದಿಗಳೇ ಆಧಾರರಹಿತ ಎಂದು ಪಾಕ್‌ ವಿದೇಶಾಂಗ ಇಲಾಖೆ ತಿಳಿಸಿದೆ.

Advertisement

“ದ ಡಾನ್‌’ ಪತ್ರಿಕೆಯಲ್ಲಿ ಪಾಕಿಸ್ತಾನ ಆಕ್ರಮಿತ ಪ್ರದೇಶವನ್ನು ಪಾಕಿಸ್ತಾನದ ಮುಖ್ಯ ಭೂಪ್ರದೇಶದ ಜತೆಗೆ ಸೇರ್ಪಡೆ ಮಾಡುವ ಬಗ್ಗೆ ವರದಿ ಪ್ರಕಟವಾಗಿತ್ತು. ಅದಕ್ಕೆ ಪ್ರತಿಕ್ರಿಯೆ ನೀಡಿರುವ ವಿದೇಶಾಂಗ ಇಲಾಖೆ ವಕ್ತಾರರಾದ ಆಯಿಷಾ ಫಾರೂಕಿ, ಅಂಥ ಪ್ರಸ್ತಾಪವೇ ಇಲ್ಲವೆಂದಿದ್ದಾರೆ. ಇದರ ಜತೆಗೆ ಗಿಲ್ಗಿಟ್ ಬಾಲ್ಟಿಸ್ತಾನ್‌ ನಿಯಂತ್ರಣಕ್ಕೆ ಕೂಡ ಹೊಸ ಕಾನೂನು ರಚಿಸುವ ಪ್ರಸ್ತಾಪವೇ ಇಲ್ಲವೆಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next