Advertisement

ಅಭಿವೃದ್ಧಿ ವಿಷಯದಲ್ಲಿ ರಾಜಕೀಯ ಬೇಡ

04:57 PM Dec 21, 2020 | Suhan S |

ಸೇಡಂ: ಸಾರ್ವಜನಿಕರಿಗೆ ಮೂಲಭೂತ ಸೌಲಭ್ಯ ಕಲ್ಪಿಸುವ ಹಾಗೂ ಅಭಿವೃದ್ಧಿ ವಿಷಯ ಬಂದಾಗ ಪಕ್ಷಭೇದ ಮರೆತು ಕೆಲಸ ಮಾಡಬೇಕು ಎಂದು ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಅಧ್ಯಕ್ಷ ಹಾಗೂ ಶಾಸಕ ರಾಜಕುಮಾರ ಪಾಟೀಲ ತೇಲ್ಕೂರ್‌ ಹೇಳಿದರು.

Advertisement

ಪುರಸಭೆ ಕಾರ್ಯಾಲಯದಲ್ಲಿ ಅಧ್ಯಕ್ಷೆ ಚನ್ನಮ್ಮ ಪಾಟೀಲ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಚುನಾವಣೆಗಳು ಬಂದಾಗ ಮಾತ್ರ ರಾಜಕೀಯ ವಿಷಯಗಳಿರಲಿ. ಚುನಾಯಿತರಾದ ನಂತರಎಲ್ಲರೂ ಒಂದೆ. ಎಲ್ಲರೂ ಮನೆ ಸದಸ್ಯರಂತೆಪಟ್ಟಣದ ಅಭಿವೃದ್ಧಿಯಲ್ಲಿ ತೊಡಗಿಸಿಕೊಳ್ಳಬೇಕು. ಬಡಾವಣೆಗಳಲ್ಲಿ ಸ್ವತ್ಛತೆಗೆ ಆದ್ಯತೆ ನೀಡಬೇಕು. ಪ್ರತಿ ಸದಸ್ಯರು ವಾರಕ್ಕೆ ಎರಡು ಬಾರಿ ತಮ್ಮ ಬಡಾವಣೆಯಲ್ಲಿ ಸುತ್ತಾಡಿ ಸಮಸ್ಯೆ ಆಲಿಸಬೇಕು. ಕುಡಿಯುವ ನೀರಿನ ತೊಂದರೆಯಾಗದಂತೆ ನೋಡಿಕೊಳ್ಳಬೇಕು ಎಂದರು.

ಪಟ್ಟಣದ ಅಭಿವೃದ್ಧಿಗಾಗಿ 150 ಕೋಟಿ ರೂ. ಮೀಸಲಿಡಲಾಗಿದ್ದು, ಅವಶ್ಯಕತೆ ಇದ್ದ ಕೆಲಸಕ್ಕೆಬಳಸಿಕೊಳ್ಳಬೇಕು. ಈಗ ಬರುತ್ತಿರುವ ನೀರು ಪಟ್ಟಣಕ್ಕೆಸಾಕಾಗುತ್ತಿಲ್ಲ ಎನ್ನಲಾಗುತ್ತಿದೆ. ಆದ್ದರಿಂದ ಕಾಚೂರಗ್ರಾಮದಿಂದ ನೀರು ಪೂರೈಸಲು 30 ಕೋಟಿ ರೂ. ವೆಚ್ಚದ ಕ್ರಿಯಾ ಯೋಜನೆ ಸಿದ್ದಪಡಿಸಲಾಗಿದೆ ಎಂದುಹೇಳಿದರು. ಪುರಸಭೆ ಉಪಾಧ್ಯಕ್ಷ ಶಿವಾನಂದಸ್ವಾಮಿ, ಮುಖ್ಯಾ ಧಿಕಾರಿ ಸತೀಶ ಗುಡ್ಡೆ, ಸದಸ್ಯರಾದ ವಿರೇಂದ್ರ ರುದೂರ, ಸಂತೋಷ ತಳವಾರ, ಬಸಣ್ಣರನ್ನೆಟ್ಲಾ, ಲಾಲು ರಾಠೊಡ, ಶ್ರೀನಿವಾಸ ಬಳ್ಳಾರಿ,  ನಾಗಕುಮಾರ ಎಳ್ಳಿ, ರವೀಂದ್ರ ಜಡೇಕರ್‌, ಸಿದ್ದು ನಾಯಿಕೋಡಿ, ಚಂದ್ರಕಾಂತ ಕೆರಳ್ಳಿ, ಸುನಂದಾ ರಾಜಾಪುರ, ಆಶಾ ಜಾಧವ, ಮಲ್ಕಮ್ಮ ಕಣೇಕಲ್‌, ಪ್ರಮೀಳಾ, ಕಾಶಪ್ಪ ನಾಯಿಕೋಡಿ, ಅಬ್ದುಲ್‌ರಸೀದ್‌, ದತ್ತಾತ್ರೇಯ ಐನಾಪುರ, ಶೈರೀಭಿ ನಾಡೆಪಲ್ಲಿ, ಫಾತಿಮಾ ಅಂಜುಮ, ಅತಿಯಾ ಬೇಗಂ ಇನ್ನಿತರರು ಇದ್ದರು

Advertisement

Udayavani is now on Telegram. Click here to join our channel and stay updated with the latest news.

Next