Advertisement

ಮೆಗ್ಗಾನ್ ಆಸ್ಪತ್ರೆಯಲ್ಲೂ ಆಕ್ಸಿಜನ್ ಬೆಡ್ ಅಭಾವ, ಬೋರ್ಡ್ ನೋಡಿ ಸೋಂಕಿತರಲ್ಲಿ ಆತಂಕ

02:25 PM May 06, 2021 | Team Udayavani |

ಶಿವಮೊಗ್ಗ: ರಾಜ್ಯದಲ್ಲಿ ಒಂದೆಡೆ ಆಕ್ಸಿಜನ್ ಕೊರತೆಯ ಭೀತಿಯಿದ್ದರೆ, ಮತ್ತೊಂದೆಡೆ ಸಿಎಂ ಯಡಿಯೂರಪ್ಪ ತವರು ಶಿವಮೊಗ್ಗದಲ್ಲಿ ಆಕ್ಸಿಜನ್ ಬೆಡ್ ಗಳಿಗೆ ಅಭಾವ ಉಂಟಾಗಿದೆ. ಜಿಲ್ಲಾಸ್ಪತ್ರೆ ಮೆಗ್ಗಾನ್ ಮುಂಭಾಗದಲ್ಲಿಆಕ್ಸಿಜನ್ ಬೆಡ್ ಇಲ್ಲ ಎಂದು ಬೋರ್ಡು ಹಾಕಲಾಗಿದ್ದು, ಜನರ ಆತಂಕಕ್ಕೆ ಕಾರಣವಾಗಿದೆ.

Advertisement

ಮೆಗ್ಗಾನ್ ಆಸ್ಪತ್ರೆಯಲ್ಲಿ 400 ಆಕ್ಸಿಜನ್ ಬೆಡ್ ಗಳಿವೆ.  ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ದಿನೇ ದಿನೆ ಹೆಚ್ಚಳವಾಗುತ್ತಿದೆ. ಇದರಿಂದ ಬೆಡ್ ಗಳು ಭರ್ತಿಯಾಗಿದ್ದು, ಆತಂಕ ಮೂಡಿಸಿದೆ. ಜಿಲ್ಲೆಯಲ್ಲಿ ಬೆಡ್ ಸಮಸ್ಯೆ ಇಲ್ಲ ಎಂದು ಜಿಲ್ಲಾಡಳಿತ, ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ, ಹೇಳುತ್ತಿದ್ದಾರೆ. ಆದರೆ ಆಕ್ಸಿಜನ್ ಬೆಡ್ ಕೊರತೆ ಎಂದು ಆಸ್ಪತ್ರೆ ಮುಂದೆ ಬೋರ್ಡ್ ಹಾಕಿರುವುದು ಸೋಂಕಿತರಲ್ಲಿ ಆತಂಕ ಮೂಡಿಸಿದೆ.

ಇದನ್ನೂ ಓದಿ:ಭದ್ರಾವತಿಯ ವಿಐಎಸ್ ಎಲ್ ಕಾರ್ಖಾನೆಗೆ ಶೆಟ್ಟರ್ ಭೇಟಿ: ಆಕ್ಸಿಜನ್ ಉತ್ಪಾದನೆ ಕುರಿತಂತೆ ಚರ್ಚೆ

ಆಕ್ಸಿಜನ್ ಪ್ರಮಾಣಕ್ಕೆ ತಕ್ಕಂತೆ ಬೆಡ್ ಗಳನ್ನು ವ್ಯವಸ್ಥೆ ಮಾಡಿಕೊಂಡಿದ್ದೇವೆ. ಅದಕ್ಕಿಂತಲೂ ಹೆಚ್ಚು ಬೆಡ್ ವ್ಯವಸ್ಥೆ ಮಾಡಿ, ಬಳಿಕ ಆಕ್ಸಿಜನ್ ಇಲ್ಲದೆ ಸೋಂಕಿತರು ನರಳುವುದು ಬೇಡ. ಸಂಜೆ ವೇಳೆಗೆ ಹೆಚ್ಚುವರಿ ಆಕ್ಸಿಜನ್, ಬಳಿಕ ಉಳಿದ ವ್ಯವಸ್ಥೆ ಮಾಡುವುದಾಗಿ ಮೆಗ್ಗಾನ್ ಆಸ್ಪತ್ರೆ ಅಧೀಕ್ಷಕ ಡಾ.ಶ್ರೀಧರ್ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next