Advertisement

ಕೇರಳ ಸಿಎಂ ಭಾಗವಹಿಸುವ ಸಭೆ-ಸಮಾರಂಭಗಳಲ್ಲಿ ಕಪ್ಪು ಬಟ್ಟೆ, ಕಪ್ಪು ಮಾಸ್ಕ್ ನಿಷೇಧ !

09:15 PM Jun 13, 2022 | Team Udayavani |

ತಿರುವನಂತಪುರ: ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಭಾಗವಹಿಸುವ ಯಾವುದೇ ಸಭೆ- ಸಮಾರಂಭಗಳಲ್ಲಿ ಕಪ್ಪುಬಟ್ಟೆ, ಕಪ್ಪು ಮಾಸ್ಕ್ ಗಳನ್ನು ನಿಷೇಧಿಸಲಾಗಿದೆ. ಅದರ ವಿರುದ್ಧ ರಾಜ್ಯದಲ್ಲಿ ವ್ಯಾಪಕ ಅಸಮಾಧಾನ ಭುಗಿಲೆದ್ದಿದೆ.

Advertisement

ಚಿನ್ನ ಕಳ್ಳಸಾಗಾಣಿಕೆ ಪ್ರಕರಣದಲ್ಲಿ ಸಿಎಂ ಪಿಣರಾಯಿ ಅವರ ಪಾತ್ರವಿದೆ ಎಂದು ಆ ಪ್ರಕರಣದ ಆರೋಪಿ ಸ್ವಪ್ನಾ ಸುರೇಶ್‌ ಆರೋಪಿಸಿದ ಬೆನ್ನಲ್ಲೇ ಅಲ್ಲಿ ಪ್ರತಿಭಟನೆಗಳು ನಡೆಯುತ್ತಿವೆ. ಇದರ ಬೆನ್ನಲ್ಲೇ ಕಪ್ಪುಬಟ್ಟೆ, ಕಪ್ಪು ಬಣ್ಣದ ಮಾಸ್ಕ್ ನಿಷೇಧಗೊಳಿಸಿ ಆದೇಶ ಜಾರಿಯಾಗಿದೆ.

ವಿವಾದಕ್ಕೆ ಸಮಜಾಯಿಷಿ ನೀಡಿ, ಕಣ್ಣೂರಿನಲ್ಲಿ ಮಾತನಾಡಿದ ಮುಖ್ಯಮಂತ್ರಿ ಕಪ್ಪು ಬಟ್ಟೆ, ಕಪ್ಪು ಮಾಸ್ಕ್ ನಿಷೇಧಿಸಿಲ್ಲ. ನಾವು ಜನರ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಗೌರವಿಸುತ್ತೇವೆ ಎಂದಿದ್ದಾರೆ. ಆದರೂ, ಪ್ರತಿಭಟನಾ ಸ್ಥಳಗಳಲ್ಲಿ ಕಪ್ಪು ಬಟ್ಟೆ, ಕಪ್ಪು ಮಾಸ್ಕ್ ಹಾಕಿದ್ದವರನ್ನು ಆ ಸ್ಥಳದಿಂದ ಹೊರಹಾಕಲಾಗುತ್ತಿದೆ ಎಂದರು.

ಇದನ್ನೂ ಓದಿ :ಪದವೀಧರ-ಶಿಕ್ಷಕರ ಕ್ಷೇತ್ರ: ವಿಧಾನ ಪರಿಷತ್‌ ಚುನಾವಣೆ; ಶೇ.73.25 ಮತದಾನ

ವಿಮಾನದಲ್ಲಿ ಪ್ರತಿಭಟನೆ!
ಕಣ್ಣೂರಿನಿಂದ ತಿರುವನಂತಪುರಕ್ಕೆ ತೆರಳಲು ಮುಖ್ಯಮಂತ್ರಿ ವಿಮಾನವನ್ನು ಏರುತ್ತಿದ್ದಂತೆಯೇ ಯುವ ಕಾಂಗ್ರೆಸ್‌ ಕಾರ್ಯಕರ್ತರು ಅವರ ವಿರುದ್ಧ ಕಪ್ಪು ಬಟ್ಟೆ ಪ್ರದರ್ಶಿಸಿದ್ದಾರೆ ಮತ್ತು ಘೋಷಣೆ ಕೂಗಿದ್ದಾರೆ. ಅವರು ಪ್ರಯಾಣಿಕರ ಸೋಗಿನಲ್ಲಿ ಆಗಮಿಸಿದ್ದರು. ಸಿಎಂ ವಿಜಯನ್‌ ಜೊತೆಗಿದ್ದ ಎಲ್‌ಡಿಎಫ್ ಸಂಚಾಲಕ ಇ.ಪಿ. ಜಯರಾಜನ್‌, ಪ್ರತಿಭಟನಾಕಾರರನ್ನು ತಳ್ಳಿ, ಮುಖ್ಯಮಂತ್ರಿಯವರನ್ನು ಕರೆದುಕೊಂಡು ಅವರ ಆಸನದ ಬಳಿ ಸಾಗಿದರು. ಮೂರು ನಿಮಿಷದ ಈ ವಿಡಿಯೋ ಕ್ಲಿಪ್‌ ಅನ್ನು, ಕೇರಳ ಯುವ ಕಾಂಗ್ರೆಸ್‌ ಉಪಾಧ್ಯಕ್ಷ ಕೆ.ಎಸ್‌. ಶಬರಿನಾಥನ್‌ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next