ಹಾವೇರಿ: ಕೋವಿಡ್ ಲಸಿಕೆ ಪಡೆದ ವ್ಯಕ್ತಿಗೆಯಾವುದೇ ತೊಂದರೆಗಳು ಉಂಟಾಗಿಲ್ಲ.ಜಿಲ್ಲೆಯ ಜನತೆ ಯಾವುದೇ ಭಯವಿಲ್ಲದೇಲಸಿಕೆ ಪಡೆಯಲು ಮುಂದೆ ಬರಬೇಕೆಂದುಶಾಸಕ ನೆಹರು ಓಲೇಕಾರ ಹೇಳಿದರು.
ನಗರದ ಜಿಲ್ಲಾ ಆಸ್ಪತ್ರೆಗೆ ಶನಿವಾರ ಭೇಟಿ ನೀಡಿದ ಅವರು, ಕೋವಿಡ್ ಲಸಿಕೆ(ಕೋವಿಶೀಲ್ಡ್ ಲಸಿಕೆ) ಪಡೆದ ನಂತರಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.ಈಗಾಗಲೇ ಕೋವಿಡ್ ಎರಡನೇಅಲೆ ಆರಂಭವಾಗಿದ್ದು, ಕೋವಿಡ್ ಲಸಿಕೆಪಡೆಯುವುದು ಅತ್ಯಂತ ಅವಶ್ಯಕ ಎಂದು ಹೇಳಿದರು.
ಕೋವಿಡ್ ಅಲೆ ತಡೆಯಲು ನಮ್ಮ ದೇಶದಿಂದ 46 ದೇಶಗಳಿಗೆ ವಾಕ್ಸಿನ್ ರಫ್ತು ಮಾಡಲಾಗಿದೆ. ಕಳೆದ ಎರಡು ತಿಂಗಳಿನಿಂದ ಜಿಲ್ಲೆಯಲ್ಲಿ ಕೋವಿಶೀಲ್ಡ್ ಲಸಿಕೆ ನೀಡಲಾಗುತ್ತಿದೆ. ಮೊದಲ ಹಂತದಲ್ಲಿಕೋವಿಡ್ ವಾರಿಯರ್ಸ್‌ಗೆ ಲಸಿಕೆನೀಡಲಾಯಿತು. ಎರಡನೇ ಹಂತದಲ್ಲಿ 40 ರಿಂದ 60 ವರ್ಷದ ಆರೋಗ್ಯವಂತರಿಗೆಲಸಿಕೆ ನೀಡಲಾಗುತ್ತಿದೆ. ಮದ್ಯಪಾನ ಹಾಗೂ ಮಾಂಸಾಹಾರಿಗಳು ವ್ಯಾಕ್ಸಿನ್‌ತೆಗೆದುಕೊಂಡರೆ ತೊಂದರೆಯಾಗುತ್ತದೆ ಎಂಬ ತಪ್ಪು ಕಲ್ಪನೆ ಹೊಂದಲಾಗಿದೆ. ಲಸಿಕೆ ನೀಡುವ ಮೊದಲು ವೈದ್ಯರು ನಿಮ್ಮ ಆರೋಗ್ಯ ಪರೀಕ್ಷಿಸಿ ಲಸಿಕೆ ನೀಡುತ್ತಾರೆ. ಲಸಿಕೆ ಪಡೆದ ನಂತರ 30 ನಿಮಿಷ ನಿಗಾ ವಹಿಸಲಾಗುವುದುಹಾಗೂ ಲಸಿಕೆ ಪಡೆದ ಒಂದು ದಿನದ ನಂತರದೈನಂದಿನ ಚಟುವಟಿಕೆ ಕೈಗೊಳ್ಳಬಹುದು ಎಂದು ಹೇಳಿದರು.
ಆರೋಗ್ಯ ಇಲಾಖೆಯ 8509, ಕಂದಾಯ ಇಲಾಖೆಯ 292, ಪೊಲೀಸ್ ಇಲಾಖೆ1773, ನಗರಸಭೆಯ 621, 60 ವರ್ಷ ಮೇಲ್ಪಟ್ಟ 1576 ಹಾಗೂ ಪಿಆರ್‌ಇಡಿಯ621 ಹಾಗೂ 40 ರಿಂದ 59 ವರ್ಷದೊಳಗಿನ 420 ಜನರು ಸೇರಿ ಒಂಭತ್ತು ಸಾವಿರಕ್ಕಿಂತ ಅಧಿಕ ಜನರು ಲಸಿಕೆ ಪಡೆದುಕೊಂಡಿದ್ದಾರೆ. ಹಾವೇರಿ ನಗರದ ವೀರಾಪುರ ಹಾಗೂಮಲ್ಲಾಡದ ಖಾಸಗಿ ಆಸ್ಪತ್ರೆಗಳಲ್ಲಿಕೋವಿಡ್ ಲಸಿಕೆ ನೀಡಲಾಗುತ್ತಿದೆ. 250ರೂ. ದರ ನಿಗ ಪಡಿಸಲಾಗಿದ್ದು, ಸ್ಥಿತಿವಂತರುಇಲ್ಲಿ ಲಸಿಕೆ ಪಡೆದುಕೊಳ್ಳಬಹುದು.ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ಲಸಿಕೆ ನೀಡಲಾಗುತ್ತಿದ್ದು, ಲಸಿಕೆ ಪಡೆಯಲು ತಮ್ಮಆಧಾರ್ ಕಾರ್ಡ್ ಅಥವಾ ಇತರೆ ಗುರುತಿನ ಚೀಟಿ ತರಬೇಕೆಂದು ಹೇಳಿದರು.
ಬೆಂಗಳೂರು ಭಾಗದಲ್ಲಿ ಕೋವಿಡ್ ಎರಡನೇ ಅಲೆ ಅಧಿಕವಾಗಿದೆ. ಹಾಗಾಗಿ,ಕೋವಿಡ್ ಲಸಿಕೆ ಪಡೆಯುವ ಮೂಲಕ ನಿಮ್ಮ ಹಾಗೂ ಕುಟುಂಬದ ಆರೋಗ್ಯಕಾಪಾಡಿಕೊಳ್ಳಬೇಕು. ಮಾಸ್ಕ್ ಧಾರಣೆಎಲ್ಲರ ಜವಾಬ್ದಾರಿಯಾಗಿದೆ ಹಾಗೂಕಡ್ಡಾಯವಾಗಿ ಎಲ್ಲರೂ ಮಾಸ್ಕ್ ಧರಿಸಬೇಕೆಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಪಿ.ಆರ್.ಹಾವನೂರ, ಡಾ.ಪೂಜಾರ ಇತರರು ಇದ್ದರು.