ಬೆಂಗಳೂರು: ಪಶ್ಚಿಮ ಘಟ್ಟಗಳ ಅಭಿವೃದ್ಧಿ ಕ್ರಮವನ್ನು ಮರು ಪರಿಶೀಲಿಸಬೇಕು ಹಾಗೂ ಗಾಡ್ಗಿಳ್ ವರದಿಯ ಕುರಿತಾಗಿ ಚರ್ಚೆಗಳಾಗಬೇಕು ಎಂದು “ಸೇವ್ ವೈಲ್ಡ್ ಅಟ್ಮಾಸ್‌ಫೇರ್-ನೇಚರ್ ಆ್ಯಂಡ್ ಮ್ಯಾನ್’ (ಸ್ವಾನ್-ಮ್ಯಾನ್) ಸಂಸ್ಥೆಯ ಕಾರ್ಯದರ್ಶಿ, ಪರಿಸರ ಹೋರಾಟಗಾರ ಅಖೀಲೇಶ್ ಚಿಪ್ಲಿ ಪತ್ರಿಕಾಗೋಷ್ಠಿಯಲ್ಲಿ ಆಗ್ರಹಿಸಿದರು.
ಪಶ್ಚಿಮಘಟ್ಟಗಳು ಸೂಕ್ಷ್ಮ ಪ್ರದೇಶವಾಗಿದ್ದು ಇಲ್ಲಿ ಬಹುತೇಕ ನದಿಗಳು ಉಗಮವಾಗುತ್ತವೆ. ಆದ್ದರಿಂದ ಉಳಿದ ಪ್ರದೇಶಗಳಂತೆ ಈ ಭಾಗಗಳಲ್ಲಿ ಹಾಗೂ ಅಚ್ಚುಕಟ್ಟು ಪ್ರದೇಶಗಳಲ್ಲಿ ಯಾವುದೇ ಯೋಜನೆಗಳನ್ನು ಜಾರಿಗೊಳಿಸದೆ, ವಿಶೇಷ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವ ಅಗತ್ಯವಿದೆ ಎಂದರು.
ಪರಿಸರ ಸ್ನೇಹಿ ವಸ್ತುಗಳ ಬಳಕೆಯನ್ನು ಹೆಚ್ಚಿಸುವ ಮೂಲಕ ಪಶ್ಚಿಮ ಘಟ್ಟಗಳ ಮೇಲಿನ ಒತ್ತಡವನ್ನು ಕಡಿಮೆ ಮಾಡಬೇಕು. ಈ ನಿಟ್ಟಿನಲ್ಲಿ ಗಾಡ್ಗಿಳ್ ವರದಿ ಹಾಗೂ ಇತರ ಅಭಿವೃದ್ಧಿ ಯೋಜ ನೆಗಳ ಕುರಿತು ಗಂಭೀರ ಚರ್ಚೆಗಳ ಆವಶ್ಯಕತೆಯಿದೆ. ಪಶ್ಚಿಮ ಘಟ್ಟವನ್ನು ಉಳಿಸುವ ದಿಶೆಯಲ್ಲಿ ಇದು ಮೊದಲ ಹೆಜ್ಜೆಯಾಗಬೇಕು ಎಂದರು.
ಪ್ರೊಜೆಕ್ಟ್ ವೃಕ್ಷ ಫೌಂಡೇಶನ್ ಅಧ್ಯಕ್ಷ ವಿಜಯ್ ನಿಶಾಂತ್ ಮಾತ ನಾಡಿ, ಸುಸ್ಥಿರ ಅಭಿವೃದ್ಧಿಯತ್ತ ಗಮನ ಹರಿಸದೇ ಪರಿಸರ ನಾಶ ಮಾಡಿರು ವುದು ಪ್ರಾಕೃತಿಕ ವಿಕೋಪಕ್ಕೆ ಮೂಲ ಕಾರಣ. ಯಾವುದೇ ಯೋಜನೆಯ ಜಾರಿಗೆ ಮೊದಲು ಸ್ಥಳೀಯ ಪರಿಸರದ ಗುಣಗಳ ಬಗ್ಗೆ ಅರಿವಿರುವುದು ಬಹಳ ಮುಖ್ಯ ಎಂದು ತಿಳಿಸಿದರು.
ಇದನ್ನೂ ಓದಿ: Apprenticeship Course: ಪದವಿ ಜತೆ ಅಪ್ರಂಟಿಸ್‌ಶಿಪ್ ಕೋರ್ಸ್ ಆರಂಭ…