Advertisement

ಕೊಂಕಣ ರೈಲ್ವೇ ವಿಲೀನ ಇಲ್ಲ; ಲೋಕಸಭೆಯಲ್ಲಿ ಮಾಹಿತಿ ನೀಡಿದ ಸರಕಾರ

02:18 AM Mar 24, 2022 | Team Udayavani |

ಹೊಸದಿಲ್ಲಿ: ಮಂಗಳೂರಿನಿಂದ ಮುಂಬಯಿಗೆ ಸಂಪರ್ಕ ಕಲ್ಪಿಸುವ ಕೊಂಕಣ ರೈಲ್ವೇಯನ್ನು ಭಾರತೀಯ ರೈಲ್ವೇ ಜತೆಗೆ ವಿಲೀನ ಮಾಡುವ ಪ್ರಸ್ತಾವ ಇಲ್ಲವೆಂದು ಕೇಂದ್ರ ಸರಕಾರ ಲೋಕಸಭೆಗೆ ತಿಳಿಸಿದೆ.

Advertisement

ಬುಧವಾರ ಪ್ರಶ್ನೋತ್ತರ ವೇಳೆಯಲ್ಲಿ ಕೇಂದ್ರ ರೈಲ್ವೇ ಖಾತೆ ಸಹಾಯಕ ಸಚಿವ ರಾವ್‌ ಸಾಹೇಬ್‌ ಪಾಟೀಲ್‌ ದನ್ವೆ ಈ ಮಾಹಿತಿ ನೀಡಿದ್ದಾರೆ.

“ಕೊಂಕಣ ರೈಲ್ವೇ ಕೇಂದ್ರ ಸರಕಾರದ ವ್ಯಾಪ್ತಿಯ ಒಂದು ಸಂಸ್ಥೆ. ಅದಕ್ಕೆ ಸರಕಾರ ಯಾವತ್ತೂ ನೆರವು ನೀಡುತ್ತದೆ. ಸದ್ಯದ ಮಟ್ಟಿಗೆ ಅದನ್ನು ಭಾರತೀಯ ರೈಲ್ವೇ ಜತೆಗೆ ವಿಲೀನಗೊಳಿಸುವ ಪ್ರಸ್ತಾವ ಇಲ್ಲ’ ಎಂದು ಹೇಳಿದ್ದಾರೆ.

741 ಕಿಲೋಮೀಟರ್‌ ಉದ್ದದ ಈ ರೈಲು ಮಾರ್ಗ ಕರ್ನಾಟಕ, ಗೋವಾ ಮತ್ತು ಮಹಾರಾಷ್ಟ್ರದ ಪಶ್ಚಿಮ ಕರಾವಳಿಯ ಮೂಲಕ ಹಾದು ಹೋಗುತ್ತದೆ.

ಕೊಂಕಣ ರೈಲ್ವೇಯನ್ನು ಭಾರತೀಯ ರೈಲ್ವೇಯಲ್ಲಿ ವಿಲೀನಗೊಳಿಸುವ ಬಗ್ಗೆ ಉಡುಪಿ-ಚಿಕ್ಕಮಗಳೂರು ಲೋಕಸಭಾ ಸದಸ್ಯೆ ಮತ್ತು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಖಾತೆ ಸಹಾಯಕ ಸಚಿವೆ ಶೋಭಾ ಕರಂದ್ಲಾಜೆ ಅವರು ಕೇಂದ್ರ ರೈಲ್ವೇ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿ‌ನಿ ವೈಷ್ಣವ್‌ ಅವರನ್ನು ಭೇಟಿ ಯಾಗಿ 2021ರ ಆಗಸ್ಟ್‌ನಲ್ಲಿ ಮನವಿ ಸಲ್ಲಿಸಿದ್ದರು.

Advertisement

ಇದನ್ನೂ ಓದಿ:ಮುಂಬೈ-ಅಹಮದಾಬಾದ್‌: ಬುಲೆಟ್‌ ರೈಲು ಯೋಜನೆಗೆ ಶೇ.89ರಷ್ಟು ಭೂಮಿ ಸ್ವಾಧೀನ: ಸಚಿವ ವೈಷ್ಣವ್

ಕೊಂಕಣ ರೈಲ್ವೇ ಕರಾವಳಿ ಕರ್ನಾಟಕದ ಆಶೋತ್ತರಗಳನ್ನು ಈಡೇರಿಸುವಲ್ಲಿ ವಿಫ‌ಲವಾಗಿದೆ, ಇತರ ರೈಲ್ವೇ ವಲಯಗಳಿಗೆ ಹೋಲಿಕೆ ಮಾಡಿದರೆ, ಕೊಂಕಣ ರೈಲ್ವೇ ಕರಾವಳಿ ಪ್ರದೇಶದ ಬೇಡಿಕೆ ಈಡೇರಿ ಸಲು ವಿಫ‌ಲವಾಗಿದೆ ಎಂದಿದ್ದರು. ರೈಲ್ವೇ ಬಳಕೆದಾರರೂ ಕೊಂಕಣ ರೈಲ್ವೇಯು ಕರಾವಳಿ ಪ್ರದೇಶದ ಆಶೋತ್ತರಗಳಿಗೆ ಸ್ಪಂದಿಸುತ್ತಿಲ್ಲ ಎಂದು ದೂರಿದ್ದರು.

ಕರ್ನಾಟಕ, ಕೇರಳ, ಗೋವಾ ಮತ್ತು ಮಹಾರಾಷ್ಟ್ರ ಸರಕಾರಗಳ ಸಹಭಾಗಿತ್ವದಲ್ಲಿ ಕೊಂಕಣ ರೈಲ್ವೇ ಅನ್ನು ಸ್ಥಾಪಿಸಲಾಗಿದೆ. ಇತ್ತೀಚಿನ ವರ್ಷಗಳಲ್ಲಿ ಅದು ಸಾಲದ ಸುಳಿಗೂ ಸಿಲುಕಿದೆ.

Advertisement

Udayavani is now on Telegram. Click here to join our channel and stay updated with the latest news.

Next