Advertisement
ತಮ್ಮ ಪಕ್ಷ ಬಿಜು ಜನತಾ ದಳ (ಬಿಜೆಡಿ) ಯಾವಾಗಲೂ ಮಾಡಿದಂತೆ ಮುಂದಿನ ವರ್ಷದ ಲೋಕಸಭೆ ಚುನಾವಣೆಯಲ್ಲಿ ಏಕಾಂಗಿಯಾಗಿ ಎಂದು ಪಟ್ನಾಯಕ್ ಘೋಷಿಸಿದರು. ನವೀನ್ ಪಟ್ನಾಯಕ್ ಅವರು ನಿನ್ನೆ ಸಂಜೆ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಿದ್ದು, ಇದನ್ನು ಸೌಜನ್ಯದ ಭೇಟಿ ಎಂದು ಕರೆದಿದ್ದಾರೆ.
Related Articles
Advertisement
ಕಾಂಗ್ರೆಸ್ ಮತ್ತು ಬಿಜೆಪಿ ಎರಡರಿಂದಲೂ ಸಮಾನವಾಗಿ ದೂರ ಉಳಿದಿರುವ ಬಿಜೆಡಿಯ ನಿಲುವನ್ನು ಪುನರುಚ್ಚರಿಸಿದ ಒಡಿಶಾ ಸಿಎಂ, ತಮ್ಮ ರಾಜ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಪ್ರಸ್ತಾಪಿಸಲು ಪ್ರಧಾನಿಯನ್ನು ಭೇಟಿಯಾಗಿರುವುದಾಗಿ ಹೇಳಿದರು.
“ನಾನು ಪಿಎಂ ಮೋದಿಯನ್ನು ಭೇಟಿ ಮಾಡಿ ಒಡಿಶಾಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಚರ್ಚಿಸಿದ್ದೇನೆ. ಭುವನೇಶ್ವರದಲ್ಲಿ ಸಾಕಷ್ಟು ಟ್ರಾಫಿಕ್ ಆಗುತ್ತಿರುವುದರಿಂದ ಮತ್ತು ನಮ್ಮ ವಿಮಾನ ನಿಲ್ದಾಣವನ್ನು ವಿಸ್ತರಿಸಬೇಕಾಗಿರುವುದರಿಂದ ನಾನು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಗ್ಗೆ ಚರ್ಚಿಸಿದ್ದೇನೆ” ಎಂದು ಅವರು ಹೇಳಿದರು.