Advertisement
ನಿಮ್ಮ ಸಂವಿಧಾನಬದ್ಧ ಕರ್ತವ್ಯ ಗಳನ್ನು ನಿರ್ವಹಿಸುವಾಗ ರಾಜ ಕೀಯ ಪ್ರೇರಿತವಾಗಿ ತೀರ್ಮಾನ ಗಳನ್ನು ಕೈಗೊಳ್ಳುತ್ತಿದ್ದೀರಿ. ನಿಮ್ಮ ಕಾರ್ಯ ವೈಖರಿಯಿಂದ ರಾಜಭವನದ ಪಾವಿತ್ರ್ಯ ಸಮಾಧಿ ಸೇರುವ ಅಪಾಯವಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಅಭಿಯೋಜನೆಗೆ ಅನುಮತಿ ಕೊಟ್ಟ ನೀವು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ, ಮಾಜಿ ಸಚಿವರಾದ ಜನಾರ್ದನ ರೆಡ್ಡಿ, ಮುರುಗೇಶ್ ನಿರಾಣಿ, ಶಶಿಕಲಾ ಜೊಲ್ಲೆ ವಿರುದ್ಧದ ಪ್ರಕರಣಗಳನ್ನು ಶೈತ್ಯಾಗಾರದಲ್ಲಿ ಇಟ್ಟಿದ್ದೀರಿ. ಅವುಗಳಿಗೆ ಭ್ರಷ್ಟಾಚಾರ ನಿಗ್ರಹ ಕಾಯ್ದೆ ಸೆಕ್ಷನ್ 19 ಹಾಗೂ ಭಾರತೀಯ ನ್ಯಾಯ ಸಂಹಿತೆ ಸೆಕ್ಷನ್ 218ರ ಚಾರ್ಜ್‌ಶೀಟ್ ಸಲ್ಲಿಸಲು ತನಿಖಾ ಸಂಸ್ಥೆಗಳಿಗೆ ಅನುಮತಿ ನೀಡಬೇಕು ಎಂದು ಆಗ್ರಹಿಸಿದರು.
ಪ್ರಮುಖ 6 ಬೇಡಿಕೆಗಳನ್ನು ಇಟ್ಟಿ ರುವ ಕಾಂಗ್ರೆಸ್, ರಾಜ್ಯಪಾಲ ರಾಗಿ ಸಂವಿಧಾನವನ್ನು ಎತ್ತಿ ಹಿಡಿಯುವುದರಲ್ಲಿ ನಿಮ್ಮ ಪಾತ್ರವಿದೆ. ಯಾವುದೇ ಭಯ ಮತ್ತು ಪಕ್ಷಪಾತವಿಲ್ಲದೆ ನ್ಯಾಯದಾನ ಮಾಡ ಬೇಕು. ನಿಮ್ಮ ತೀರ್ಮಾನಗಳು ನಿಷ್ಪಕ್ಷ ವಾಗಿರ ಬೇಕು. ರಾಜ್ಯ ಸರಕಾರದ ಕಾರ್ಯಾಂಗದ ವಿಚಾರದಲ್ಲಿ ಮಧ್ಯ ಪ್ರವೇಶಿಸುವುದನ್ನು ನಿಲ್ಲಿಸಿ. ಶಾಸನ ಸಭೆಯಿಂದ ಅಂಗೀಕಾರ ರೂಪದಲ್ಲಿ ಬಂದ ವಿಧೇಯಕಗಳಿಗೆ ತ್ವರಿತ ವಾಗಿ ಅನುಮೋದನೆ ನೀಡಬೇಕು. ರಾಜಕೀಯ ಪ್ರಭಾವಕ್ಕೆ ಒಳಗಾಗದೆ ಸಂವಿಧಾನಬದ್ಧವಾಗಿ ನಿಮ್ಮ ಕರ್ತವ್ಯ ಗಳನ್ನು ಪರಿಶುದ್ಧವಾಗಿ ನಿರ್ವಹಿಸಿ ಎಂದು ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಡಿಸಿಎಂ ಡಿ.ಕೆ. ಶಿವಕುಮಾರ್ ಪತ್ರದಲ್ಲಿ ಉಲ್ಲೇಖೀಸಿದ್ದಾರೆ. ನಾಲ್ವರ ಕಡತವೇ ನನ್ನಲ್ಲಿಲ್ಲ: ಗೆಹ್ಲೋಟ್
ಮನವಿ ಪತ್ರ ಸ್ವೀಕರಿಸಿ ಪರಿಶೀಲನೆ ನಡೆಸಿದ ರಾಜ್ಯಪಾಲರು, ನೀವು ಹೇಳುತ್ತಿರುವ ನಾಲ್ವರ ವಿರುದ್ಧದ ಕಡತಗಳು ನನ್ನ ಬಳಿ ಇಲ್ಲವೇ ಇಲ್ಲ. 2 ಪ್ರಕರಣಗಳಿಗೆ ಸಂಬಂಧಿಸಿದಂತೆ ಸ್ಪಷ್ಟನೆಗಾಗಿ ಸಂಬಂಧಿಸಿದವರಿಗೆ ಕಳುಹಿಸಿದ್ದೇನೆ. ಅಲ್ಲಿಂದ ಸ್ಪಷ್ಟನೆ ಬಂದಿಲ್ಲ. ಮತ್ತೂಂದನ್ನು ತಿರಸ್ಕರಿಸಿ ಆಗಿದೆ. ನಾನು ಯಾವ ವಿಚಾರದಲ್ಲೂ ರಾಜಕೀಯ ಮಾಡುವವನಲ್ಲ. ಎಲ್ಲವನ್ನೂ ನಿಷ್ಪಕ್ಷವಾಗಿಯೇ ಮಾಡಿದ್ದೇನೆ ಎಂದು ಗೆಹ್ಲೋಟ್ ಹೇಳಿದರು.
Related Articles
ರಾಜ್ಯಪಾಲರ ಭೇಟಿ ಬಳಿಕ ರಾಜಭವನದ ಬಳಿಯೇ ಸುದ್ದಿಗಾರರೊಂದಿಗೆ ಮಾತನಾಡಿದ ಡಿಸಿಎಂ ಶಿವಕುಮಾರ್, 3 ದಿನದ ಹಿಂದೆಯೇ ರಾಜ್ಯಪಾಲರ ಭೇಟಿಗೆ ಸಮಾಯಾವಕಾಶ ಕೇಳಲಾಗಿತ್ತು. ಶನಿವಾರ ಅವಕಾಶ ಕೊಟ್ಟಿದ್ದರು. ಅದರಂತೆ ಪಕ್ಷದ ಶಾಸಕರು, ಮೇಲ್ಮನೆ ಸದಸ್ಯರು, ಸಂಸದರು ಎಲ್ಲರ ನಿಯೋಗ ಭೇಟಿ ಮಾಡಿದೆವು. ಕಾಫಿ, ಟೀ, ಸ್ನ್ಯಾಕ್ಸ್ ಕೊಟ್ಟು ನಮ್ಮ ಮಾತುಗಳನ್ನೂ ಆಲಿಸಿದರು. ನಮಗೆ ನ್ಯಾಯ ಕೊಡುವುದಾಗಿ ಭರವಸೆಯನ್ನೂ ಕೊಟ್ಟಿದ್ದಾರೆ ಎಂದು ಹೇಳಿದರು.
Advertisement
ಹೇಳಿಕೆ ಮರು ಪರಿಶೀಲನೆ: ಡಿಕೆಶಿಯಾರೋ ಒಬ್ಬರು ದೂರು ಕೊಟ್ಟ ತತ್‌ಕ್ಷಣ ಸಿಎಂಗೆ ಶೋಕಾಸ್ ನೋಟಿಸ್ ಕೊಟ್ಟರು. ನಮ್ಮ ಮಂತ್ರಿಪರಿಷತ್ ತಿರಸ್ಕರಿಸಿ ಎಂದು ಮನವಿ ಮಾಡಿದರೂ ಅಭಿಯೋಜನೆಗೆ ಕೊಟ್ಟಿದ್ದಾರೆ. ಯಾವುದಾದರೂ ತನಿಖೆ ಆಗಿ ವರದಿ ಬಂದಿದ್ದರೆ ಅದರ ಮೇಲೆ ಕೊಟ್ಟಿದ್ದರೆ ಬೇರೆ ವಿಚಾರ. 136 ಶಾಸಕರನ್ನು ಆಯ್ಕೆ ಮಾಡಿರುವ ಜನರು ಸರಕಾರವನ್ನು ಬಲಿಷ್ಠ ಮಾಡಿದ್ದಾರೆ. ಅಂತಹ ಸರಕಾರವನ್ನು ರಾಜ್ಯಪಾಲರು ರಕ್ಷಣೆ ಮಾಡಬೇಕು. ಅದರ ಬದಲು ಅಸ್ಥಿರಗೊಳಿಸುವ ಸಂಚು ನಡೆಯುತ್ತಿದೆ. ಮೂವರು ಮಾಜಿ ಸಚಿವರು, ಕೇಂದ್ರದ ಓರ್ವ ಹಾಲಿ ಸಚಿವರ ವಿರುದ್ಧ ತನಿಖೆಗೆ ಆದೇಶ ಆಗಿ ತನಿಖೆಯನ್ನೂ ಮಾಡಿ ಚಾರ್ಜ್‌ಶೀಟ್ ಸಲ್ಲಿಸಲು ಪಿಸಿ ಕಾಯ್ದೆ 17(ಎ), ಬಿಎನ್‌ಎಸ್ ಸೆಕ್ಷನ್ 218 ಅಡಿ ಎಸ್‌ಐಟಿ ಅನುಮತಿ ಕೇಳಿದೆ. ಅದನ್ನು ಪರಿಗಣಿಸುವಂತೆ ಕೇಳಿದ್ದೇವೆ. ನಮ್ಮ ಬಳಿ ಏನೂ ಇಲ್ಲ, ಡಿನ್ಪೋಸ್ ಮಾಡಿದ್ದೇವೆ ಎಂದಿದ್ದಾರೆ. ನಿಜವೂ ಸುಳ್ಳೋ ಎಂಬುದನ್ನು ನಮ್ಮದೇ ಕ್ರಮದಲ್ಲಿ ಮರುಪರಿಶೀಲನೆ ಮಾಡುತ್ತೇವೆ. ಒಳಗೆ ಏನು ಮಾತನಾಡಿದ್ದಾರೋ ಅದನ್ನೆಲ್ಲ ಬಹಿರಂಗ ಮಾಡಲಾಗದು ಎಂದು ಡಿ.ಕೆ. ಶಿವಕುಮಾರ್ ಹೇಳಿದರು.