Advertisement

ಕ್ವಾರಂಟೈನ್‌ಗೆ ವಿರೋಧ ಬೇಡ

05:28 AM May 09, 2020 | Suhan S |

ನೆಲಮಂಗಲ: ವಿದೇಶದ ಕನ್ನಡಿಗರ ಕ್ವಾರಂಟೈನ್‌ಗೆ ವಿರೋಧ ವ್ಯಕ್ತಪಡಿಸುವುದು ಸರಿಯಲ್ಲ. ಎಲ್ಲ ಜಿಲ್ಲೆಯವರು ವಿರೋಧ ಮಾಡುತ್ತ ಹೋದರೆ ಎಲ್ಲಿ ಕ್ವಾರಂಟೈನ್‌ ಮಾಡುವುದು. ಈ ಬಗ್ಗೆ ಸರಕಾರ ಎಚ್ಚರಿಕೆ ವಹಿಸಿದೆ ಎಂದು ಮಾಜಿ ಸಚಿವ ಎಂಟಿಬಿ ನಾಗರಾಜು ತಿಳಿಸಿದರು.

Advertisement

ತಾಲೂಕಿನ ಗೊಲ್ಲಹಳ್ಳಿ ಗ್ರಾಪಂನ ಮೈಲನಹಳ್ಳಿ ಗ್ರಾಮದ 40 ಬಡ ಕೂಲಿ ಕಾರ್ಮಿಕರಿಗೆ ಆಹಾರ ಕಿಟ್‌ ನೀಡಿ ಮಾತನಾಡಿ, ಕೋವಿಡ್ ಸಂಕಷ್ಟದಲ್ಲಿರುವ ನಮ್ಮವರನ್ನು ನಾಡಿಗೆ ಕರೆತರುವ ಕೆಲಸವನ್ನು ಎಲ್ಲರೂ ಬೆಂಬಲಿಸಬೇಕು. ಜಿಲ್ಲೆಯ ದೇವನಹಳ್ಳಿಯಲ್ಲಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣವಿರುವುದ ರಿಂದ ಸುತ್ತಮುತ್ತಲ ತಾಲೂಕಿನಲ್ಲಿ ಕ್ವಾರಂಟೈನ್‌ ಮಾಡುವುದರ ಬಗ್ಗೆ ತಿಳಿಸಲಾಗಿದೆ ಎಂದರು.

ವಿರೋಧ: ತಮಗೆ ಬೇಕಿರುವವರಿಗೆ ಮಾತ್ರ ಕಿಟ್‌ ವಿತರಿಸಿದ ಎಂಬಿಟಿ ನಾಗರಾಜ ಅವರ ವರ್ತನೆಗೆ ಕೂಲಿ ಕಾರ್ಮಿಕರು ವಿರೋಧ ವ್ಯಕ್ತಪಡಿಸಿದರು. ನಿಜವಾಗಿಯೂ ನಮಗೆ ಕಿಟ್‌ ಅಗತ್ಯ ವಿದೆ. ಆದರೆ ತಮಗೆ ಬೇಕಾದವರಿಗೆ ಮಾತ್ರ ಕಿಟ್‌ ನೀಡಲಾಗುತ್ತಿದೆ ಎಂದು ವಿರೋಧ ವ್ಯಕ್ತಪಡಿಸಿದರು.

ಮಾಜಿ ಶಾಸಕ ಎಂ.ವಿ.ನಾಗರಾಜ, ಮುಖಂಡ ಭವಾನಿಶಂಕರ್‌ ಮಂಜು ನಾಥ್‌, ಗೊಲ್ಲಹಳ್ಳಿ ಗ್ರಾಪಂ ಮಾಜಿ ಸದಸ್ಯ ಪ್ರಶಾಂತ್‌, ನಟರಾಜು, ಸಿದ್ಧಗಂಗಪ್ಪ, ಮುಖಂಡ ರಂಗನಾಥ್‌, ಮಾರುತಿ, ಆನಂದ್‌, ಅಂಜನಮೂರ್ತಿ, ರಘು,ಸೋಮಶೇಖರ್‌, ಮಂಜೇಶ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next