Advertisement

ಆಪರೇಷನ್‌ ಮಾಡಿಲ್ಲ, ಅವರಾಗೇ ಬಂದರು

11:15 PM Dec 07, 2019 | Team Udayavani |

ಮುಧೋಳ: ನಮ್ಮ ಪಕ್ಷದಿಂದ ಯಾವುದೇ ರೀತಿಯ ಆಪರೇಷನ್‌ ನಡೆದಿಲ್ಲ. ಶಾಸಕರನ್ನು ಸರಿಯಾಗಿ ನೋಡಿಕೊಳ್ಳದ ಕಾರಣ ಅವರು ಪಕ್ಷ ಬಿಟ್ಟು ಬಂದಿದ್ದು, ಸಿದ್ದರಾಮಯ್ಯನವರು ಇದನ್ನರಿತು ಮಾತನಾಡಬೇಕು ಎಂದು ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಹೇಳಿದರು. ಯಡಹಳ್ಳಿಯ ಶಿವಲಿಂಗಪ್ಪ ಬಸಪ್ಪ ಹೊರಟ್ಟಿ ಪಬ್ಲಿಕ್‌ ಶಾಲೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.

Advertisement

ರಾಜ್ಯದಲ್ಲಿ ಜೆಡಿಎಸ್‌-ಕಾಂಗ್ರೆಸ್‌ ಸಾಧನೆ ಕೀಳುಮಟ್ಟದಲ್ಲಿರುವುದರಿಂದ ಅವರು ಮೈ ಪರಚಿಕೊಳ್ಳುವ ಕೆಲಸ ಮಾಡುತ್ತಿದ್ದಾರೆ ಎಂದರು. ಉಪಚುನಾವಣೆಯಲ್ಲಿ ಎಲ್ಲಾ ಕ್ಷೇತ್ರಗಳಲ್ಲಿ ನಮ್ಮ ಪಕ್ಷದ ಅಭ್ಯರ್ಥಿಗಳೇ ಜಯಗಳಿಸಲಿದ್ದು, ಮುಂದಿನ ಮೂರೂವರೆ ವರ್ಷ ಬಿಜೆಪಿ ಸರ್ಕಾರ ಸುಭದ್ರ ಆಡಳಿತ ನೀಡಲಿದೆ. ನಮ್ಮ ಸರ್ಕಾರಕ್ಕೆ ಹಿಂದೆ ಮೂರು ತಿಂಗಳು ಕಷ್ಟದ ಕಾಲ ಎದುರಾಗಿತ್ತು. ಆಗ ಪ್ರವಾಹ ಪರಿಸ್ಥಿತಿಯನ್ನು ಯಶಸ್ವಿಯಾಗಿ ಎದುರಿಸಲಾಗಿದ್ದು, ಎಲ್ಲಾ ಸಂತ್ರಸ್ತರಿಗೆ ಪರಿಹಾರ ನೀಡಲಾಗಿದೆ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next