ನವದೆಹಲಿ: “ದ ಕೇರಳ ಸ್ಟೋರಿ’ ಸಿನಿಮಾವನ್ನು ನಿಷೇಧ ಮಾಡುವ ಬಗ್ಗೆ ಅಥವಾ ಪ್ರದರ್ಶನ ಮಾಡದಂತೆ ಇರುವ ಆದೇಶ ನೀಡಲಾಗಿಲ್ಲ ಎಂದು ತಮಿಳುನಾಡು ಸರ್ಕಾರ ಮಂಗಳವಾರ ಸುಪ್ರೀಂಕೋರ್ಟ್‌ನಲ್ಲಿ ಅರಿಕೆ ಮಾಡಿಕೊಂಡಿದೆ.
ಸಿನಿಮಾ ನಿಷೇಧ ವಿರುದ್ಧ ಸಲ್ಲಿಕೆ ಮಾಡಲಾಗಿರುವ ಅರ್ಜಿಯ ವಿಚಾರಣೆ ವೇಳೆ ಹೆಚ್ಚುವರಿ ಅಡ್ವೊಕೇಟ್ ಜನರಲ್ ಅಮಿತ್ ಆನಂದ್ ತಿವಾರಿ ” ಮೇ 5ರಂದು ಸಿನಿಮಾ ಬಿಡುಗಡೆಯಾಗುತ್ತಿರುವಂತೆಯೇ ಅದರ ವಿರುದ್ಧ ಭಾರೀ ಟೀಕೆಗಳು ವ್ಯಕ್ತವಾಗಿದ್ದವು.
ಕೆಲವೊಂದು ಮುಸ್ಲಿಂ ಸಂಘಟನೆಗಳು ಸಮುದಾಯದ ವಿರುದ್ಧದ ಭಾವನೆಗಳನ್ನು ಅದರಲ್ಲಿ ವ್ಯಕ್ತಪಡಿಸಲಾಗಿದೆ ಎಂದು ಟೀಕಿಸಿದ್ದವು.
ಆದರೆ, ಅರ್ಜಿದಾರರು ಆರೋಪಿಸಿದಂತೆ ಸಿನಿಮಾ ಪ್ರದರ್ಶವನ್ನು ಪೂರ್ಣವಾಗಿ ಅಥವಾ ಆಂಶಿಕವಾಗಿ ಪ್ರದರ್ಶಿಸದಂತೆ ಯಾವುದೇ ಆದೇಶ ನೀಡಲಾಗಿಲ್ಲ ಎಂದು ತಮಿಳುನಾಡು ಸರ್ಕಾರ ಅರಿಕೆ ಮಾಡಿಕೊಂಡಿದೆ.