Advertisement
ಕೊರೊನಾ ಮಹಾಮಾರಿಯಿಂದ ಮಾರ್ಚ್ ನಲ್ಲಿ ವಿಧಿಸಲಾಗಿದ್ದ ಲಾಕ್‌ಡೌನ್ ನಿಮಿತ್ತ ಸಂವಾದಿತ ಸ್ಟೇಷನ್‌ಗಳನ್ನು ಸ್ಥಗಿತಗೊಳಿಸಲಾಗಿತ್ತು. ಸೋಮವಾರ ದಿಂದ ಎಲ್ಲ ಸಂವಾದಿತ ಸ್ಟೇಷನ್‌ಗಳು ಮತ್ತೆ ಪುನರಾರಂಭಗೊಂಡಿವೆ. ಆದರೆ ಕನ್ನಡ ಮತ್ತು ಸಿಂಧಿ ಭಾಷಾ ಕಾರ್ಯಕ್ರಮಗಳನ್ನು ಕೈಬಿಟ್ಟು ಉಳಿದ ಭಾಷೆಗಳನ್ನು ಪ್ರಾರಂಭಿಸಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.
ಏಳು ದಶಕಗಳಿಗಿಂತಲೂ ಹೆಚ್ಚು ಕಾಲದ ಇತಿಹಾಸ ಹೊಂದಿರುವ ಕನ್ನಡ ರೇಡಿಯೋ ಸ್ಟೇಷನ್‌ನಲ್ಲಿ ಒಂದು ಕಾಲದಲ್ಲಿ ದಿನಂಪ್ರತಿ ಪ್ರಸಾರ ವಾಗುತ್ತಿದ್ದ ಕಾರ್ಯಕ್ರಮಗಳು ಅನಂತರದ ದಿನಗಳಲ್ಲಿ ವಾರಕ್ಕೆ ಮೂರು ಸಲ, ಬಳಿಕ ವಾರಕ್ಕೆ ಎರಡು ಬಾರಿ, ಕ್ರಮೇಣ ಒಂದು ಗಂಟೆಗೆ ಇಳಿದರೆ, ಕೆಲವು ವರ್ಷಗಳಿಂದ ವಾರಕ್ಕೆ ಅರ್ಧ ಗಂಟೆಯ ಕಾರ್ಯಕ್ರಮಗಳು ಪ್ರಸಾರವಾಗುತ್ತಿದ್ದವು. ಪ್ರಸ್ತುತ ಅದನ್ನೂ ಸ್ಥಗಿತಗೊಳಿಸಿರುವುದು ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ. ಕನ್ನಡಿಗ ಅಧಿಕಾರಿಗಳು ಇಲ್ಲವಂತೆ…!
ಕಾರ್ಯಕ್ರಮ ವಿಭಾಗದಲ್ಲಿ ಕನ್ನಡ ಭಾಷೆಯ ಅರಿವಿರುವ ಅಧಿಕಾರಿಗಳು ಇಲ್ಲದ ಕಾರಣ ಕನ್ನಡ ರೇಡಿಯೋ ಸ್ಟೇಷನ್ ಮುಚ್ಚಲಾಗಿದೆ ಎಂದು ಮುಂಬಯಿ ಆಕಾಶವಾಣಿ ಅಧಿಕಾರಿಗಳು ತಿಳಿಸಿದ್ದಾರೆ. ಅವರ ಈ ಹೇಳಿಕೆ ಹಲವಾರು ಅನುಮಾನಗಳಿಗೆ ಕಾರಣವಾಗಿದೆ. ಯಾಕೆಂದರೆ ಈ ಹಿಂದೆ ಕನ್ನಡ ಬಾರದ ಅಧಿಕಾರಿಗಳು ಈ ವಿಭಾಗವನ್ನು ನೋಡಿಕೊಳ್ಳುತ್ತಿದ್ದ ನಿದರ್ಶನಗಳು ಹಲವಾರಿವೆ.
Related Articles
ಕನ್ನಡ ಕಾರ್ಯಕ್ರಮವನ್ನು ನಿಲ್ಲಿಸಿರುವ ಕುರಿತಂತೆ ಉದಯವಾಣಿ ಮುಂಬಯಿ ಆವೃತ್ತಿಯಲ್ಲಿ ಬುಧವಾರ ವರದಿ ಪ್ರಕಟವಾಗಿದ್ದು, ಕನ್ನಡಿಗರು ಆಕಾಶವಾಣಿಯ ನಿರ್ಧಾರ ಕುರಿತಂತೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಾಹಿತಿಗಳು, ರಾಜಕಾರಣಿಗಳು ಕೂಡ ಕನ್ನಡ ಕಾರ್ಯಕ್ರಮ ಪುನರಾರಂಭಕ್ಕೆ ಆಗ್ರಹಿಸಿದ್ದಾರೆ.
Advertisement
ಮುಂಬಯಿ ಆಕಾಶವಾಣಿಯಲ್ಲಿ ಪ್ರಸಾರವಾಗುತ್ತಿದ್ದ ಕನ್ನಡ ಕಾರ್ಯಕ್ರಮ ನಿಲ್ಲಿಸುತ್ತಿರುವ ವಿಚಾರ ಗಮನಕ್ಕೆ ಬಂದಿದೆ. ಅಧಿಕಾರಿಗಳ ಜತೆ ಚರ್ಚಿಸಿ ಕಾರ್ಯಕ್ರಮ ಪುನಾರಂಭಿಸಬೇಕೆಂದು ಒತ್ತಾಯಿಸುತ್ತೇನೆ. – ಸಿ.ಟಿ. ರವಿ, ಕನ್ನಡ ಮತ್ತು ಸಂಸ್ಕೃತಿ ಸಚಿವ