Advertisement
ಅಂತೂ ದಾಖಲೆಗಳು ಆಗುತ್ತಿಲ್ಲ. ಒಂದು ಆಸ್ಪತ್ರೆಯಲ್ಲಿ ಹಾಸಿಗೆ ಭರ್ತಿಯಾಗಿದೆ ಎಂದಾದ ಬಳಿಕ ಮತ್ತೂಂದು ಆಸ್ಪತ್ರೆ ಕಡೆಗೆ ಪ್ರಯಾಣ. ಆಸ್ಪತ್ರೆಗೆ ಸೇರಿಸಿದವರ ಹೆಸರು ಮನೆಯವರಿಗೆ ಗೊತ್ತಿಲ್ಲ, ಯಾವ ಆಸ್ಪತ್ರೆಯಲ್ಲಿ ಮನೆಯವರು ದಾಖಲಾಗಿದ್ದಾರೆ ಎಂಬುದೂ ನಿಗೂಢ. ಇದು ಸದ್ಯದ ಅಮೆರಿಕದಂತಹ ದೇಶದ ಸ್ಥಿತಿ. ಜಮೈಕಾದಲ್ಲಿ ವಾಸವಾಗಿದ್ದ ಮಾರಿಯಾ ಅವರ ಮನೆಗೆ ತುರ್ತು ವೈದ್ಯಕೀಯ ತಜ್ಞರು ಭೇಟಿ ನೀಡಿ, ಕೋವಿಡ್ 19 ಸೋಂಕಿನ ಲಕ್ಷಗಳು ಕಾಣಿಸಿಕೊಂಡಿದ್ದ ಹಿನ್ನೆಲೆಯಲ್ಲಿ ಹೋಂ ಕ್ವಾರಂಟೈನ್‌ನಲ್ಲಿಟ್ಟರು.
ಜಮೈಕಾ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರೆ ಅಲ್ಲಿರಬೇಕಿತ್ತು. ಯಾರು ಒಳಗೆ ಮತ್ತು ಹೊರಗೆ ಹೋಗುತ್ತಾರೆ ಎಂಬುದನ್ನು ತೋರಿಸುವ ಕೆಮರಾಗಳು ಅವರಲ್ಲಿ ಇಲ್ಲವೇ? ದಾಖಲಾಗಿರುವುದಕ್ಕೆ ಕಾಗದಪತ್ರಗಳಿಲ್ಲವೇ? ಎಂಬ ಪ್ರಶ್ನೆಗಳನ್ನು ಜನರು ಕೇಳುತ್ತಿದ್ದಾರೆ ಎಂದು ದಿ ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ. ಈ ಕುರಿತಾಗಿ ಆಸ್ಪತ್ರೆಯೂ ಆ ಹೆಸರಿನ ರೋಗಿ ನಮ್ಮಲ್ಲಿಲ್ಲ ಎಂದು ಪತ್ರಿಕೆಗೆ ತಿಳಿಸಿದೆ. ಹೌಸ್‌ಫುಲ್
ಕೋವಿಡ್ ವೈರಸ್ ಸಾಂಕ್ರಾಮಿಕ ಬಹುತೇಕ ನಗರದ ಆಸ್ಪತ್ರೆಗಳು ಮತ್ತು ತುರ್ತು ಪ್ರತಿಕ್ರಿಯೆ ವ್ಯವಸ್ಥೆಯನ್ನು ಹಿಂದೆಂದೂ ನೋಡಿರದ ರೀತಿಯಲ್ಲಿ ತುಂಬಿ ಹೋಗಿವೆ. ಅಲ್ಲಿನ ತುರ್ತು ಸೇವಾ ವಿಭಾಗ 911ಗೆ ಕರೆಗಳು ದಾಖಲೆಯ ಸಂಖ್ಯೆಯಲ್ಲಿ ಹರಿದು ಬರುತ್ತಿವೆ. ಬಹುತೇಕ ಆಸ್ಪತ್ರೆಗಳ ವೈದ್ಯರು ಮತ್ತು ದಾದಿಯರು ಅನಾರೋಗ್ಯಕ್ಕೆ ಒಳಗಾಗುತ್ತಿದ್ದಾರೆ. ಅಮೆರಿಕ ಮಾತ್ರ ಅಕ್ಷರಶಃ ಯುದ್ಧದ ಬಳಿಕದ ಸ್ಥಿತಿಯಂತಾಗಿದೆ.
Related Articles
ಮಾ. 30ರಂದು ಮಧ್ಯಾಹ್ನ 3 ಗಂಟೆಯ ಸುಮಾರಿಗೆ ಮರಿಯಾ ಅವರು ಕಣ್ಮರೆಯಾಗಿದ್ದಾರೆ ಎಂದು ಕುಟುಂಬಸ್ಥರು ದೂರು ನೀಡಿದ್ದಾರೆ. ವೈದ್ಯರು ಪರೀಕ್ಷೆಗೆ ಮನೆಗೆ ಬಂದಾಗ ಅವರು ದುಃಖಿಸುತ್ತಿದ್ದರು. ಏಕೆಂದರೆ ವಾರದ ಮೊದಲು, ಮರಿಯಾ ಅವರ ಸೊಸೆ ಅದೇ ಮನೆಯಲ್ಲಿ ಸೋಂಕಿತರಾಗಿ ಸಾವನ್ನಪ್ಪಿದ್ದರು. ಅವರು ಒಂದು ವಾರದಿಂದ ವಾಂತಿ ಮತ್ತು ಬಳಲಿಕೆಯಿಂದ ಬಳಲುತ್ತಿದ್ದರು. ಈಗ ಮನೆಯ ಎಲ್ಲಾ ಐವರು ಸದಸ್ಯರು ಅನಾರೋಗ್ಯಕ್ಕೆ ಒಳಗಾಗಿದ್ದಾರೆ. ಮರಿಯಾ ಆ ದಿನ ಬೆಳಗ್ಗೆ ವಿಪರೀತವಾದ ಕೆಮ್ಮಿನಿಂದ ಬಳಲಿದ್ದರು. ಅವರೂ ಮಧುಮೇಹ ಮತ್ತು ಕ್ಯಾನ್ಸರ್‌ನಿಂದ ಬಳಲುತ್ತಿದ್ದವರಾಗಿದ್ದರು.
ಮಿಸ್ ಮರಿಯಾರ ಮಗ ಜೂಲಿಯನ್ ಎಸ್ಕೋಬಾರ್ ತಾಯಿಯ ಪತ್ತೆಯಾಗದೇ ಇರುವ ಕಾರಣ ತುಂಬಾ ಆಘಾತಕ್ಕೆ ಒಳಗಾಗಿದ್ದಾರೆ. ಅವರು ವಾರದ ಮೊದಲು ಹೆಂಡತಿಯನ್ನು ಕಳೆದುಕೊಂಡಿದ್ದರು. ಈಗ ತನ್ನ ತಾಯಿಯನ್ನು ಕಳೆದುಕೊಂಡ ಭಯದಲ್ಲಿದ್ದಾರೆ.
Advertisement