Advertisement

ದಿನಸಿ ನೆಪ: ಖಾಸಗಿ ವಾಹನ ಸಂಚಾರಕ್ಕಿಲ್ಲ ಬ್ರೇಕ್‌!

10:09 PM Apr 13, 2020 | Team Udayavani |

ಮಂಗಳೂರು: ಮಂಗಳೂರಿನಲ್ಲಿ ಸೋಮವಾರವೂ ಅಘೋಷಿತ ಬಂದ್‌ ವಾತಾವರಣ ಇತ್ತು. ದಿನಸಿ ಖರೀದಿಗಾಗಿ ಬೆಳಗ್ಗಿನಿಂದ ಮಧ್ಯಾಹ್ನದವರೆಗೆ ಅವಕಾಶ ನೀಡಲಾಗಿದ್ದು, ಈ ಸಂದರ್ಭ ಮಾತ್ರ ಜನ ಸಂಚಾರ ಹೆಚ್ಚಾಗಿ ಕಂಡು ಬಂದಿದೆ. ಖಾಸಗಿ ವಾಹನಗಳಲ್ಲೇ ಜನರು ಸಂಚರಿಸುತ್ತಿದ್ದರು.

Advertisement

ದಿನಸಿಯನ್ನು ಮನೆ ಸಮೀಪದ ಅಂಗಡಿ ಗಳಿಂದಲೇ ಖರೀದಿಸಬೇಕು ಹಾಗೂ ಕಾಲ್ನಡಿಗೆಯಲ್ಲಿಯೇ ಸಂಚರಿಸಬೇಕು ಎಂದು ಜಿಲ್ಲಾಡಳಿತ ಸೂಚಿಸಿದೆಯಾದರೂ ಇದನ್ನು ಜನರು ಪಾಲಿಸಿದಂತಿಲ್ಲ. ಮಂಗ ಳೂರು ಪೊಲೀಸ್‌ ಆಯುಕ್ತರ ವಲಯ, ಪೊಲೀಸ್‌ ವರಿಷ್ಠಾಧಿಕಾರಿ ವ್ಯಾಪ್ತಿಯ ಅಲ್ಲಲ್ಲಿ ಪೊಲೀಸ್‌ ಭದ್ರತೆ ಕೈಗೊಳ್ಳಲಾಗಿದ್ದು, ಖಾಸಗಿ ವಾಹನಗಳಲ್ಲಿ ಸಂಚರಿಸುವವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿದೆ. ಇಷ್ಟಿದ್ದರೂ ಇದನ್ನು ಮೀರಿ ಹಲವು ವಾಹನದವರು ಸಂಚರಿಸುತ್ತಿದ್ದುದು ಕಂಡು ಬಂತು.

ಮಂಗಳೂರಿನ ಮೀನು-ಮಾಂಸ ಮಾರುಕಟ್ಟೆ, ಸೂಪರ್‌ ಬಜಾರ್‌, ಅಂಗಡಿ ಗಳಲ್ಲಿ ಬೆಳಗ್ಗಿನಿಂದ ಮಧ್ಯಾಹ್ನದವರೆಗೆ ಗ್ರಾಹಕರು ಕಂಡುಬಂದರು. ಕೆಲವೊಂದು ಅಂಗಡಿಗಳಲ್ಲಿ ಸರತಿ ಸಾಲು ಕಂಡು ಬಂದರೂ ಜನರು ಸಾಮಾಜಿಕ ಅಂತರ ಕಾಯ್ದುಕೊಂಡಿದ್ದರು. ಸೆಂಟ್ರಲ್‌ ಮಾರುಕಟ್ಟೆ ಆವರಣದ ಹೊರಗಿನ ರಸ್ತೆಗಳಲ್ಲಿ ಚಿಲ್ಲರೆ ವ್ಯಾಪಾರಸ್ಥರು ತರಕಾರಿ, ಹಣ್ಣು ಹಂಪಲು ಮಾರಾಟ ನಡೆಸಿದರು.

ನಗರದ ಬಹುತೇಕ ನ್ಯಾಯಬೆಲೆ ಅಂಗಡಿ ಗಳಲ್ಲಿ ಜನರು ಕ್ಯೂನಲ್ಲಿ ನಿಂತು ಪಡಿತರ ಪಡೆಯುತ್ತಿರುವ ದೃಶ್ಯ ಕಂಡುಬಂತು. ಪಾಂಡೇಶ್ವರ, ಮಂಗಳಾದೇವಿ ನ್ಯಾಯಬೆಲೆ ಅಂಗಡಿಗಳಲ್ಲಿ ಬಹಳ ಉದ್ದದ ಸಾಲು ಗಳಿದ್ದವು. ಕೆಲವೆಡೆ ಸಾಮಾಜಿಕ ಅಂತರ ಕಾಪಾಡಲು ಪೊಲೀಸರು ಇದ್ದರು. ಉಳಿದಂತೆ, ನಗರದ ಪ್ರಮುಖ ಮೆಡಿಕಲ್‌ಗ‌ಳಲ್ಲಿಯೂ ಬೆಳಗ್ಗಿನ ಹೊತ್ತು ಜನರು ಕ್ಯೂನಲ್ಲಿ ನಿಂತು (ಸಾಮಾಜಿಕ ಅಂತರ ಕಾಯ್ದುಕೊಂಡು) ಔಷಧ ಖರೀದಿಸಿದರು.

ಪೊಲೀಸ್‌ ಎಚ್ಚರಿಕೆ
ಕೋವಿಡ್ 19 ಸಂಬಂಧ ಪಾಲಿಕೆ ಯಿಂದ ನಿಗಾ ವಹಿಸಲು ನಿಯೋಜಿಸಲಾಗಿರುವ ಹಿರಿಯ ಅಧಿಕಾರಿಗಳು ಹಾಗೂ ಸಿಬಂದಿ ವರ್ಗ ನಗರದ ಮಾರುಕಟ್ಟೆ, ವ್ಯಾಪಾರ ಸ್ಥಳಗಳಲ್ಲಿ ಜನರಿಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಜಾಗೃತಿಯ ಜತೆಗೆ ವ್ಯಾಪಾರಿಗಳಿಗೂ ಮುಂಜಾಗೃತಾ ಕ್ರಮಗಳ ಬಗ್ಗೆ ಮಾಹಿತಿ ಒದಗಿಸಿದರು. ಜತೆಗೆ ಸಾಮಾಜಿಕ ಅಂತರದ ಜವಾಬ್ದಾರಿ ನಿರ್ವಹಿಸದ ನಗರದ ಕೆಲವು ಅಂಗಡಿಗಳಿಗೆ ಪೊಲೀಸರು ಬಂದು ಅಂಗಡಿ ಮಾಲಕರಿಗೆ ಎಚ್ಚರಿಕೆ ನೀಡುತ್ತಿದ್ದ ದೃಶ್ಯ ಕಂಡುಬಂತು.

Advertisement
Advertisement

Udayavani is now on Telegram. Click here to join our channel and stay updated with the latest news.

Next