Advertisement

ನಾವು ಅಧಿಕಾರಕ್ಕೆ ಬಂದರೆ,ಜನರ ಅನುಮತಿಯಿಲ್ಲದೆ ಯಾವ ಯೋಜನೆಯನ್ನು ಜಾರಿಗೆ ತರಲ್ಲ: ಕೇಜ್ರಿವಾಲ್

05:36 PM Dec 18, 2021 | Team Udayavani |

ಪಣಜಿ: ಗೋವಾದಲ್ಲಿ ಆಮ್ ಆದ್ಮಿ ಪಕ್ಷ ಅಧಿಕಾರಕ್ಕೆ ಬಂದರೆ ಜನತೆಯ ಅನುಮತಿಯ ಹೊರತು ಯಾವುದೇ ಯೋಜನೆಗಳನ್ನು ಜಾರಿಗೆ ತರಲಾಗುವುದಿಲ್ಲ. ರಾಜ್ಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿರುವ ಮೂರು ಯೋಜನೆಗಳು ರಾಜ್ಯದ ಜನತೆಗೆ ಬೇಡವಾಗಿದೆ. ಆದರೆ ಕೆಲವು ದೊಡ್ಡ ಉದ್ಯೋಗಿಗಳಿಗೆ ಅಗತ್ಯವಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ಗೋವಾದಲ್ಲಿ ಈ ಮೂರು ಯೋಜನೆಗಳನ್ನು ಜಾರಿಗೆ ತಂದಿದೆ ಈ ಹಿನ್ನೆಲೆಯಲ್ಲಿ ಗೋವಾದಲ್ಲಿ ಆಮ್ ಆದ್ಮಿ ಪಕ್ಷವೊಂದೇ ಪರ್ಯಾಯವಾಗಿದೆ. ಗೋವಾದಲ್ಲಿ ಜನತೆಗೆ ಯೋಗ್ಯ ಸರ್ಕಾರವನ್ನು ಆಮ್ ಆದ್ಮಿ ಪಕ್ಷ ಮಾತ್ರ ನೀಡಬಲ್ಲದು ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನುಡಿದರು,

Advertisement

ವಾಸ್ಕೊದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಬಿಜೆಪಿ ಶಾಸಕಿ ಎಲಿನಾ ಸಾಲ್ಡಾನಾ ರವರು ಆಮ್ ಆದ್ಮಿ ಪಕ್ಷ ಸೇರ್ಪಡೆಯಾದರು. ಈ ಸಂದರ್ಭದಲ್ಲಿ ದೆಹಲಿ ಮುಖ್ಯಮಂತ್ರಿ ಕೇಜ್ರಿವಾಲ್  ಮಾತಾನಾಡಿದರು.

ಈ ಸಂದರ್ಭದಲ್ಲಿ ಆಮ್ ಆದ್ಮಿ ಪಕ್ಷ ಸೇರಿದ ಎಲಿನಾ ಸಾಕ್ಡಾನಾ ಮಾತನಾಡಿ, ಈ ದಿನ ನನಗೆ ಅತ್ಯಂತ ಮಹತ್ವದ ದಿನವಾಗಿದೆ. ಸರ್ವಸಾಮಾನ್ಯ ಪಕ್ಷ ಯಾವುದಾದರೂ ಇದ್ದರೆ ಅದು ಆಮ್ ಆದ್ಮಿ ಪಕ್ಷವಾಗಿದೆ. ಮಾಜಿ ಮುಖ್ಯಮಂತ್ರಿ ದಿ. ಬಿಜೆಪಿಯಲ್ಲಿ  ಮನೋಹರ್ ಪರೀಕರ್ ರವರು ಇದ್ದ ಸಂದರ್ಭದಲ್ಲಿದ್ದ ಪಕ್ಷದ ತತ್ವ ಸಿದ್ಧಾಂತಗಳು ಅಂದಿನಂತೆ ಉಳಿದಿಲ್ಲ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next