Advertisement
ಗಮನ ಸೆಳೆಯುತ್ತಿದೆ: ಸಾಲಿಗ್ರಾಮ ತಾಲೂಕಿನ ಹೊಸೂರು ಗ್ರಾಮ ರಾಮನಾಥಪುರ ಮುಖ್ಯ ರಸ್ತೆಯಲ್ಲಿರುವ ದೊಡ್ಡಮ್ಮತಾಯಿ ನರ್ಸರಿ ಹಾಗೂ ಚಹಾದಂಗಡಿ ಮಾಲಿಕ ಎಚ್.ಎಸ್.ಜಲೇಂದ್ರ ಅವರೇ ಇಂತಹ ಬೋರ್ಡ್ ಹಾಕಿರುವವರಾಗಿದ್ದು ಅಂಗಡಿ ವ್ಯಾಪಾರ ಮಾಡುವುದರ ಜತೆಗೆ ಹಲವು ಗಲಾಟೆಗಳಿಗೆ ಕಾರಣವಾಗುವ ರಾಜಕೀಯ ವಿಚಾರಗಳನ್ನು ಕಡ್ಡಾಯವಾಗಿ ಮಾತನಾಡದಂತೆ ಅಂಗಡಿ ಮುಂಭಾಗದಲ್ಲಿ “ಸಾರ್ವಜನಿಕರು, ಗ್ರಾಹಕರಲ್ಲಿ ಮನವಿ. ಇಲ್ಲಿ ರಾಜಕೀಯ ಸುದ್ದಿ ಮಾತನಾಡಬೇಡಿ’ ಎಂಬ ಬೋರ್ಡ್ ನೇತು ಹಾಕಿದ್ದಾರೆ. ಈ ಬೋರ್ಡ್ ಈ ಭಾಗದಲ್ಲಿ ಸಂಚರಿಸುವವರ ಗಮನ ಸೆಳೆಯುತ್ತಿದೆ.
ಗ್ರಾಮೀಣ ಭಾಗದಲ್ಲಿ ಸಾರ್ವತ್ರಿಕ ಚುನಾವಣೆ ಸಮೀಪಿಸುತ್ತಿದ್ದಂತೆ ಮನೆ ಮುಂದಿನ ಜಗುಲಿ, ಅರಳಿಕಟ್ಟೆಗಳು, ಮದುವೆ ಮನೆಗಳು ರಾಜಕೀಯ ಚರ್ಚಾ ವೇದಿಕೆಗಳಾಗುತ್ತಿವೆ. ಇನ್ನು ಚಹಾದಂಗಡಿಗಳು ಮಾತ್ರ ಸೊಗಸಾದ ಚಹಾ ಸೇವಿಸುತ್ತಾ ಗುಂಪುಗೂಡಿ ಚರ್ಚಿಸುವ ಜನರ ಗುಂಪು ಸರ್ವೇ ಸಾಮಾನ್ಯ. ಆದರೆ, ಈ ಬೋರ್ಡ್ ಹಾಕಿರುವ ಇವರ ಅಂಗಡಿ ಮುಂದೆ ಚರ್ಚೆಗಳು ಹೆಚ್ಚಾಗಿ ತೀರಾ ವಿಕೋಪಕ್ಕೆ ಹೋದಂತಹ ಸಂದರ್ಭಗಳು ಇದ್ದು, ಇದರಿಂದ ತಮ್ಮ ವ್ಯಾಪಾರಕ್ಕೆ ಅಡಚಣೆ ಆಗಲಿದೆ. ಇದನ್ನು ತಪ್ಪಿಸಲು ಅಂಗಡಿ ಮುಂಭಾಗ ಬೋರ್ಡ್ ಹಾಕಲಾಗಿದೆ ಎಂದು ಮಾಲೀಕ ಜಲೇಂದ್ರ ಮಾಹಿತಿ ನೀಡಿದ್ದಾರೆ.
Related Articles
Advertisement
ಒಟ್ಟಾರೆ ತಮಗೆ ರಾಜಕೀಯವೋ, ಇಲ್ಲ ಯಾವುದೋ ವಿಚಾರವೋ ವ್ಯಾಪಾರವಾದರೆ ಸಾಕು ಎನ್ನುವ ಅಂಗಡಿಗಳ ಮಾಲಿಕರ ನಡುವೆ ರಾಜಕೀಯ ವಿಚಾರವನ್ನೇ ಮಾತನಾಡದಂತೆ ಬೋರ್ಡ್ ಹಾಕಿ ನಿರ್ಬಂಧ ಹಾಕಿರುವ ಜಲೇಂದ್ರ ಅವರ ಬಗ್ಗೆ ಸಾರ್ವಜನಿಕರು ಇದು ಉತ್ತಮ ಬೆಳವಣೆಗೆ ಎಂದು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಪರಸ್ಪರ ವಿಚಾರ ಕೆದಕಿದರೆ ಗಲಾಟೆ
ನಮ್ಮ ಅಂಗಡಿಗೆ ನಿತ್ಯ ನೂರಾರು ಜನರು ಬರುತ್ತಾರೆ. ಅವರು ವಿಶೇಷವಾಗಿ ಚುನಾವಣಾ ಸಂದರ್ಭದಲ್ಲಿ ಯಾವುದಾದರೊಂದು ಪಕ್ಷಗಳ ಕಾರ್ಯಕರ್ತರಾಗಿರು ತ್ತಾರೆ. ಅವರಿಗೆ ನಿತ್ಯ ತಮ್ಮ ನಾಯಕರ ವಿಚಾರವಾಗಿ ಮಾತನಾಡು ವಾಗ, ಉದ್ರೇಕದಿಂದ ಪರಿಸ್ಥಿತಿಗಳು ಕೈಮೀರಿ ಹೋಗುತ್ತವೆ. ಇದರಿಂದಾಗಿ ವ್ಯಾಪಾರಿಗಳು- ನಮ್ಮ ಸಂಬಂಧಕ್ಕೆ ಧಕ್ಕೆ ಆಗುತ್ತದೆ. ಹೀಗಾಗಿ ರಾಜಕೀಯ ವಿಚಾರ ಮಾತನಾಡದೇ ನೆಮ್ಮದಿಯಾಗಿ ನಮ್ಮ ಸೇವೆ ಪಡೆಯಲಿ, ಇದಕ್ಕೋಸ್ಕರ ನಾನು ಬೋರ್ಡ್ ಹಾಕಿದ್ದೇನೆಂದು ಹೊಸೂರು ಅಂಗಡಿ ಮಾಲಿಕ ಎಚ್.ಎಸ್.ಜಲೇಂದ್ರ ಮಾಹಿತಿ ನೀಡಿದ್ದಾರೆ.