Advertisement

ವಾಹನ ಚಾಲಕರ ಗಮನಕ್ಕೆ: ಮಂಗಳೂರಿನ 61 ಕಡೆಗಳಲ್ಲಿ ಇನ್ನು “ನೋ ಪಾರ್ಕಿಂಗ್‌ ವಲಯ’

10:28 PM Oct 01, 2020 | mahesh |

ಮಹಾನಗರ: ಮಂಗಳೂರು ನಗರದಲ್ಲಿ ಅವಶ್ಯವಿರುವ 61 ಕಡೆಗಳಲ್ಲಿ “ನೋ-ಪಾರ್ಕಿಂಗ್‌’ ವಲಯ ಎಂದು ಮಂಗಳೂರು ಪೊಲೀಸ್‌ ಆಯುಕ್ತ ವಿಕಾಸ್‌ ಕುಮಾರ್‌ ಅಧಿಸೂಚನೆ ಹೊರಡಿಸಿದ್ದಾರೆ.

Advertisement

ಸ್ಥಳಗಳ ವಿವರ
1. ಬಲ್ಮಠ ರಸ್ತೆಯಲ್ಲಿ ಬಲ್ಮಠ ವೃತ್ತದಿಂದ ರಸ್ತೆಯ ಎಡಬದಿಯಲ್ಲಿ, ಕ್ರಿಶ್ಚಿಯನ್‌ ಇನ್‌ಸ್ಟಿಟ್ಯೂಟ್‌ ದ್ವಾರದ ತನಕ.
2. ಬಲ್ಮಠ ರಸ್ತೆಯಲ್ಲಿ ಎಂಜೇಸ್‌ ಕಾಂಪ್ಲೆಕ್ಸ್‌ ನ ವೈನ್‌ಗೆàಟ್‌ನಿಂದ ಜ್ಯೂಸ್‌ ಜಂಕ್ಷನ್‌ ತಿರುವಿನಲ್ಲಿ ಮತ್ತು ಮುಂದುವರಿದು ಬ್ರಿಡ್ಜ್ ರಸ್ತೆಯ ಮೇಲ್ಸೆತುವೆಯವರೆಗಿನ ರಸ್ತೆಯವರೆಗೆ (ಎರಡು ಬದಿಗಳು).
3. ಬಲ್ಮಠ ರಸ್ತೆಯಲ್ಲಿ ನಾಯಕ್ಸ್‌ ಓಪ್ಟಿಕಲ್ಸ್‌ ನಿಂದ ಡಾ| ಅಂಬೇಡ್ಕರ್‌ ವೃತ್ತದ ತನಕ.
4. ಬಲ್ಮಠ ರಸ್ತೆಯ ಅಂಬೇಡ್ಕರ್‌ ವೃತ್ತ ದಿಂದ ಮಿಲಾಗ್ರಿಸ್‌ನ ಲಾರ್ಡ್‌ ಕೃಷ್ಣ ಬ್ಯಾಂಕ್‌ ತನಕದ ರಸ್ತೆ.
5. ಮಿಲಾಗ್ರಿಸ್‌ ಮಾನ್‌ಶನ್‌ ಕಟ್ಟಡದ ಬಲಬದಿ ಅಂಚಿನಿಂದ ಹಂಪನಕಟ್ಟೆ ವೃತ್ತದ ತನಕ ರಸ್ತೆಯವರೆಗೆ (ಎಡಬದಿ).
6. ಬಲ್ಮಠ ಜ್ಯೂಸ್‌ ಜಂಕ್ಷನ್‌ನಿಂದ ಬಲ್ಮಠ ವೃತ್ತದವರೆಗೆ (ಎಡಬದಿ).
7. ಫಳ್ನೀರ್‌ ರಸ್ತೆಯ ಅವೇರಿ ಬಸ್‌ ನಿಲ್ದಾಣದ ಎರಡೂ ಕಡೆಗೆ 30 ಮೀಟರ್‌ ಉದ್ದಕ್ಕೆ (ಬಸ್‌ ನಿಲ್ದಾಣದಲ್ಲಿ ನಿಲು ಗಡೆಗೆ ಅನುಮತಿ ಇರುವ ಬಸ್‌ಗಳ ಹೊರತಾಗಿ-ಎರಡು ಬದಿಗಳು).
8. ಬಿಕರ್ನಕಟ್ಟೆ ಬಾಲಯೇಸು ದೇವಾ ಲಯದ ಮುಖ್ಯದ್ವಾರದಿಂದ ಬಾಲಯೇಸು ದೇವಾಲಯದವರೆಗಿನ ರಸ್ತೆ (ಎಡಬದಿ).
9. ಪಾಲಿಕೆಯ ವಾರ್ಡ್‌ ನಂಬರ್‌ 38ರ ಕಲ್ಪನಾ ರಸ್ತೆಯ ಕರಾವಳಿ ವೃತ್ತದ ಕಡೆಯಿಂದ ವಾಸ್‌ಲೇನ್‌ ರಸ್ತೆಯವರೆಗೆ ಮತ್ತು ವಾಸ್‌ಲೇನ್‌ 1ನೇ ಅಡ್ಡರಸ್ತೆಯಿಂದ ಯುನಿಟಿ ಆಸ್ಪತ್ರೆಯವರೆಗೆ, ಕರಾವಳಿ ವೃತ್ತದಿಂದ ಎ.ಆರ್‌. ಡಿ’ಸೋಜಾ ಲೇನ್‌ ರಸ್ತೆಯಲ್ಲಿ ಮತ್ತು ಡೋಮಿನೋಸ್‌ ಪಿಜ್ಜಾ ಪರಿಸರ (ಎರಡು ಬದಿಗಳು).
10. ನಗರದ ಕರಾವಳಿ ಜಂಕ್ಷನ್‌ ಬಳಿಯ ಬಸ್‌ ಬೇ ಬಳಿಯಿಂದ ಪಂಪ್‌ವೆಲ್‌ ಜಂಕ್ಷನ್‌ ಕಡೆಗೆ ಹಾದು ಹೋಗುವ ರಸ್ತೆಯ ಎರಡು ಬದಿಗಳಲ್ಲಿ 100 ಮೀಟರ್‌ವರೆಗೆ.
11. ಕರಂಗಲ್ಪಾಡಿ ಸಿಜೆ ಕಾಮತ್‌ ಕ್ರಾಸ್‌ ರಸ್ತೆಯಿಂದ ತಂದೂರು ಬಾರ್‌ ಎದುರು ಶ್ರೀದೇವಿ ನರ್ಸಿಂಗ್‌ ಹೋಂ ಕಡೆಗೆ ಹೋಗುವ ಕ್ರಾಸ್‌ ರಸ್ತೆವರೆಗೆ (ಎಡಬದಿ).
12. ಕರಂಗಲ್ಪಾಡಿ ಮೇಡಿಕೇರ್‌ ಬಿಲ್ಡಿಂಗ್‌ ರಸ್ತೆಯಿಂದ ಕೋರ್ಟ್‌ ಕ್ರಾಸ್‌ ರಸ್ತೆಯವರೆಗೆ ಹಾದು ಹೋಗುವ ರಸ್ತೆಯ ಎಡ ಬದಿಯಲ್ಲಿ ಸುಮಾರು 100 ಮೀಟರ್‌ವರೆಗೆ ವಾಹನಗಳ ಪಾರ್ಕಿಂಗ್‌ಗೆ ಅವಕಾಶ ನೀಡಿ, ಈ ರಸ್ತೆಯ ಬಲಬದಿ ಸುಮಾರು 100 ಮೀಟರ್‌ “ನೋ ಪಾರ್ಕಿಂಗ್‌ ಝೋನ್‌’.
13. ಕರಂಗಲ್ಪಾಡಿ ಕೋರ್ಟ್‌ ಕ್ರಾಸ್‌ ರಸ್ತೆಯಿಂದ ಪಿವಿಎಸ್‌ ಬಸ್‌ ನಿಲ್ದಾಣದವರೆಗೆ ರಸ್ತೆಯ ಎರಡೂ ಬದಿಗಳು.
14. ಎ.ಬಿ. ಶೆಟ್ಟಿ ವೃತ್ತದ ಬಳಿಯ ಓಲ್‌ª ಕೆಂಟ್‌ ಕ್ರಾಸ್‌ ರಸ್ತೆಯಿಂದ ಕಾರ್ಪೋರೇಶನ್‌ ಬ್ಯಾಂಕ್‌ ಕಡೆಗೆ ಹಾದು ಹೋಗುವ ಸಾರ್ವಜನಿಕ ರಸ್ತೆ (ಎಡ ಬದಿ).
15. ಫಳ್ನೀರು, ಅವೇರಿ ಜಂಕ್ಷನ್‌ ಬಳಿಯ ಸ್ಟರಕ್‌ ರೋಡ್‌ ಕ್ರಾಸ್‌ ರಸ್ತೆಯಿಂದ ಹಂಪನಕಟ್ಟೆ ಅತ್ತಾವರ ಕ್ರಾಸ್‌ ವರೆಗೆ ರಸ್ತೆಯ ಎಡ ಬದಿ ಹಾದು ಹೋಗುವ ಸುಮಾರು 200 ಮೀ.ವರೆಗಿನ ಸಾರ್ವಜನಿಕ ರಸ್ತೆ (ಎಡ ಬದಿ).
16. ಕರಂಗಲ್ಪಾಡಿ ರಾಧಾ ಮೇಡಿಕಲ್ಸ್‌ ಎದುರಿನ ಕೋರ್ಟ್‌ ಕ್ರಾಸ್‌ ರಸ್ತೆಯ ಕಡೆಗೆ ಹಾದು ಹೋಗುವ ಸಾರ್ವಜನಿಕ ರಸ್ತೆ (ಎಡ ಬದಿ).
17. ಅಂಬೇಡ್ಕರ್‌ ಬಸ್‌ ಬೇ ಬಳಿಯ ಮೋಟಾರೋಲಾ ಹೆಲ್ಮೆಟ್‌ ಶಾಪ್‌ ಬಳಿಯಿಂದ ಬಲ್ಮಠ ಜ್ಯೂಸ್‌ ಜಂಕ್ಷನ್‌ವರೆಗಿನ 50 ಮೀಟರ್‌ವರೆಗಿನ ಸಾರ್ವಜನಿಕ ರಸ್ತೆಯಲ್ಲಿ ದ್ವಿಚಕ್ರ ವಾಹನಗಳ ಪಾರ್ಕಿಂಗ್‌ ಅವಕಾಶ ನೀಡಿದ್ದು, ಮ್ಯಾಪಲ್‌ ಶೋ ರೂಂ ಬಳಿಯಿಂದ ಮೋಟಾರೋಲಾ ಹೆಲ್ಮೆಟ್‌ ಶಾಫ್‌ವರೆಗೆ ಸುಮಾರು 60 ಮೀಟರ್‌ವರೆಗೆ ರಸ್ತೆ ನೋ ಪಾರ್ಕಿಂಗ್‌.
18. ಹಂಪನಕಟ್ಟೆ ಜಂಕ್ಷನ್‌ ವೆನ್ಲಾಕ್‌ ಆಸ್ಪತ್ರೆಯ ಓವರ್‌ ಬ್ರಿಡ್ಜ್ನಿಂದ ವೆನ್ಲಾಕ್‌ ಆಸ್ಪತ್ರೆಯ ಕಿರು ಗೇಟ್‌ವರೆಗೆ ಸುಮಾರು 25 ಮೀಟರ್‌, ಮುತ್ತಪ್ಪ ಗುಡಿ ಜಂಕ್ಷನ್‌ನಿಂದ ಹಂಪನಕಟ್ಟೆ ಜಂಕ್ಷನ್‌ ಕಡೆಗೆ ಹೋಗುವ ರಸ್ತೆಯ ಎಡಬದಿಯಲ್ಲಿ ವೆನ್ಲಾಕ್‌ ಆಸ್ಪತ್ರೆಯ ಬ್ರಿಡ್ಜ್ನಿಂದ ವೆನ್ಲಾಕ್‌ ಆಸ್ಪತ್ರೆಯ ಆಟೋರಿಕ್ಷಾ ಪಾರ್ಕಿಂಗ್‌ವರೆಗೆ ಸುಮಾರು 50 ಮೀಟರ್‌ ರಸ್ತೆ.

19. ಭಾರತೀಯ ಸ್ಟೇಟ್‌ಬ್ಯಾಂಕ್‌ ಪೋರ್ಟ್‌ ರೋಡ್‌ ರಸ್ತೆ ಇದರ ಕಟ್ಟಡದ ಮುಖ್ಯ ದ್ವಾರದಲ್ಲಿ ರಸ್ತೆಯ ಬದಿಯಲ್ಲಿ 100 ಅಡಿ, ಎಡಬದಿಯಲ್ಲಿ 30 ಅಡಿ ದೂರದ ವ್ಯಾಪ್ತಿ.
20. ಮಣ್ಣಗುಡ್ಡೆ ವಾರ್ಡ್‌ ನಂಬ್ರ 28ರ ಮುಖ್ಯ ರಸ್ತೆಯಲ್ಲಿ 2ನೇ, 3ನೇ ಅಡ್ಡ ರಸ್ತೆ (ಎರಡು ಬದಿಗಳು).
21. ಕೊಟ್ಟಾರ ಚೌಕಿ ಜಂಕ್ಷನ್‌ನಿಂದ ಕೋಡಿಕಲ್‌ ಕ್ರಾಸ್‌ವರೆಗೆ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ 66ರ 250 ಮೀ.ವರೆಗೆ ಸರ್ವೀಸ್‌ ರಸ್ತೆ (ಎರಡು ಬದಿಗಳು).
22. ಹ್ಯಾಮಿಲ್ಟನ್‌ ಸರ್ಕಲ್‌ನಲ್ಲಿರುವ ಸ್ವಾಗತ್‌ ಹೋಟೆಲ್‌ನಿಂದ ಜಿಲ್ಲಾಧಿಕಾರಿಯವರ ಕಚೇರಿ ಕಾಂಪೌಂಡ್‌ವರೆಗೆ ಹಾದು ಹೋಗುವ ಸಾರ್ವಜನಿಕ ರಸ್ತೆಯ ಎಡ ಬದಿಯ ಸುಮಾರು 40 ಮೀಟರ್‌ ಉದ್ದ, 1.829 ಮೀಟರ್‌ (6ಅಡಿ) ಅಗಲದ ಪ್ರದೇಶ.
23. ಕ್ಲಾಕ್‌ಟವರ್‌ನ ಹೊಟೇಲ್‌ ಸಾಯಿಕೃಪಾದಿಂದ ಕೆ.ಬಿ. ಕಟ್ಟೆ ಜಂಕ್ಷನ್‌ವರೆಗಿನ ರಸ್ತೆಯ ಎಡಪಾರ್ಶ್ವದಲ್ಲಿ ಸುಮಾರು 150 ಮೀಟರ್‌ ಉದ್ದ, 1.829 ಮೀಟರ್‌ (6ಅಡಿ) ಅಗಲದ ಪ್ರದೇಶ.
24. ಕೆ.ಬಿ. ಕಟ್ಟೆ ಜಂಕ್ಷನ್‌ನಿಂದ ಫೆಲಿಕ್ಸ್‌ ಪೈ ಬಜಾರ್‌ ಜಂಕ್ಷನ್‌ವರೆಗೆ ರಸ್ತೆಯ ಎಡ, ಬಲ ಪಾರ್ಶ್ವದಲ್ಲಿ ಸುಮಾರು 100 ಮೀಟರ್‌ ಉದ್ದದ ಪ್ರದೇಶ, ಇದೇ ರೀತಿ ಪಿ.ಎಂ. ರಾವ್‌ ರೋಡ್‌ ಜಂಕ್ಷನ್‌ನ ಶ್ರೀನಿವಾಸ್‌ ಹೊಟೇಲ್‌ ಬಳಿಯಿಂದ ಹೊಟೇಲ್‌ ವಿಮಲೇಶ್‌ ಜಂಕ್ಷನ್‌, ಶರವು ದೇವಸ್ಥಾನ ರಸ್ತೆ ಕ್ರಾಸ್‌ ತನಕ ಸುಮಾರು 75 ಮೀಟರ್‌ ರಸ್ತೆಯ ಎರಡೂ ಪಾರ್ಶ್ವಗಳು ನೋ ಪಾರ್ಕಿಂಗ್‌ ವಲಯ. ಫೆಲಿಕ್ಸ್‌ ಪೈ ಜಂಕ್ಷನ್‌ನಿಂದ ಗಣಪತಿ ಹೈಸ್ಕೂಲ್‌ವರೆಗಿನ ಮುಖ್ಯ ದ್ವಾರದವರೆಗೆ ರಸ್ತೆಯ ಎಡ ಪಾರ್ಶ್ವದಲ್ಲಿ ಸುಮಾರು 75 ಮೀಟರ್‌ ಪ್ರದೇಶ ನೋ ಪಾರ್ಕಿಂಗ್‌, ಬಲ ಪಾರ್ಶ್ವದಲ್ಲಿ ಸುಮಾರು 75 ಮೀಟರ್‌ ಪ್ರದೇಶವನ್ನು “ಸಮಾನಾಂತರ ಪಾರ್ಕಿಂಗ್‌’ ಎಂದು ಘೋಷಿಸಲಾಗಿದೆ.
25. ಹಂಪನ್‌ಕಟ್ಟೆ ಜಂಕ್ಷನ್‌ನಿಂದ ಕೆಎಸ್‌ಆರ್‌ ರಸ್ತೆಯಲ್ಲಿರುವ ಪಿ.ಎಂ ರಾವ್‌ ಕ್ರಾಸ್‌ ರಸ್ತೆಯವರೆಗೆ ರಸ್ತೆಯ ಎರಡೂ ಬದಿಗಳಲ್ಲಿ ಸುಮಾರು 100 ಮೀಟರ್‌ ಉದ್ದ, 1.829 ಮೀಟರ್‌ (6ಅಡಿ) ಅಗಲದ ಪ್ರದೇಶ.
26. ಕೆಎಸ್‌ಆರ್‌ ರಸ್ತೆಯ ಕರ್ನಾಟಕ ಬ್ಯಾಂಕ್‌ನಿಂದ ನವಭಾರತ್‌ ಸರ್ಕಲ್‌ವರೆಗೆ ರಸ್ತೆಯ (ಎರಡು ಪಾರ್ಶ್ವಗಳು).
27. ಪಿವಿಎಸ್‌ ವೃತ್ತದಲ್ಲಿರುವ ಸುಧೀಂದ್ರ ಸೂಪರ್‌ ಮಾರ್ಕೆಟ್‌ನಿಂದ ಮಾನಸ ಟವರ್‌ವರೆಗೆ ರಸ್ತೆ (ಎಡ ಪಾರ್ಶ್ವ).
28. ಎಂ.ಜಿ. ರಸ್ತೆಯ ಬೆಸೆಂಟ್‌ ಬಿಲ್ಡಿಂಗ್‌ನ ಹ್ಯಾಂಗ್ಯೋ ಐಸ್‌ಕ್ರೀಂ ಅಂಗಡಿಯಿಂದ ಕೊಡಿಯಾಲ್‌ಗ‌ುತ್ತು ಎಂಪಾಯರ್‌ ಮಾಲ್‌ವರೆಗೆ ರಸ್ತೆ (ಎರಡು ಪಾರ್ಶ್ವಗಳು).
29. ಲಾಲ್‌ಬಾಗ್‌ ಜಂಕ್ಷನ್‌ನಲ್ಲಿರುವ ರಾಮಕೃಷ್ಣ ವಿದ್ಯಾರ್ಥಿನಿ ನಿಲಯದ ಎದುರಿನ ಬಸ್‌ ನಿಲ್ದಾಣದಿಂದ ಕೆಎಸ್‌ಆರ್‌ಟಿಸಿ ಜಂಕ್ಷನ್‌ (ಬಿಗ್‌ಬಜಾರ್‌) ವರೆಗಿನ ರಸ್ತೆಯ (ಎಡ ಪಾರ್ಶ್ವ).
30. ಲಾಲ್‌ಬಾಗ್‌ ಜಂಕ್ಷನ್‌ನಲ್ಲಿರುವ ಸಾಯಿಬಿನ್‌ ಕಾಂಪ್ಲೆಕ್ಸ್‌ ಚಿಕನ್‌ ಟಿಕ್ಕಾ ಅಂಗಡಿಯ ಎದುರುಗಡೆಯಿಂದ “ಎಡ ತಿರುವು ಮುಕ್ತ’ವಾಗಿರುವ ರಸ್ತೆಯಲ್ಲಿ ನೆಹರೂ ಅವೆನ್ಯೂ ಜಂಕ್ಷನ್‌ವರೆಗೆ ರಸ್ತೆ (ಎಡ ಪಾರ್ಶ್ವ).
31. ಬಾಲಾಜಿ ಜಂಕ್ಷನ್‌ನಿಂದ ಲೋವರ್‌ ಕಾರ್‌ಸ್ಟ್ರೀಟ್‌ ಜಂಕ್ಷನ್‌ನಲ್ಲಿರುವ ಗಿರಿರಾಜ್‌ ಟವರ್‌ವರೆಗೆ ರಸ್ತೆಯ (ಎರಡು ಪಾರ್ಶ್ವಗಳು):
32. ಎಸ್‌.ಪಿ. ಸರ್ಕಲ್‌ನಿಂದ ಲೇಡಿಗೋಶನ್‌ ಮುಖ್ಯ ರಸ್ತೆವರೆಗೆ ಸಾಗಿರುವ ಅಡ್ಡ ರಸ್ತೆಯ (ಎಕಮುಖ ರಸ್ತೆಯ ಎರಡು ಪಾರ್ಶ್ವಗಳು).
33. ಲೇಡಿಗೋಶನ್‌ ಜಂಕ್ಷನ್‌ನಿಂದ ಸೆಂಟ್ರಲ್‌ ಮಾರ್ಕೆಟ್‌ ಬಳಿ ಇರುವ ಕಲ್ಪನಾ ಸ್ವೀಟ್ಸ್‌ ಅಂಗಡಿಯ ಎದುರು ರಸ್ತೆಯವರೆಗೆ (ಎಡ ಪಾರ್ಶ್ವ).
34. ಹ್ಯಾಮಿಲ್ಟನ್‌ ಜಂಕ್ಷನ್‌ನಿಂದ ಎ.ಬಿ. ಶೆಟ್ಟಿ ಕಡೆಗೆ ಹೋಗುವ ಹ್ಯಾಮಿಲ್ಟನ್‌ ಜಂಕ್ಷನ್‌ ಅಟೋ ಪಾರ್ಕ್‌ನಿಂದ ಎಸ್‌ಪಿ ಸರ್ಕಲ್‌ ಕ್ರಾಸ್‌ವರೆಗಿನ ರಸ್ತೆಯ ಎಡ ಪಾರ್ಶ್ವದಲ್ಲಿ ಸುಮಾರು 50 ಮೀಟರ್‌ ಉದ್ದದ ಪ್ರದೇಶ.
35. ದುರ್ಗಾಮಹಲ್‌ ಜಂಕ್ಷನ್‌ನಿಂದ ವೇರ್‌ಹೌಸ್‌ ಜಂಕ್ಷನ್‌ನವರೆಗೆ ಬಲ ಪಾರ್ಶ್ವದಲ್ಲಿ ಸುಮಾರು 300 ಮೀಟರ್‌ ಪ್ರದೇಶ. ಮಣ್ಣಗುಡ್ಡ ಒಂದನೇ ಕ್ರಾಸ್‌ನಿಂದ “ಕುಶೆ ಕುಂಜ’ ಅಪಾರ್ಟ್‌ಮೆಂಟ್‌ ಮುಖೇನ ಇನ್‌ಲ್ಯಾಂಡ್‌ ಎನ್‌ಕ್ಲೇವ್‌ವರೆಗಿನ ಸುಮಾರು 100 ಮೀಟರ್‌ ವೇರ್‌ ಹೌಸ್‌ ರಸ್ತೆಯ ಎರಡೂ ಪಾರ್ಶ್ವಗಳು ನೋ ಪಾರ್ಕಿಂಗ್‌, ಎಂ. ಲೋಕಯ್ಯ ಶೆಟ್ಟಿ ರಸ್ತೆಯ ದುರ್ಗಾಮಹಲ್‌ ಜಂಕ್ಷನ್‌ ಬಳಿಯ ದ.ಕ. ಜಿ.ಪಂ. ಸರಕಾರಿ ಶಾಲೆಯ ಮುಖ್ಯ ಗೇಟಿನ ಬಲ ಭಾಗದ ಕಾಂಪೌಂಡ್‌ನಿಂದ ವೇರ್‌ ಹೌಸ್‌ ಜಂಕ್ಷನ್‌ 1ನೇ ಕ್ರಾಸ್‌ “ಕುಶೆ ಕುಂಜ ಅಪಾರ್ಟ್‌ಮೆಂಟ್‌ ಕ್ರಾಸ್‌’ವರೆಗಿನ ರಸ್ತೆಯ ಎಡಪಾರ್ಶ್ವದಲ್ಲಿ ಸುಮಾರು 50 ಮೀಟರ್‌ ಅಂತರವನ್ನು ದ್ವಿಚಕ್ರ ವಾಹನಗಳ ಪಾರ್ಕಿಂಗ್‌ ಸ್ಥಳ, ವೇರ್‌ ಹೌಸ್‌ ಜಂಕ್ಷನ್‌ 1ನೇ ಕ್ರಾಸ್‌ ಕುಶೆ ಕುಂಜ ಅಪಾರ್ಟ್‌ಮೆಂಟ್‌ ಕ್ರಾಸ್‌ನಿಂದ ವೇರ್‌ ಹೌಸ್‌ ಜಂಕ್ಷನ್‌ ತನಕ ರಸ್ತೆಯ ಎಡ ಪಾರ್ಶ್ವದ ಸುಮಾರು 250 ಮೀಟರ್‌ ಅಂತರವನ್ನು “ಕಾರ್‌ ಪಾರ್ಕಿಂಗ್‌’ ಎಂದು ಘೋಷಿಸಲಾಗಿದೆ.
38. ಜೋಕಟ್ಟೆ ಜಂಕ್ಷನ್‌ನಿಂದ ಶಬರಿ ಗ್ಯಾರೇಜ್‌ವರೆಗಿನ ಡಾಮರು ರಸ್ತೆಯ ಎರಡು ಬದಿಗಳು.
39. ಡಿಕ್ಸಿ ಕ್ರಾಸ್‌ ರಸ್ತೆಯಿಂದ ಪಣಂಬೂರು ಬೀಚ್‌ವರೆಗಿನ ಕಾಂಕ್ರೀಟ್‌ ರಸ್ತೆಯ ಎರಡು ಬದಿಗಳು.
40. ದೀಪಕ್‌ ಪೆಟ್ರೋಲ್‌ ಬಂಕ್‌, ಪೆಟ್ರೋಲ್‌ ಬಂಕ್‌ನ ಎದುರುಗಡೆ ಎನ್‌.ಎಚ್‌. 66 ಡಾಮರು ರಸ್ತೆಯ ಎರಡು ಬದಿಗಳು.
41. ಬೈಕಂಪಾಡಿ ಪೇಟೆಯ ಮೀನಕಳಿಯ ಕ್ರಾಸಿನಿಂದ ಚಿತ್ರಾಪುರ ದ್ವಾರದವರೆಗಿನ ಎನ್‌.ಎಚ್‌. 66ರಲ್ಲಿ ಡಾಮರು ರಸ್ತೆಯ ಎರಡು ಬದಿಗಳು.
42. ಸುರತ್ಕಲ್‌ ಜಂಕ್ಷನ್‌ನಿಂದ ರೋ-ರೋ ಕ್ರಾಸ್‌ವರೆಗಿನ ಡಾಮರು ರಸ್ತೆಯ ಎರಡು ಬದಿಗಳು.
43. ರೋ-ರೋ ಕ್ರಾಸ್‌ನಿಂದ ಬಿಎಎಸ್‌ಎಫ್‌ ಕೆಮಿಕಲ್‌ ಇಂಡಸ್ಟ್ರೀಯಲ್‌ ಘಟಕದವರೆಗಿನ ಡಾಮಾರು ರಸ್ತೆಯ ಎರಡು ಬದಿಗಳು (ಕಿ.ಮೀ. ಉದ್ದ).
44. ಬಿಎಎಸ್‌ಎಫ್‌ ಕೆಮಿಕಲ್‌ ಇಂಡಸ್ಟ್ರೀಯಲ್‌ ಘಟಕದಿಂದ ಎಂಅರ್‌ಪಿಎಲ್‌ ಘಟಕದವರೆಗಿನ ಡಾಮಾರು ರಸ್ತೆಯ ಎರಡು ಬದಿಗಳು (1 ಕಿ.ಮೀ. ಉದ್ದ).
45. ಮೂಲ್ಕಿ ಜಂಕ್ಷನ್‌ನಿಂದ ಕಡವಿ ಬಾಗಿಲು ರಸ್ತೆಯನ್ನು ಸಂಧಿಸುವರೆಗಿನ ಬಪ್ಪ ಬ್ಯಾರಿ ರಸ್ತೆಯ (200 ಮೀ.)ಎರಡು ಬದಿಗಳು.
46. ಪೆರ್ಲಗುರಿ ಕ್ರಾಸ್‌ನಿಂದ ವಿಮಾನ ನಿಲ್ದಾಣದ ಕಡೆಗೆ ಕರ್ನಾಟಕ ಬ್ಯಾಂಕ್‌ವರೆಗೆ ಎರಡೂ ಬದಿಗಳು.
47. ಪದವಿನಂಗಡಿ ಯೂತ್‌ ಕ್ಲಬ್‌ನಿಂದ ಕೆ.ಪಿ.ಟಿ. ಕಡೆಗೆ ಮುಗ್ರೋಡಿ ಕ್ರಾಸ್‌ವರೆಗೆ (150 ಮೀ.) ಎರಡು ಬದಿಗಳು.
48. ಸುರತ್ಕಲ್‌ ಕೋರªಬ್ಬು ದೇವಸ್ಥಾನ ದ್ವಾರದಿಂದ ಶಾರದಾ ಲಾಡ್ಜ್ ಕ್ರಾಸ್‌ವರೆಗೆ (75 ಮೀ.-ಎರಡು ಬದಿಗಳು).
49. ಸುರತ್ಕಲ್‌ ಮಾರ್ಕೆಟ್‌ ಕ್ರಾಸ್‌ನಿಂದ ಸುರತ್ಕಲ್‌ ಚರ್ಚ್‌ ದ್ವಾರದವರೆಗೆ (200 ಮೀ.-ಎಡ ಬದಿ).
50. ಸುರತ್ಕಲ್‌ ಜಂಕ್ಷನ್‌ ಇಡ್ಯಾ ಕ್ರಾಸ್‌ನಿಂದ ಸುರತ್ಕಲ್‌ ಜಂಕ್ಷನ್‌ ಉಡುಪಿ ಸರ್ವಿಸ್‌ ಬಸ್‌ ನಿಲ್ದಾಣ (100 ಮೀ.-ಎಡ ಬದಿ).
51. ಸುರತ್ಕಲ್‌ ಸೂರಜ್‌ ಹೊಟೇಲ್‌ ಕ್ರಾಸ್‌ನಿಂದ ಸುರತ್ಕಲ್‌ ಜಂಕ್ಷನ್‌ವರೆಗಿನ ಸರ್ವೀಸ್‌ ರಸ್ತೆ (200 ಮೀ.-ಎರಡು ಬದಿಗಳು).
52. ಸುರತ್ಕಲ್‌ ಜಂಕ್ಷನ್‌ನಿಂದ ಗೋವಿಂದದಾಸ ಕಾಲೇಜುವರೆಗಿನ ಸರ್ವೀಸ್‌ ರಸ್ತೆ (200 ಮೀ.-ಎರಡು ಬದಿಗಳು).
53. ಕೂಳೂರು ಜಂಕ್ಷನ್‌ ಹತ್ತಿರದ ದೀಪಕ್‌ ಜನರಲ್‌ ಸ್ಟೋರ್ನಿಂದ ಕೂಳೂರು ಉಡುಪಿ ರಸ್ತೆ ಬಸ್‌ ಬೇ ವರೆಗೆ (150 ಮೀ.-ಎಡ ಬದಿ)
54. ಕೂಳೂರು ಅಯ್ಯಪ್ಪ ಗುಡಿಯ ಸರ್ವೀಸ್‌ ರಸ್ತೆಯಿಂದ ಕೂಳೂರು ಜಂಕ್ಷನ್‌ವರೆಗಿನ ಸರ್ವೀಸ್‌ ರಸ್ತೆ (200 ಮೀ.-ಎರಡು ಬದಿಗಳು)
55. ಕಾವೂರು ಕೋರªಬ್ಬು ದೇವಸ್ಥಾನದ ಎದುರು ರಸ್ತೆಯಿಂದ ಕಾವೂರು ಕೆ.ಇ.ಬಿ. ಗೇಟ್‌ವರೆಗಿನ ರಸ್ತೆಯ ಎಡಬದಿ, (ಸುಮಾರು 170 ಮೀಟರ್‌ವರೆಗೆ), ಸಪ್ತಗಿರಿ ಇಂಟರ್‌ನ್ಯಾಷನಲ್‌ ಹೊಟೇಲ್‌ನ ಮುಂಭಾಗದಲ್ಲಿ ಮತ್ತು ಕಾವೂರು ವೈನ್‌(ಸುಮಾರು 80 ಮೀಟರ್‌ವರೆಗೆ), ಕಾವೂರು ಜಂಕ್ಷನ್‌ನಿಂದ ಏರ್‌ಪೋರ್ಟ್‌ ಕಡೆಗೆ ಹೋಗುವ ಮಾರ್ಗದಲ್ಲಿ ಬಸ್‌ ನಿಲ್ದಾಣದಿಂದ ಮುಂದಕ್ಕೆ ಕೋರªಬ್ಬು ದೇವಸ್ಥಾನದ ಮುಖ್ಯ ದ್ವಾರದವರೆಗೆ (ಸುಮಾರು 80 ಮೀ.ವರೆಗೆ).
56. ಪಂಪ್‌ವೆಲ್‌ನ ಮಹಾವೀರ ವೃತ್ತದ ಅಯ್ಯಂಗಾರ್‌ ಬೇಕರಿಯಿಂದ ಪದ್ಮಶ್ರೀ ಹೊಟೇಲ್‌-ಮೀರಾ ಪ್ರಿಂಟರ್ ಕಡೆ ಹಾದು ಹೋಗುವ ರಸ್ತೆಯ ಎಡ ಅಂಚಿನ (ಸುಮಾರು 200 ಮೀ. ಉದ್ದ) ಪ್ರದೇಶ.
57. ಪಂಪ್‌ವೆಲ್‌ ಜಂಕ್ಷನ್‌ನ ಮಥುರಾ ಹೊಟೇಲ್‌ನಿಂದ ವೆಸ್ಟ್‌ ಗೇಟ್‌ ಬಿಲ್ಡಿಂಗ್‌ -ಎಂಬೇಜ್‌ ಫ್ಲಾಜದ ವರೆಗೆ ಹಾದು ಹೋಗುವ ರಸ್ತೆಯ ಎಡ ಅಂಚಿನಲ್ಲಿ ಸುಮಾರು 150 ಮೀ. ಉದ್ದದ ಪ್ರದೇಶ.
58. ಕಲ್ಲಾಪು ಯುನಿಟಿ ಹಾಲ್‌ನಿಂದ ಕಲ್ಲಾಪು ಜಂಕ್ಷನ್‌ವರೆಗೆ (200 ಮೀ.-ಬಲಬದಿ)
59. ದೇರಳಕಟ್ಟೆ ಯೇನಪೊಯ ಆಸ್ಪತ್ರೆಯ ಕಾಂಪೌಂಡ್‌ನಿಂದ ತಾಗಿ ರಸ್ತೆಯ ಎಡ ಅಂಚಿನಲ್ಲಿ ಸುಮಾರು 100 ಮೀ. ಉದ್ದದ ಪ್ರದೇಶ.
60. ದೇರಳಕಟ್ಟೆ ಕೆ.ಎಸ್‌. ಹೆಗ್ಡೆ ಆಸ್ಪತ್ರೆಯ ಶವಾಗಾರದ ಗೇಟ್‌ನಿಂದ ಶಾಂತಿ ಧಾಮ ಕಾನ್ವೆಂಟ್‌ಗೆ ಹೋಗುವ ರಸ್ತೆಯವರೆಗೆ ಸುಮಾರು 200 ಮೀ. ಉದ್ದದ ಪ್ರದೇಶ.
61. ಪದವಿನಂಗಡಿ ಜಂಕ್ಷನ್‌ ರಸ್ತೆಯ ವಿಶ್ವಗೀತಾ ಕಾಂಪ್ಲೆಕ್ಸ್‌ನಿಂದ ವಿನುಬಾರ್‌ ಆ್ಯಂಡ್‌ ರೆಸ್ಟೋರೆಂಟ್‌ ತನಕ ಸುಮಾರು 70 ಮೀಟರ್‌ ಉದ್ದದ ಪ್ರದೇಶ.

ಅಳಕೆ-ಕಾರ್‌ಸ್ಟ್ರೀಟ್‌; ಸಮ-ಬೆಸ ಸಂಖ್ಯೆಯಲ್ಲಿ ಪಾರ್ಕಿಂಗ್‌
ಅಳಕೆ ಸೇತುವೆ ಜಂಕ್ಷನ್‌ನಿಂದ ಬಾಲಾಜಿ ಜಂಕ್ಷನ್‌ವರೆಗೆ ರಸ್ತೆಯಲ್ಲಿ ಆಲ್ಟರ್‌ನೆàಟಿವ್‌ ಪಾರ್ಕಿಂಗ್‌ ಉದ್ದೇಶಿಸಲಾಗಿದೆ. ಸುಮಾರು 350 ಮೀಟರ್‌ ಉದ್ದ, 1.828 ಮೀಟರ್‌ (6ಅಡಿ) ಅಗಲದ ಪ್ರದೇಶವನ್ನು 8 ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ “ಆಲ್ಟರ್‌ನೆàಟಿವ್‌ ಪಾರ್ಕಿಂಗ್‌ ಝೋನ್‌’ ಎಂದು ಘೋಷಿಸಲಾಗಿದೆ. ಅಳಕೆ ಸೇತುವೆ ಜಂಕ್ಷನ್‌ನಿಂದ ಎಡ ಪಾರ್ಶ್ವವನ್ನು ಸಮ ಸಂಖ್ಯೆ ದಿನಾಂಕ ಪಾರ್ಕಿಂಗ್‌ ಎಂದೂ, ಬಲ ಪಾರ್ಶ್ವವನ್ನು “ಬೆಸ ಸಂಖ್ಯೆ ದಿನಾಂಕ ಪಾರ್ಕಿಂಗ್‌’ ಎಂದು ಘೋಷಿಸಲಾಗಿದೆ. ಬಾಲಾಜಿ ಜಂಕ್ಷನ್‌ನಿಂದ ವೆಂಟರಮಣ ದೇವಸ್ಥಾನದವರೆಗೆ ರಸ್ತೆಯಲ್ಲಿ ಆಲ್ಟರ್‌ನೆàಟಿವ್‌ ಪಾರ್ಕಿಂಗ್‌ ನಡೆಸಲಾಗುತ್ತದೆ. ಸುಮಾರು 200 ಮೀಟರ್‌ ಉದ್ದ, 1.828 ಮೀಟರ್‌ (6ಅಡಿ) ಅಗಲದ ಪ್ರದೇಶವನ್ನು ಬೆಳಗ್ಗೆ 8 ಗಂಟೆಯಿಂದ 9 ಗಂಟೆಯವರೆಗೆ “ಆಲ್ಟರ್‌ನೆàಟಿವ್‌ ಪಾರ್ಕಿಂಗ್‌ ಝೋನ್‌’ ಮಾಡಲಾಗಿದೆ. ಹೀಗಾಗಿ ಬಾಲಾಜಿ ಜಂಕ್ಷನ್‌ನಿಂದ ವೆಂಕಟ್ರಮಣ ದೇವಸ್ಥಾನದ ಕಡೆಗೆ ಬರುವ ರಸ್ತೆಯಲ್ಲಿ ಎಡ ಪಾರ್ಶ್ವವನ್ನು “ಸಮ ಸಂಖ್ಯೆ ದಿನಾಂಕ ಪಾರ್ಕಿಂಗ್‌’ ಎಂದೂ ಬಲ ಪಾರ್ಶ್ವವನ್ನು “ಬೆಸ ಸಂಖ್ಯೆ ದಿನಾಂಕ ಪಾರ್ಕಿಂಗ್‌’ ಎಂಬುದಾಗಿ ಘೋಷಿಸಲಾಗಿದೆ.

ಸರ್ವೆ ವರದಿ ಆಧಾರದಲ್ಲಿ ಆದೇಶ
ನಗರದಲ್ಲಿ ಅವಶ್ಯವಿರುವ 61 ಕಡೆಗಳಲ್ಲಿ “ನೋ ಪಾರ್ಕಿಂಗ್‌ ವಲಯ’ ಎಂಬುವುದಾಗಿ ಹೊಸದಾಗಿ ಅಧಿಸೂಚನೆ ಹೊರಡಿಸಲಾಗಿದೆ. ನಗರದ ವಿವಿಧ ಕಡೆಗಳಲ್ಲಿ ಸರ್ವೆ ಮಾಡಿ ಸ್ಥಳ ಗುರುತಿಸಿ ನೀಡಿದ ವರದಿಯಂತೆ ಆದೇಶ ಹೊರಡಿಸಲಾಗಿದೆ.
-ವಿಕಾಸ್‌ ಕುಮಾರ್‌, ಮಂಗಳೂರು ಪೊಲೀಸ್‌ ಆಯುಕ್ತರು

Advertisement
Advertisement

Udayavani is now on Telegram. Click here to join our channel and stay updated with the latest news.

Next